ಘಟಪ್ರಭಾ:ರೈಲ್ವೆ ನಿಲ್ದಾಣದಲ್ಲಿ ಸಂವಿಧಾನ ಶಿಲ್ಪಿ ಡಾ.ಬಾಬಾಸಾಹೇಬ ಅಂಬೇಡ್ಕರರ ಭಾವಚಿತ್ರವನ್ನು ಆಳವಡಿಸಲು ಮನವಿ
ರೈಲ್ವೆ ನಿಲ್ದಾಣದಲ್ಲಿ ಸಂವಿಧಾನ ಶಿಲ್ಪಿ ಡಾ.ಬಾಬಾಸಾಹೇಬ ಅಂಬೇಡ್ಕರರ ಭಾವಚಿತ್ರವನ್ನು ಆಳವಡಿಸಲು ಮನವಿ
ಘಟಪ್ರಭಾ ಜ 30 : ಸ್ಥಳೀಯ ರೈಲು ನಿಲ್ದಾಣದಲ್ಲಿ ಸಂವಿಧಾನ ಶಿಲ್ಪಿ ಡಾ.ಬಾಬಾಸಾಹೇಬ ಅಂಬೇಡ್ಕರರ ಭಾವಚಿತ್ರವನ್ನು ಹಾಕುವುದು ಸೇರಿದಂತೆ ವಿವಿಧ ಬೇಡಿಕೆಗಳನ್ನು ಈಡೇರಿಸುವಂತೆ ಒತ್ತಾಯಿಸಿ ಸಮತಾ ಸೈನಿಕದಳದ ಪದಾಧಿಕಾರಿಗಳು ಸಂಸದ ಸುರೇಶ ಅಂಗಡಿ ಹಾಗೂ ನೈರುತ್ಯ ರೈಲು ಹುಬ್ಬಳ್ಳಿ ಡಿವ್ಹಿಜನ್ ಜನರಲ್ ಮ್ಯಾನೇಜರ ಅಜಯಕುಮಾರ ಸಿಂಗÀ ಅವರಿಗೆ ಮನವಿ ನಲ್ಲಿಸಿದರು.
ಮಂಗಳವಾರ ಘಟಪ್ರಭಾ ರೈಲು ನಿಲ್ದಾಣದ ಆವರಣದಲ್ಲಿ ಹೊಸ ರೈಲು ನಿಲ್ದಾಣದ ಕಟ್ಟಡ ಹಾಗೂ ಪಾದಚಾರಿ ಮೇಲ್ಸೇತುವೆ ನಿರ್ಮಾಣ ಕಾಮಗಾರಿ ಶಂಕುಸ್ಥಾಪನೆಗೆ ಆಗಮಿಸಿದ ಸಂಸದರು ಹಾಗೂ ರೈಲ್ವೆ ಅಧಿಕಾರಿಗಳನ್ನು ಬೆಟ್ಟಿಯಾದ ಕಾರ್ಯಕರ್ತರು, ರೈಲು ನಿಲ್ದಾಣದಲ್ಲಿ ಡಾ.ಬಾಬಾಸಾಹೇಬ ಅಂಬೇಡ್ಕರ ಅವರ ಭಾವಚಿತ್ರವನ್ನು ಹಾಕಬೇಕು. ರೈಲು ನಿಲ್ದಾಣದ ಆವರಣದಲ್ಲಿ ಅಂಡರ್ ಪಾಸ್ ಹಾಗೂ ಸಾರ್ವಜನಿಕ ಶೌಚಾಲಯ ನಿರ್ಮಸಬೇಕೆಂದು ಆಗ್ರಹಿಸಿದರು.
ಈ ಸಂದಭದಲ್ಲಿ ಸಮತಾ ಸೈನಿಕದಳದ ತಾಲೂಕಾಧ್ಯಕ್ಷ ಅರ್ಜುನ ಗಂಡವ್ವಗೋಳ, ಮುಖಂಡರಾದ ಶಂಕರ ಸಣ್ಣಕ್ಕಿ, ರಿಯಾಜ ಮುಲ್ಲಾ, ಎಸ್.ಎಚ್.ಸರ್ವನ್ನವರ, ಕೃಷ್ಣಾ ಗಂಡವ್ವಗೋಳ, ಪರಶುರಾಮ ಗಂಡವ್ವಗೋಳ, ವೀರಭದ್ರ ಗಂಡವ್ವಗೋಳ ಸೇರಿದಂತೆ ಅನೇಕರು ಇದ್ದರು.