ಘಟಪ್ರಭಾ:ಹುಣಶ್ಯಾಳ ಪಿಜಿಯ ಶ್ರೀ ಸಿದ್ಧಲಿಂಗ ಕೈವಲ್ಯಾಶ್ರಮವು ಅನೇಕ ವೈಶಿಷ್ಟಗಳ ಸಂಗಮವಾಗಿದೆ.-ಶ್ರೀಶೈಲ ಜಗದ್ಗುರುಗಳು
ಹುಣಶ್ಯಾಳ ಪಿಜಿಯ ಶ್ರೀ ಸಿದ್ಧಲಿಂಗ ಕೈವಲ್ಯಾಶ್ರಮವು ಅನೇಕ ವೈಶಿಷ್ಟಗಳ ಸಂಗಮವಾಗಿದೆ.-ಶ್ರೀಶೈಲ ಜಗದ್ಗುರುಗಳು
ಸಾಧನ ಸಂಭ್ರಮದಲ್ಲಿ ನಿಜಗುಣ ದೇವರಿಗೆ ಸಾಹಿತ್ಯ ಶಿಖರ ಪ್ರಶಸ್ತಿ ಪ್ರಧಾನ
ಘಟಪ್ರಭಾ ಜ 2 : ಸಮೀಪದ ಸುಕ್ಷೇತ್ರ ಹುಣಶ್ಯಾಳ ಪಿಜಿಯ ಶ್ರೀ ಸಿದ್ಧಲಿಂಗ ಕೈವಲ್ಯಾಶ್ರಮದ ಅಧಿಪತಿ ಶ್ರೀ ನಿಜಗುಣ ದೇವರಿಗೆ “ಸಾಹಿತ್ಯ ಶಿಖರ” ಪ್ರಶಸ್ತಿಯನ್ನು ಕಟಕೋಳ ಎಂ.ಚಂದರಗಿ ಹಿರೇಮಠದ ವೀರಭದ್ರ ಶಿವಯೋಗಿ ಮಹಾಸ್ವಾಮಿಜಿ ಅವರು ಶ್ರೀಶೈಲ ಜಗದ್ಗುರು ಡಾ| ಚನ್ನಸಿದ್ಧರಾಮ ಪಂಡಿತಾರಾಧ್ಯ ಶಿವಾಚಾರ್ಯ ಮಹಾಸ್ವಾಮಿಜಿಯವರ ದಿವ್ಯ ಸಾನಿಧ್ಯದಲ್ಲಿ ನೀಡಿ ಗೌರವಿಸಲಾಯಿತು.
ಅವರು ಮಂಗಳವಾರದಂದು ಶ್ರೀ ನಿಜಗುಣ ದೇವರ 25 ವರ್ಷದ ಸಾಧನ ಸಂಭ್ರಮದ ಸಮಾರಂಭದಲ್ಲಿ ಸಂಜೆ ನಡೆದ ತತ್ವಾಮೃತ ಕಾರ್ಯಕ್ರಮದಲ್ಲಿ ಈ ಪ್ರಶಸ್ತಿ ನೀಡಿ ಮಾತನಾಡಿ ವರ್ತಮಾನಗಳೆರಡರಲ್ಲೂ ನಿರಂತರ ಜನಮಾನಸವನ್ನು ಸೆಳೆದ,ಸೆಳೆಯುತ್ತಿರುವ ಗ್ರಾಮ ಹುಣಶ್ಯಾಳ ಪಿಜಿಯ ಶ್ರೀ ಸಿದ್ಧಲಿಂಗ ಕೈವಲ್ಯಾಶ್ರಮವಾಗಿದೆ. ಪುಣ್ಯಕ್ಷೇತ್ರ,ಅಧ್ಯಾತ್ಮದ ಜಾಗೃತಿತಾಣ. ಶ್ರೀಮಠದ ನಿಜಗುಣ ದೇವರು ಅನೇಕ ವೈಶಿಷ್ಟಗಳ ಸಂಗಮವಾಗಿದ್ದಾರೆ. ಅಧ್ಯಾತ್ಮಿಕ ಸಾಧನೆಯ ಜೊತೆಗೆ ಸಾಮಾಜಿಕ ಮತ್ತು ಸಾಂಸ್ಕøತಿಕ ಕಾಳಜಿಗೆ ಬದ್ಧರಾಗಿರುವ ಕಾಯಕಯೋಗಿ.ನಿಲುವು ಕಾರ್ಯಸಿದ್ಧಿಯಲ್ಲಿ ಅವರದೇ ಆದ ವೈಶಿಷ್ಟತೆಯನ್ನು ಮೂಡಿಸಿರುವ ಪರಂಪರೆಯ ಮತ್ತೊಂದು ಸಾಲು ದೀಪ ಇವರದಾಗಿದೆ.ಘಟದಿಂದ ಮಠ ಎನ್ನುವ ಹಾಗೇ ನೋಡನೋಡುತ್ತಲೇ ಶ್ರೀಮಠವು ಬೃಹತ್ ಆಕಾರದಲ್ಲಿ ಬೆಳೆಯಿತು.ಸಾಹಿತಿಗಳು, ಸಾಮಾಜಿಕ,ಶೈಕ್ಷಣಿಕವಾಗಿ ಅನೇಕ ಮಹತ್ತರ ಕೊಡುಗೆಯನ್ನು ನೀಡಿದ ಮಹಾಯೋಗಿಯವರು ಎಂದು ಹೇಳಿದರು.
ಈ ಸಂದರ್ಭದಲ್ಲಿ ಹುಕ್ಕೇರಿಯ ಶ್ರೀ ಚಂದ್ರಶೇಖರ ಶಿವಾಚಾರ್ಯ ಮಹಾಸ್ವಾಮಿಜಿ, ಗದಗಿನ ಜಗದ್ಗುರು ಪೂಜ್ಯ ಅಭಿನವ ಶ್ರೀ ಶಿವಾನಂದ ಮಹಾಸ್ವಾಮಿಜಿ, ಚಿತ್ರದುರ್ಗದ ಕಭೀರಾನಂದಾಶ್ರಮದ ಶಿವಲಿಂಗಾನಂದ ಮಹಾಸ್ವಾಮಿಜಿ, ಬಾಗೋಜಿಕೊಪ್ಪ,ಪಾಶ್ಚಾಪೂರ, ತುಂಗಳ ಸೇರಿದಂತೆ ಅನೇಕ ಮಹಾತ್ಮರು ಉಪಸ್ಥಿತರಿದ್ದರು.