ಗೋಕಾಕ:ದಾನ ಮಾಡುವುದರಿಂದ ಪುಣ್ಯ ಪ್ರಾಪ್ತಿಯಾಗುತ್ತದೆ : ಪೂಜ್ಯ ಶ್ರೀ ಶಿವಾನಂದ ಮಹಾಸ್ವಾಮಿಜಿ
ದಾನ ಮಾಡುವುದರಿಂದ ಪುಣ್ಯ ಪ್ರಾಪ್ತಿಯಾಗುತ್ತದೆ : ಪೂಜ್ಯ ಶ್ರೀ ಶಿವಾನಂದ ಮಹಾಸ್ವಾಮಿಜಿ
ಗೋಕಾಕ ಜ 14 : ದಾನ ಮಾಡುವುದರಿಂದ ಪುಣ್ಯ ಪ್ರಾಪ್ತಿಯಾಗುತ್ತದೆ ಎಂದು ಸುಣಧೋಳಿಯ ಶ್ರೀ ಜಡಿಸಿದ್ದೇಶ್ವರಮಠದ ಪೂಜ್ಯ ಶ್ರೀ ಶಿವಾನಂದ ಮಹಾಸ್ವಾಮಿಜಿ ಹೇಳಿದರು.
ಅವರು ತಾಲೂಕಿನ ಹೂಲಿಕಟ್ಟಿ ಗ್ರಾಮದ ಶ್ರೀ ಶಿವಲಿಂಗೇಶ್ವರ ಮಠದ 17ನೇ ಜಾತ್ರಾ ಮಹೋತ್ಸವ 3ನೇ ದಿನದ ಸಾಂಸ್ಕøತಿಕ ಕಾರ್ಯಕ್ರಮದ ದಿವ್ಯ ಸಾನಿಧ್ಯ ವಹಿಸಿ ಮಾತನಾಡಿದರು.
ಮನುಷ್ಯ ತಾನು ದುಡಿಮೆ ಮಾಡಿ ಸಂಪಾದಿಸಿದ ಹಣದಲ್ಲಿ ಒಂದಿಷ್ಟು ಹಣ ಧಾರ್ಮಿಕ,ಸತ್ಸಂಗ ಕಾರ್ಯಗಳಿಗೆ ವಿನಯೋಗ ಮಾಡಿದಲ್ಲಿ ಆತನ ಕುಟುಂಬವು ನೆಮ್ಮದಿ, ಸುಖಶಾಂತಿಯಿಂದ ಬಾಳುತ್ತಾನೆ. ಅಲ್ಲದೇ ದಾನಗಳಲ್ಲಿ ಅನೇಕ ವಿಧಗಳು ಇದ್ದು ಎಲ್ಲ ದಾನವು ಶ್ರೇಷ್ಠವಾಗಿದೆ ಎಂದರು.
ಸಾನಿಧ್ಯ ವಹಿಸಿದ್ದ ಶ್ರೀಮಠದ ಶ್ರೀ ಕುಮಾರದೇವರು ಮಾತನಾಡಿ ಕಟ್ಟಡ ನಿರ್ಮಾಣದ ಸಂಕಲ್ಪ ಮಾತ್ರ ನಾವು ಮಾಡುವುದು ಆದರೆ ಅದನ್ನು ಪೂರ್ಣ ಗೊಳಿಸುವ ಸಂಪೂರ್ಣ ಜವಾಬ್ದಾರಿ ಭಕ್ತರ ಮೇಲಿದೆ ಎಂದರು.
ಕಪರಟ್ಟಿ ಕಳ್ಳಿಗುದ್ದಿ ಬಸವರಾಜ ಹಿರೇಮಠ ಸ್ವಾಮಿಜಿ ಮಾತನಾಡಿ ದಾನವು ಮಾಡಬೇಕಾದರೆ ಭಕ್ತಿಯಿಂದ ಮಾಡಬೇಕು. ಅದು ಪರಿಪೂರ್ಣವಾಗುತ್ತದೆ. ಇಚ್ಚೇ ಇಲ್ಲದೇ ದಾನ ಮಾಡಿದರೇ ಅದನ್ನು ದೇವರು ಮೆಚ್ಚವುದಿಲ್ಲ ಎಂದರು.
ವೇದಿಕೆ ಮೇಲೆ ಮಹಾಂತೇಶ ತಾಂವಶಿ, ಮಲ್ಲಿಕಾರ್ಜುನ ಈಟಿ, ಸೋಮಶೇಖರ ಮಗದುಮ್, ಸಂದೀಪ ಈಟಿ, ರಜನಿ ಜೀರಗ್ಯಾಳ, ಈಶ್ವರಚಂದ್ರ ಬೆಟಗೇರಿ, ಸುರೇಂದ್ರ ಎಸ್.ಕೆ.ಮರಕುಂಬಿ, ಬಾಗೋಜಿಕೊಪ್ಪದ ಪೂಜ್ಯ ಶ್ರೀ ಗುರುಪಾದ ದೇವರು ಇದ್ದರು. ಗೋಕಾಕದ ಭಾವಸಂಗಮ ಬಳಗದಿಂದ ಹಾಗೂ ಅಮ್ಮಾಜಿ ಭರತ ನಾಟ್ಯ ಶಾಲೆ ಇವರಿಂದ ಜಾನಪದ ಸಾಂಸ್ಕøತಿಕ ಕಾರ್ಯಕ್ರಮ ಜರುಗಿತು.