RNI NO. KARKAN/2006/27779|Sunday, January 19, 2025
You are here: Home » breaking news » ಮೂಡಲಗಿ:ಮಗುವಿನ ಸರ್ವತೋಮುಖ ಬೆಳವಣಿಗೆಯಲ್ಲಿ ಶಿಕ್ಷಕರ ಪಾತ್ರ ಮಹತ್ವದ್ದಾಗಿದೆ : ಎಮ್ ಜಿ ದಾಸರ

ಮೂಡಲಗಿ:ಮಗುವಿನ ಸರ್ವತೋಮುಖ ಬೆಳವಣಿಗೆಯಲ್ಲಿ ಶಿಕ್ಷಕರ ಪಾತ್ರ ಮಹತ್ವದ್ದಾಗಿದೆ : ಎಮ್ ಜಿ ದಾಸರ 

ಮಗುವಿನ ಸರ್ವತೋಮುಖ ಬೆಳವಣಿಗೆಯಲ್ಲಿ ಶಿಕ್ಷಕರ ಪಾತ್ರ ಮಹತ್ವದ್ದಾಗಿದೆ : ಎಮ್ ಜಿ ದಾಸರ

ಮೂಡಲಗಿ ಜ 13 : ಪ್ರತಿ ಮಗುವಿನಲ್ಲಿ ತನ್ನದೆಯಾದ ಪ್ರತಿಭೆ ಇರುವದರಿಂದ ಶಿಕ್ಷಕ ಸಮುದಾಯ ಮಗುವಿನ ಪ್ರತಿಭೆಗೆ ಸೂಕ್ತ ರೀತಿಯಲ್ಲಿ ಮಾರ್ಗದರ್ಶನ ನೀಡುವ ಮೂಲಕ ಮಗುವಿನ ಸರ್ವತೋಮುಖ ಬೆಳವಣಿಗೆಯಲ್ಲಿ ಶಿಕ್ಷಕರ ಪಾತ್ರ ಮಹತ್ವದ್ದಾಗಿದೆ ಎಂದು ಚಿಕ್ಕೋಡಿ ಡಿ.ಡಿ.ಪಿ.ಐ ಎಮ್ ಜಿ ದಾಸರ ಹೇಳಿದರು.

ಅವರು ಸಮೀಪದ ಗುರ್ಲಾಪೂರದ ಶಾಸಕರ ಮಾದರಿ ಶಾಲೆ, ಸರಕಾರಿ ಪ್ರೌಢ ಶಾಲೆ ಹಾಗೂ ಪ್ರೌಢ ಶಾಲಾ ಶಿಕ್ಷಕರ ಸಹಕಾರಿ ಪತ್ತಿನ ಸಂಘದ ಆಶ್ರಯದಲ್ಲಿ ಹಮ್ಮಿಕೊಂಡ ಮೂಡಲಗಿ ತಾಲೂಕಾ ಮಟ್ಟದ ಪ್ರೌಢ ಶಾಲಾ ಶಿಕ್ಷಕರಿಗೆ ವಿಷಯ ಸಂಪಧೀಕರಣ ಕಾರ್ಯಾಗಾರ ಉದ್ಘಾಟಿಸಿ ಮಾತನಾಡಿದರು. ವಿದ್ಯಾರ್ಥಿಗಳಿಗೆ ವಿದ್ಯಾರ್ಜನೆಯ ಜೊತೆಯಲ್ಲಿ ಸಾಮಾಜಿಕವಾಗಿ ಬೆಳೆಯುವ ನಿಟ್ಟಿನಲ್ಲಿ ಸಹಾಯಕವಾಗುವ ಕಾರ್ಯಚಟುವಟಿಕೆಗಳ ಕುರಿತು ಮನವರಿಕೆ ಮಾಡಿಕೊಡಬೇಕು. ಮೂಡಲಗಿ ವಲಯ ರಾಜ್ಯದಲ್ಲಿಯೇ ವಿನೂತನ ಶೈಕ್ಷಣಿಕ ಕಾರ್ಯಚಟುವಟಿಕೆಗಳಲ್ಲಿ ತನ್ನದೆಯಾದ ಹಿರಿಮೆ ಗರಿಮೆಯನ್ನು ಹೊಂದಿದ್ದು, ಪ್ರಾಥಮಿಕ ಹಂತದಿಂದ ಪ್ರೌಢ ಹಂತದವರೆಗೆ ವಿವಿಧ ಶೈಕ್ಷಣಿಕ ಆಯಾಮಗಳಲ್ಲಿ ತನ್ನ ಛಾಪನ್ನು ಮೂಡಿಸಿದೆ.
ಪ್ರೌಢ ಹಂತದಲ್ಲಿ ಆರು ವಿಷಯಗಳ ಕುರಿತು ಕಾರ್ಯಾಗಾರದಲ್ಲಿ ಜರುಗುವ ಕ್ಲೀಷ್ಠಾಂಶಗಳನ್ನು ಚರ್ಚಿಸಿ ಸೂಕ್ತ ರೀತಿಯಲ್ಲಿ ಮಕ್ಕಳಿಗೆ ತಿಳಿಯುವ ಹಾಗೆ ಮನವರಿಕೆ ಮಾಡಿಕೊಡಬೇಕು. ಮಕ್ಕಳಿಗೆ ಗುಂಪು ಅಧ್ಯಯನ ಹಿರೆಮಣಿ ಪದ್ದತಿ, ಪಿಕ್ನಿಕ್ ಪಝಲ್, ಸ್ವಅಧ್ಯಯನ ಹಾಗೂ ವಿವಿಧ ಕಲಿಕಾ ಸಾಧನಗಳ ಮೂಲಕ ಅವರ ಜ್ಞಾನಾರ್ಜನೆ ಮಟ್ಟವನ್ನು ಹೆಚ್ಚಿಸಬೇಕು. ಅಂಕಗಳಿಗೆ ಸೀಮಿತಗೋಳಿಸದೆ ಕಲಿಕೆಯ ಜೊತೆಯಲ್ಲಿ ಸಾಮಾನ್ಯ ತಿಳುವಳಿಕೆ ಮಟ್ಟವನ್ನು ಹೆಚ್ಚಿಸಲು ಶಿಕ್ಷಕರು ಪಾಲಕರು ಶ್ರಮಿಸಬೇಕೆಂದು ಹೇಳಿದರು.
ಇದೇ ಸಂದರ್ಭದಲ್ಲಿ ಬೆಳಗಾವಿ ಜಿ.ಪಂ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿ ಆರ್ ರಾಮಚಂದ್ರನ್ ಸಂಚಾರಿ ದೂರವಾಣಿ ಮೂಲಕ ಮಾತನಾಡಿ, ಮೂಡಲಗಿ ವಲಯ ಚಿಕ್ಕೋಡಿ ಶೈಕ್ಷಣಿಕ ಜಿಲ್ಲೆಯಲ್ಲಿ ಅಷ್ಟೇ ಅಲ್ಲದೆ ರಾಜ್ಯದಲ್ಲಿಯೇ ಶೈಕ್ಷಣಿಕವಾಗಿ ಗುರುತಿಸುವಂತಾಗಿದೆ. ವಲಯದ ಶಿಕ್ಷಕ ಸಮುದಾಯದ ನಿರಂತರ ಹಾಗೂ ಅವಿರತ ಪ್ರಯತ್ನದ ಫಲವಾಗಿ ಹೆಮ್ಮರವಾಗಿ ಬೆಳೆದಿದ್ದು, ಇಲ್ಲಿಯ ಶಿಕ್ಷಕರು ಹಿರಿಯ ಹಾಗೂ ಮೇಲಾಧಿಕಾರಿಗಳ ಮಾರ್ಗದರ್ಶನದ ಫಲವಾಗಿ ಸಾಧನೆಯ ಶಿಖರವನ್ನೇರಿದ್ದು ಪ್ರಸಕ್ತ ಸಾಲಿನಲ್ಲಿ ಮೂಡಲಗಿ ವಲಯ ಉನ್ನತ ಸ್ಥಾನದಲ್ಲಿರಲೆಂದು ಶುಭ ಹಾರೈಸಿ ಬೆಳಗಾವಿ ಜಿಲ್ಲೆ ವ್ಯಾಪ್ತಿಯಲ್ಲಿ ಎಲ್ಲರೂ ಇಂತಹ ನಿರಂತರ ಶ್ರಮದ ಮೂಲಕ ವಿದ್ಯಾರ್ಥಿಗಳ ಸೇವಾ ಭಾಗ್ಯದಲ್ಲಿ ಪಾಲ್ಗೋಳ್ಳಲು ಕರೆ ನೀಡಿದರು.
ಪ್ರಾಸ್ತಾವಿಕವಾಗಿ ಮಾತನಾಡಿದ ಬಿ.ಇ.ಒ ಎ.ಸಿ ಮನ್ನಿಕೇರಿ, ವಲಯದ ಎಲ್ಲ ವಿಷಯಗಳ ಶಿಕ್ಷಕರು ಒಂದೇಡೆ ಸೇರಿ ನೂರಿತ ಹಾಗೂ ಅನುಭವಿ ಶಿಕ್ಷಕರಿಂದ ಇನ್ನೂ ಹೆಚ್ಚಿನ ಬೋಧನಾ ಕ್ಷಮತೆಯನ್ನು ಹೆಚ್ಚಿಸುವ ಕುರಿತಾದ ಕಾರ್ಯವಾಗಿದೆ. ಬೋಧನಾವಧಿಯಲ್ಲಿ ಶಿಕ್ಷಕರಿಗಾಗುವ ತೊಂದರೆಗಳು ಹಾಗೂ ತಮ್ಮಲ್ಲಿ ರೂಡಿಸಿಕೊಂಡಿರುವ ಹೊಸ ಕಲಿಕಾ ವಿಧಾನಗಳ ಪರಸ್ಪರ ಹಂಚಿಕೆ ಮತ್ತು ಸ್ವೀಕಾರ ಮಾಡಿಕೊಳ್ಳುವ ಮೂಲಕ ಕಾರ್ಯಾಗಾರದ ಸದುಪಯೋಗ ಪಡೆದುಕೊಳ್ಳಲು ತಿಳಿಸಿದರು.
ಕಾರ್ಯಕ್ರಮದಲ್ಲಿ ಇ.ಸಿ.ಒ ಟಿ. ಕರಿಬಸವರಾಜ, ಪ್ರೌಢ ಶಾಲಾ ಶಿಕ್ಷಕರ ಸಂಘದ ಅದ್ಯಕ್ಷ ಎಸ್.ಐ ಬಾಗೋಜಿ, ಪ್ರಧಾನ ಗುರುಮಾತೆ ಗೀತಾ ಕರಗಣ್ಣಿ, ಬಿ.ಆರ್.ಪಿ ಕೆ.ಎಲ್ ಮೀಶಿ, ಎಮ್.ಎಮ್ ದಬಾಡಿ, ರಮೇಶ ಬುದ್ನಿ, ಪುರಸಭೆ ಸದಸ್ಯ ಆನಂದ ಟಪಾಲದಾರ, ಎಸ್.ಡಿ.ಎಮ್.ಸಿಯ ಸದಸ್ಯರಾದ ಶಿವಬಸು ದೇವರಮನಿ, ಪುಂಡಲೀಕ ಗೌರಾಣಿ, ಭೀಮಪ್ಪ ಮುಗಳಖೋಡ, ಮಹಾದೇವಿ ಟಪಾಲದಾರ, ರಾಮಪ್ಪ ಮುಗಳಖೋಡ, ಭೀಮಶಿ ದೇವರಮನಿ, ಸಿದ್ದಪ್ಪ ಮುಗಳಖೋಡ, ಹಾಲಪ್ಪ ಹಳ್ಳೂರ, ಪ್ರಕಾಶ ಮುಗಳಖೋಡ, ಶಾಸಕರ ಮಾದರಿ ಶಾಲೆಯ ಅಧ್ಯಕ್ಷ ಎಲ್.ಪಿ ನೇಮಗೌಡರ, ಈರಪ್ಪ ರಂಗಾಪೂರ, ಸುರೇಶ ಬಂಡಿವಡ್ಡರ, ಗುರಪ್ಪ ತೇಲಿ, ಪ್ರಧಾನ ಗುರು ಎಮ್ ಮಂಜುನಾಥ ಹಾಗೂ ವಲಯ ವ್ಯಾಪ್ತಿ ವಿಷಯವಾರು ಶಿಕ್ಷಕರು ಹಾಜರಿದ್ದರು.
ಸಮಾರಂಭದಲ್ಲಿ ಎಸ್.ಕೆ ಹಳದಕ್ಕಿ ನಿರೂಪಿಸಿದರು. ಎಸ್ ಎಸ್ ಹೊನಕಾಂಡೆ ಸ್ವಾಗತಿಸಿ ಎ.ಡಿ ಕಬ್ಬೂರೆ ವಂದನಾರ್ಪನೆ ಮಾಡಿದರು.

Related posts: