ಗೋಕಾಕ:ರಾಷ್ಟ್ರೀಯ ಯುವ ದಿನ ಮತ್ತು ಯುವ ಸಪ್ತಾಹ ಕಾರ್ಯಕ್ರಮ
ರಾಷ್ಟ್ರೀಯ ಯುವ ದಿನ ಮತ್ತು ಯುವ ಸಪ್ತಾಹ ಕಾರ್ಯಕ್ರಮ
ಗೋಕಾಕ ಜ 13 : ತಾಯಿಯಿಂದ ಉಸಿರು ಪಡೆದು ತಂದೆಯಿಂದ ಹೆಸರು ಪಡೆದು ಅವರೆಡರ ಉಳಿವಿಗಾಗಿ ಗುರುವಿನ ಮಾರ್ಗದರ್ಶನ ಅಮೂಲ್ಯವಾದದ್ದು ಅಂಥ ಸಧರ್ಮ ಮಾರ್ಗವನ್ನು ಎಂದೂ ಮರೆಯಲಾಗದು ಎಂದು ಸೃಜನಶೀಲ ಸಾಹಿತ್ಯ ಮಹಿಳಾ ಬಳಗದ ಅಧ್ಯಕ್ಷೆ ಭಾರತಿ ಮಗದುಮ್ ಹೇಳಿದರು.
ಅವರು ರವಿವಾರದಂದು ಇಲ್ಲಿಯ ಸಿದ್ಧಾರ್ಥ ಲಲಿತ ಕಲಾ ಮಹಾವಿದ್ಯಾಲಯದಲ್ಲಿ ಬಿಂದು ಲಲಿತಕಲೆ ಜಾನಪದ ಅಧ್ಯಯನ ಹಾಗೂ ಸಂಶೋಧನ ಕೇಂದ್ರ ಗೋಕಾಕ, ಶ್ರೀ ಶಿವಶರಣ ಹರಳಯ್ಯ ಯುವಕ ಸಂಘ ಶಿಂದಿಕುರಬೇಟ ಹಾಗೂ ಡಾ: ಬಿ.ಆರ್.ಅಂಬೇಡ್ಕರ ಯುವತಿ ಮಂಡಳ ಗೋಕಾಕ,ಬೆಳಗಾವಿಯ ನೆಹರು ಯುವ ಕೇಂದ್ರ, ಯುವ ಸಬಲೀಕರಣ ಮತ್ತು ಕ್ರೀಡಾ ಇಲಾಖೆ ಇವುಗಳ ಸಂಯುಕ್ತಾಶ್ರಯದಲ್ಲಿ ದಿವ್ಯ ಚೇತನ ಸ್ವಾಮಿ ವಿವೇಕಾನಂದರ ಜನ್ಮ ದಿನದ ನಿಮಿತ್ಯ ರಾಷ್ಟ್ರೀಯ ಯುವ ದಿನ ಮತ್ತು ಯುವ ಸಪ್ತಾಹ ಕಾರ್ಯಕ್ರಮದ ನಿಮಿತ್ಯ ಹಮ್ಮಿಕೊಂಡ ಚಿತ್ರಕಲೆ, ರಂಗೋಲಿ,ಭಾಷಣ ಸ್ಪರ್ಧೆಗಳ ಬಹುಮಾನ ವಿತರಿಸಿ ಮಾತನಾಡಿದರು
ಮಕ್ಕಳ ಸಾಹಿತಿ ಲಕ್ಷ್ಮಣ ಚೌರಿ ಮಾತನಾಡಿ ಗುರುಶಿಷ್ಯರ ಸಂಬಂಧ ಪವಿತ್ರವಾದದ್ದು. ಭಾರತದ ದಾರ್ಶನಿಕರ ಮಾತು ಅಮರವಾದದ್ದು ಎಂದು ಹೇಳಿದರು. ಕಾರ್ಯಕ್ರಮದ ಅಧ್ಯಕ್ಷತೆಯನ್ನು ಸಿದ್ಧಾರ್ಥ ಲಲಿತ ಕಲಾ ಮಹಾವಿದ್ಯಾಲಯದ ಪ್ರಾಚಾರ್ಯ ಜಯಾನಂದ ಮಾದರ ವಹಿಸಿ ಮಾತನಾಡಿದರು. ನೆಹರು ಯುವ ಕೇಂದ್ರದ ಅಕ್ಕಮಹಾದೇವಿ ಮಾದರ ಪ್ರಾಸ್ತಾವಿಕ ಮಾತನಾಡಿದರು. ವೇದಿಕೆ ಮೇಲೆ ಕರ್ನಾಟಕ ಪ್ರಜಾ ವೇದಿಕೆಯ ಅಧ್ಯಕ್ಷ ಆನಂದ ಸೋರಗಾವಿ, ರೈತ ಸೇನೆಯ ಮಲ್ಲಿಕಾರ್ಜುನ ಇಳಿಗೇರ, ಸುಧಾ ಮುರಕುಂಬಿ, ಜಿಲ್ಲಾ ಯುವ ಪ್ರಶಸ್ತಿ ವಿಜೇತ ವಿಠ್ಠಲ ಕರೋಶಿ ಇದ್ದರು.
ಮಾಲಾ ದಳವಾಯಿ ಸ್ವಾಗತಿಸಿದರು. ಮೊನಿಕಾ ಹಲವಾಯಿ ನಿರೂಪಿಸಿದರು. ಬಸವರಾಜ ತಾವಲಗೇರಿ ವಂದಿಸಿದರು.