RNI NO. KARKAN/2006/27779|Thursday, December 12, 2024
You are here: Home » breaking news » ಗೋಕಾಕ:ಜಾನಪದದ ಮೇಲೆ ಇಂದು ಜಾಗತೀಕರಣದ ಸವಾರಿ ನಡೆಯುತ್ತಿರುವದು ಖೇದಕರ : ಮೋಹನ ಗುಂಡ್ಲೂರ

ಗೋಕಾಕ:ಜಾನಪದದ ಮೇಲೆ ಇಂದು ಜಾಗತೀಕರಣದ ಸವಾರಿ ನಡೆಯುತ್ತಿರುವದು ಖೇದಕರ : ಮೋಹನ ಗುಂಡ್ಲೂರ 

ಜಾನಪದದ ಮೇಲೆ ಇಂದು ಜಾಗತೀಕರಣದ ಸವಾರಿ ನಡೆಯುತ್ತಿರುವದು ಖೇದಕರ : ಮೋಹನ ಗುಂಡ್ಲೂರ

ಗೋಕಾಕ ಜ 29 : ದೇಸೀಯ ಜಾನಪದದ ಮೇಲೆ ಇಂದು ಜಾಗತೀಕರಣದ ಸವಾರಿ ನಡೆಯುತ್ತಿರುವದು ಖೇದಕರ ಎಂದು ಕನ್ನಡ ಜಾನಪದ ಪರಿಷತ್ತಿನ ಬೆಳಗಾವಿ ಜಿಲ್ಲಾಧ್ಯಕ್ಷ ಮೋಹನ ಗುಂಡ್ಲೂರ ಹೇಳಿದರು.

ಅವರು ಇತ್ತೀಚೆಗೆ ನಗರದ ಸಿದ್ಧಾರ್ಥ ಲಲಿತ ಕಲಾ ಮಹಾವಿದ್ಯಾಲಯದಲ್ಲಿ ಹಮ್ಮಿಕೊಂಡಿದ್ದ ಕನ್ನಡ ಜಾನಪದ ಪರಿಷತ್ತು ಗೋಕಾಕ ತಾಲೂಕು ಘಟಕ ಉದ್ಘಾಟನಾ ಸಮಾರಂಭ ಹಾಗೂ ಜಾನಪದ ಜಗುಲಿ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿ ಮಾತನಾಡಿದರು.

ಜಾನಪದದ ಕೌಶಲ್ಯಗಳಿಂದ ಕೂಡಿದ ಮಾನವನ ಬದುಕಿನ ಅವಿಭಾಜ್ಯ ಅಂಗವೇ ಕಲೆಯಾಗಿದೆ. ಜಾನಪದ ಕಲೆಗಳಲ್ಲಿ ನಾಡಿನ ಕೌಶಲ್ಯಮಯ ಸಾಂಸ್ಕøತಿಕ ಪ್ರಾಚೀನ ಶಕ್ತಿ ಅಡಗಿದೆ. ನಮ್ಮ ಸಂಸ್ಕøತಿ ಮೇಲೆ ನಮ್ಮ ಬದುಕು ನಿಂತಿದೆ ಎಂದು ಜಾನಪದದ ಸೊಗಡನ್ನು ಬಿಚ್ಚಿಟ್ಟರು.
ಸಭೆಯನ್ನು ಉದ್ಘಾಟಿಸಿ ರಾಜ್ಯ ಕೋಶಾಧ್ಯಕ್ಷ ಡಾ. ಕನಕತಾರಾ ಮಾತನಾಡಿ, ವೃದ್ಧಾಪ್ಯದಲ್ಲಿರುವ ಜಾನಪದ ಕಲಾವಿದರಿಗೆ ಸರ್ಕಾರ ಈಗ ನೀಡುತ್ತಿರುವ ರೂ.1500/- ಗೌರವದ ಮಾಸಾಶನ ಯಾವುದಕ್ಕೂ ಸಾಲದು ಮತ್ತು 58 ವರ್ಷ ವಯಸ್ಸಿನ ಮಾನದಂಡವನ್ನು ಸಡಿಲಿಕೆ ಮಾಡಬೇಕೆಂದು ಸರ್ಕಾರ ಹಾಗೂ ಕನ್ನಡ ಮತ್ತು ಸಂಸ್ಕøತಿ ಇಲಾಖೆಯನ್ನು ಒತ್ತಾಯಿಸಿದರು.
ನೂತನ ತಾಲೂಕಾಧ್ಯಕ್ಷ ಜಯಾನಂದ ಮಾದರ ಆದೇಶ ಸ್ವೀಕರಿಸಿ, ಗೋಕಾವಿ ನಾಡಿನ ಜಾನಪದ ಕಲೆ ಹಾಗೂ ಸಂಸ್ಕøತಿಯನ್ನು ಪ್ರತಿಬಿಂಬಿಸುವ ಕಾರ್ಯಯೋಜನೆಗಳನ್ನು ರೂಪಿಸಿಕೊಂಡು ಈಗ ಭಾಗದ ಪ್ರತಿಭಾನ್ವಿತ ಕಲಾವಿದರನ್ನು ಗುರುತಿಸುವ ಕೆಲಸವನ್ನು ಮಾಡುವ ಹಾಗೂ ಜಾನಪದ ಕಲೆ ಮತ್ತು ಕಲಾವಿದರ ಪರಿಚಯಾತ್ಮಕ ಗ್ರಂಥಗಳನ್ನು ರಚಿಸುವ ಇಂಗಿತವನ್ನು ವ್ಯಕ್ತಪಡಿಸಿದರು.
ನುಡಿ-ಗುಡಿ ಕಾರರ ಜಗುಲಿ ಕಾರ್ಯಕ್ರಮದಲ್ಲಿ ಬೀಳಗಿಯ ಗೈಬುಸಾಬ ಗಲಗಲಿ ಇವರಿಂದ ರಿವಾಯತ ಪದ, ಅಥಣಿಯ ಮಹಾದೇವಿ ಕಾಂಬಳೆ ಸಂಪ್ರದಾಯ ಹಾಡು, ಗೋಕಾಕದ ಬಿ.ಬಿ.ಪಟಗುಂದಿ ಹಂತಿಪದ, ಶಿವಲಿಂಗಪ್ಪ ಬಾಗೇವಾಡಿ ಛದ್ಮವೇಷ, ತಳಕಟ್ನಾಳದ ವಿಠ್ಠಲ ಬಾಪುಕುರಿ ಅನಕು, ಉದ್ದಣ್ಣ ಗೋಡೇರ ಹಂತಿಪದ, ಪುಂಡಲೀಕ ಹರಿಜನ ಭಜನೆ ಪದ, ಸಿದ್ಧಾರ್ಥ ಲಲಿತಕಲಾ ಮಹಾವಿದ್ಯಾಲಯದ ವಿದ್ಯಾರ್ಥಿ ಬಳಗದ ಚಿತ್ರಕಲಾ ಪ್ರದರ್ಶನ ನೀಡಿದರು.

ವೇದಿಕೆಯ ಮೇಲೆ ಕ.ಜಾ.ಪ. ಜಿಲ್ಲಾ ಸಂಚಾಲಕ ರಾಮಲಿಂಗ ಕಾಡಪ್ಪನವರ, ಕೋಶಾಧ್ಯಕ್ಷ ಶಂಕರ ಕಂದ್ರಾಳ, ಕ.ಸಾ.ಪ. ತಾಲೂಕಾಧ್ಯಕ್ಷ ಮಹಾಂತೇಶ ತಾಂವಶಿ, ಹಿರಿಯ ರಂಗ ಕಲಾವಿದ ಈಶ್ವರಚಂದ್ರ ಬೆಟಗೇರಿ ಕ.ಜಾ.ಪ. ತಾಲೂಕಾಧ್ಯಕ್ಷ ಮಲ್ಲಿಕಾರ್ಜುನ ಈಟಿ, ಮಕ್ಕಳ ಸಾಹಿತಿ ಲಕ್ಷ್ಮಣ ಚೌರಿ ಇತರರು ಉಪಸ್ಥಿತರಿದ್ದರು.

ಅಧ್ಯಾಪಕಿ ಮೋನಿಕಾ ಹಲವಾಯಿ ನಿರೂಪಿಸಿ ವಂದಿಸಿದರು.

Related posts: