RNI NO. KARKAN/2006/27779|Tuesday, November 5, 2024
You are here: Home » breaking news » ಘಟಪ್ರಭಾ:ವ್ಯಕ್ತಿ,ಮುಕ್ತಿ ಪಡೆಯಬೇಕಾದರೆ ಜ್ಞಾನಬೇಕು : ಪೂಜ್ಯ ಶ್ರೀ ಜಗದ್ಗುರು ನಿರ್ಮಲಾನಂದ ಮಹಾಸ್ವಾಮಿಜಿ

ಘಟಪ್ರಭಾ:ವ್ಯಕ್ತಿ,ಮುಕ್ತಿ ಪಡೆಯಬೇಕಾದರೆ ಜ್ಞಾನಬೇಕು : ಪೂಜ್ಯ ಶ್ರೀ ಜಗದ್ಗುರು ನಿರ್ಮಲಾನಂದ ಮಹಾಸ್ವಾಮಿಜಿ 

ವ್ಯಕ್ತಿ,ಮುಕ್ತಿ ಪಡೆಯಬೇಕಾದರೆ ಜ್ಞಾನಬೇಕು : ಪೂಜ್ಯ ಶ್ರೀ ಜಗದ್ಗುರು ನಿರ್ಮಲಾನಂದ ಮಹಾಸ್ವಾಮಿಜಿ

ಘಟಪ್ರಭಾ ಜ 3 : ಜ್ಞಾನ ಮತ್ತು ಮುಕ್ತಿ ಪಡೆಯಬೇಕಾದರೆ ಗುರು ಮುಖ್ಯವಾಗಿದ್ದಾನೆ. ವ್ಯಕ್ತಿ,ಮುಕ್ತಿ ಪಡೆಯಬೇಕಾದರೆ ಜ್ಞಾನಬೇಕು ಎಂದು ಆದಿಚುಂಚನಗಿರಿಯ ಪೂಜ್ಯ ಶ್ರೀ ಜಗದ್ಗುರು ನಿರ್ಮಲಾನಂದ ಮಹಾಸ್ವಾಮಿಜಿ ಹೇಳಿದರು.
ಅವರು ಗುರುವಾರದಂದು ಸಮೀಪದ ಹುಣಶ್ಯಾಳ ಪಿಜಿಯ ಶ್ರೀ ಸಿದ್ಧಲಿಂಗ ಕೈವಲ್ಯಾಶ್ರಮದಲ್ಲಿ ಶ್ರೀ ನಿಜಗುಣ ದೇವರ 25ನೇ ವರ್ಷದ ಸಾಧನ ಸಂಭ್ರಮ ಸಮಾರಂಭದ ತತ್ವಾಮೃತ ಕಾರ್ಯಕ್ರಮನ್ನುದ್ದೇಶಿಸಿ ಮಾತನಾಡಿದರು.ಸಂತರು ಇದ್ದಲ್ಲಿ ಸಂತಸ ಇರುತ್ತದೆ. ಸಂಪತ್ತು ಇದ್ದಲ್ಲಿ ಸಂತಾಪ ಇರುತ್ತದೆ. ನಿಜವಾದ ಸಂಪತ್ತು, ಸಂತಸ ಸಿಗುವುದು ಗುರವಿನಲ್ಲಿ ಮಾತ್ರ. ಉತ್ತರ ಕರ್ನಾಟಕದಲ್ಲಿ ಸಂತರು, ಮಠಾಧೀಶರು ಅಧಿಕವಾಗಿದ್ದಾರೆ. ಅದು ನಮ್ಮ ನಾಡಿನ ಹೆಮ್ಮೆಯಾಗಿದೆ. ಅಧ್ಯಾತ್ಮಿಕವಾಗಿ ಸಾಧನೆ ಮಾಡಬೇಕಾದರೂ ಸಹ ಜ್ಞಾನ ಅತ್ಯಂತ ಅವಶ್ಯವಾಗಿದೆ. ಈ ಭಾಗದ ಭಕ್ತರಿಗೆ ಶ್ರೀ ನಿಜಗುಣ ದೇವರು ದೇವ ರೂಪದಲ್ಲಿ ಗುರುಗಳಾಗಿ ಬಂದು ಶ್ರೀಮಠದಲ್ಲಿ ಅನ್ನದಾಸೋಹದ ಜೊತೆಗೆ ಜ್ಞಾನ ದಾಸೋಹವನ್ನು ನೀಡಿ ಭಕ್ತರ ಹಾಗೂ ಜನರ ಮನಸ್ಸುಗಳಿಸಿಕೊಂಡಿದ್ದಾರೆ. ಈ ಸಮಾರಂಭದಲ್ಲಿ ನಾಡಿನ ಶ್ರೇಷ್ಠ ಸಂತರು, ಮಹಾತ್ಮರು, ಅನುಭಾವಿಗಳು ಆಗಮಿಸಿದ್ದು ಅವರ ದರ್ಶನ ಪಡೆದು ಅವರ ಮಾತುಗಳನ್ನು ಕೇಳುವುದೇ ಪುಣ್ಯ ಎಂದರು.
ಸಾನಿಧ್ಯವನ್ನು ಧಾರವಾಡದ ಮುರಘಾಮಠದ ಶ್ರೀ ಮಲ್ಲಿಕಾರ್ಜುನ ಮಹಾಸ್ವಾಮಿಜಿ ಮಾತನಾಡಿ ಸದಾ ಹಸನ್ಮುಖಿಗಳಾಗಿ,ತಾಯಿಹೃದಯದ ನಿಜಗುಣ ದೇವರು ಶ್ರೀಮಠದ ಭಕ್ತರ ಪಾಲಿಗೆ ನೀತಿಯ ಗುರುಗಳಾಗಿ ನೀತಿಯ ವ್ಯಕ್ತಿತ್ವವನ್ನು ತಿಳಿಸಿಕೊಟ್ಟಿದ್ದಾರೆ. ಗುರುವಿನಲ್ಲಿ ಕರುಣಿಯಿದ್ದರೆ ಮಾತ್ರ ಗುರುವಾಗಲು ಸಾಧ್ಯವಾಗುತ್ತದೆ ಎಂದರು.
ಹುಕ್ಕೇರಿಯ ಪೂಜ್ಯ ಶ್ರೀ ಚಂದ್ರಶೇಖರ ಶಿವಾಚಾರ್ಯ ಮಹಾಸ್ವಾಮಿಜಿಯವರು ಮಾತನಾಡಿ ಭಗವಂತನ ಸ್ಮರಣೆ ಅಗತ್ಯವಾಗಿದೆ. ಗುರುವಿನ ಮತ್ತು ಶಿಷ್ಯನ ಸಂಬಂಧ ಅಪಾರವಾದದ್ದು ಆದ್ದರಿಂದ ನಿಜಗುಣ ದೇವರು ಗುರುವಿನ ಕೃಪಾ ಆಶೀರ್ವಾದದಿಂದ ಶ್ರೀಮಠವು ಸಮಾಜಸೇವೆ ಹಾಗೂ ಧಾರ್ಮಿಕ ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳುವ ಮೂಲಕ ಉತ್ತಂಗಕ್ಕೆ ಒಯ್ಯುತ್ತಿದ್ದಾರೆ. ಘಟದಿಂದ ಮಠ ಬೆಳೆಯುವುದಕ್ಕೆ ಶ್ರೀಮಠವೇ ನಿದರ್ಶನವಾಗಿದೆ. ಶ್ರೀಮಠಕ್ಕೆ ನಾಡಿನ ಹಲವಾರು ಮಠಾಧೀಶರು ಆಗಮಿಸುತ್ತಿರುವುದು ಶ್ರೀ ನಿಜಗುಣ ದೇವರ ಕಾರ್ಯ ಮತ್ತು ಲಕ್ಷಾಂತರ ಭಕ್ತರೇ ಸಾಕ್ಷಿಯಾಗಿದ್ದಾರೆ.
ಘನ ಅಧ್ಯಕ್ಷತೆಯನ್ನು ಬೈಲಹೊಂಗಲದ ಮೂರುಸಾವಿರಮಠದ ಶ್ರೀ ಪ್ರಭುನೀಲಕಂಠ ಮಹಾಸ್ವಾಮಿಜಿ, ಹುಬ್ಬಳಿಯ ಶ್ರೀ ಅಭಿನವ ಸಿದ್ದಾರೂಢರು, ಶಿರೋಳದ ಶ್ರೀ ಶಂಕರಾರೂಢರು, ಜಮಖಂಡಿಯ ಶ್ರೀ ಕೃಷ್ಣಾನಂದ, ಶರಣಬಸವದೇವರು ಬೆಳವಿ, ಮಾಜಿ ಸಚಿವರು,ರಾಜ್ಯೋತ್ಸವ ಪ್ರಶಸ್ತಿ ಪುರಸ್ಕøತ ಶಿವಾನಂದ ಕೌಜಲಗಿ, ಹುಕ್ಕೇರಿಯ ಶಿವಬಸವ ಕುಂದರಗಿಯ ಶ್ರೀ ಅಮರಸಿದ್ದೇಶ್ವರ ಮಹಾಸ್ವಾಮಿಜಿ, ಬೀದರಿನ ಗಣಪತಿ ಮಹಾರಾಜರು, ತೊಂಡಿಕಟ್ಟಿಯ ಅಭಿನವ ವೆಂಕಟೇಶ ಮಹಾರಾಜರು, ಬೀದರನ ಮಾತೋಶ್ರೀ ಸಿದ್ದೇಶ್ವರ ತಾಯಿಯವರು, ತುಂಗಳದ ಮಾತೋಶ್ರೀ ಅನುಸೂಯಾ ತಾಯಿ, ಸದಾನಂದ ಸ್ವಾಮಿಜಿ ಸಸ್ತಾಪೂರ, ಕೀರ್ತನ ಕಲಾಕುಶಲ ಶ್ರೀ ಗುರುನಾಥ ಶಾಸ್ತ್ರೀ ಕರಿಕಟ್ಟಿ ಸೇರಿದಂತೆ ಇತರರು ಇದ್ದರು.
ಇದೇ ಸಂದರ್ಭದಲ್ಲಿ ಶ್ರೀ ನಿಜಗುಣ ದೇವರ 25ನೇ ವರ್ಷದ ಸಾಧನ ಸಂಭ್ರಮದ ನಿಮಿತ್ಯ ಶ್ರೀ ನಿಜಗುಣ ದೇವರಿಗೆ ಆದಿಚುಂಚನಗಿರಿಯ ಪೂಜ್ಯ ಶ್ರೀ ಜಗದ್ಗುರು ನಿರ್ಮಲಾನಂದ ಮಹಾಸ್ವಾಮಿಜಿಯವರು,ಹುಕ್ಕೇರಿಯ ಶ್ರೀ ಚಂದ್ರಶೇಖರ ಶಿವಾಚಾರ್ಯ ಸ್ವಾಮಿಜಿಯವರು ಸೇರಿದಂತೆ ನಾಡಿನ ಹಲವಾರು ಮಠಾಧೀಶರು ಸನ್ಮಾನಿಸಿ ಗೌರವಿಸಿದರು.
ಶ್ರೀಮಠದ ಪೀಠಾಧಿಕಾರಿ ಪೂಜ್ಯ ಶ್ರೀ ನಿಜಗುಣ ದೇವರಿಗೆ ಭಕ್ತರಿಂದ ತುಲಾಭಾರ ಸೇವೆ ಜರುಗಿತು.

Related posts: