RNI NO. KARKAN/2006/27779|Wednesday, December 18, 2024
You are here: Home » Others » ಗೋಕಾಕ:ಸಾಮರಸ್ಯ ಮತ್ತು ಭಾವೈಕ್ಯತೆಯಿಂದ ದೇಶದ ಅಭಿವೃದ್ದಿ ಸಾಧ್ಯ : ಹುಬ್ಬಳ್ಳಿಯ ರಾಜಯೋಗೀಂದ್ರ ಮಹಾಸ್ವಾಮಿಜಿ ಅಭಿಮತ

ಗೋಕಾಕ:ಸಾಮರಸ್ಯ ಮತ್ತು ಭಾವೈಕ್ಯತೆಯಿಂದ ದೇಶದ ಅಭಿವೃದ್ದಿ ಸಾಧ್ಯ : ಹುಬ್ಬಳ್ಳಿಯ ರಾಜಯೋಗೀಂದ್ರ ಮಹಾಸ್ವಾಮಿಜಿ ಅಭಿಮತ 

ಸಾಮರಸ್ಯ ಮತ್ತು ಭಾವೈಕ್ಯತೆಯಿಂದ ದೇಶದ ಅಭಿವೃದ್ದಿ ಸಾಧ್ಯ : ಹುಬ್ಬಳ್ಳಿಯ ರಾಜಯೋಗೀಂದ್ರ ಮಹಾಸ್ವಾಮಿಜಿ ಅಭಿಮತ
ನಮ್ಮ ಬೆಳಗಾವಿ ಸುದ್ದಿ, ಗೋಕಾಕ ಫೆ 3 :
ಸಾಮರಸ್ಯ ಮತ್ತು ಭಾವೈಕ್ಯತೆಯಿಂದ ದೇಶದ ಅಭಿವೃದ್ದಿ ಸಾಧ್ಯ ಎಂದು ಮೂರು ಸಾವಿರ ಮಠ ಹುಬ್ಬಳ್ಳಿ-ಹಾನಗಲ್ಲದ ಜಗದ್ಗುರು ಶ್ರೀ ಗುರುಸಿದ್ಧ ರಾಜಯೋಗೀಂದ್ರ ಮಹಾಸ್ವಾಮಿಜಿ ಹೇಳಿದರು.
ಅವರು ಶನಿವಾರದಂದು ಸಂಜೆ ನಗರದ ಶೂನ್ಯ ಸಂಪಾದನಾ ಮಠದ ಲಿಂಗೈಕ್ಯ ಶ್ರೀ ಬಸವ ಮಹಾಸ್ವಾಮಿಗಳ 14ನೇ ಪುಣ್ಯಸ್ಮರಣೋತ್ಸವ ಹಾಗೂ ಶರಣ ಸಂಸ್ಕøತಿ ಉತ್ಸವ ಮತ್ತು ಶಿಕ್ಷಕರ ಸಮಾವೇಶದ ದಿವ್ಯ ಸಾನಿಧ್ಯವನ್ನು ವಹಿಸಿ ಆಶೀರ್ವಚನ ನೀಡಿದರು.
ನಮ್ಮ ದೇಶದಲ್ಲಿ ಹಿಂದೂ ಮುಸ್ಲಿಂ ಭಾವೈಕ್ಯತೆಗೆ ನಮ್ಮ ಮಠಗಳು ಯಾವುತ್ತೂ ಹಿಂದೆ ಬಿದ್ದಿಲ್ಲ. ಸಮಾಜಕ್ಕೆ ಒಳ್ಳೇಯ ಸಂದೇಶವನ್ನು ನೀಡುತ್ತಾ ಬಂದಿವೆ. ನಾಡಿಗೆ ಅದ್ಭುತವಾದ ಸಂಸ್ಕøತಿಯನ್ನು ನೀಡಿವೆ. ಬಸವಾದಿ ಶರಣರು ಯಾವುತ್ತು ಜಾತಿ,ಮತ,ಬೇಧ ಮಾಡಿಲ್ಲ ಜಾತಿ ನಿರ್ಮೂಲನೆ ಮಾಡಿದ್ದಾರೆ. ವಿಜ್ಞಾನಿಯಲ್ಲಿ ತತ್ವಜ್ಞಾನಿ ಇದ್ದಾನೆ. ತತ್ವಜ್ಞಾನಿಯಲ್ಲಿ ವಿಜ್ಞಾನಿ ಇದ್ದಾನೆ. ಶ್ರೀಮಠದ ಮುರುಘರಾಜೇಂದ್ರ ಮಹಾಸ್ವಾಮಿಜಿಯವರು ಭಾರತರತ್ನವನ್ನು ಗೋಕಾಕ ನಾಡಿಗೆ ಕರೆ ತಂದಿದ್ದುದಲ್ಲದೇ ಅವರು ಭಾವೈಕ್ಯತೆಯ ಹರಿಕಾರವೆನಿಸಿಕೊಂಡಿದ್ದಾರೆ. ಶ್ರೀಗಳು ಮಾತನಾಡುವುದಿಲ್ಲ ಅವರು ಕಾರ್ಯವೇ ಮಾತನಾಡುವಂತಿದೆ ಎಂದರು.
ರಾಣಿ ಚನ್ನಮ್ಮ ವಿಶ್ವ ವಿದ್ಯಾಲಯದ (ಮೌಲ್ಯಮಾಪನ) ಕುಲಸಚಿವ ರಂಗರಾಜ ವನದುರ್ಗ ಅವರು ಶ್ರೀಮಠದಿಂದ ಸನ್ಮಾನ ಸ್ವೀಕರಿಸಿ ಮಾತನಾಡಿ ಶಿಕ್ಷಕರು ಉತ್ತಮ ರಾಷ್ಟ್ರ ನಿರ್ಮಾಣ ಮಾಡುವ ಶಿಲ್ಪಿಗಳು. ವಿದ್ಯಾರ್ಥಿಗಳ ಉಜ್ವಲ ಭವಿಷ್ಯ ರೂಪಿಸುವ ಮಾರ್ಗದರ್ಶಕರಾಗಿದ್ದಾರೆ. ಮಕ್ಕಳಿಗೆ ಶಿಕ್ಷಣದ ಜೊತೆಗೆ ಉತ್ತಮ ಸಂಸ್ಕಾರವನ್ನು ನೀಡಬೇಕಾಗಿದೆ. ಶಿಕ್ಷಕರಿಗೆ ಸಮಾಜದಲ್ಲಿ ಗೌರವವಿದೆ ಎಂದರು.
ಸಮಾರಂಭದ ಶೂನ್ಯ ಸಂಪಾದನ ಮಠದ ಶ್ರೀ ಮುರುಘರಾಜೇಂದ್ರ ಮಹಾಸ್ವಾಮಿಜಿ ಹಾಗೂ ನೇತೃತವವನ್ನು ಶಿಗ್ಗಾಂವ ವಿರಕ್ತಮಠದ ಶ್ರೀ ಸಂಗನಬಸವ ಮಹಾಸ್ವಾಮಿಗಳು ವಹಿಸಿದ್ದರು.
ವೇದಿಕೆ ಮೇಲೆ ಬೆಂಗಳೂರಿನ ವಿಪ್ರೊದ ವ್ಯವಸ್ಥಾಪಕ ನಿರ್ದೇಶಕ ಪ್ರಭುನಂದಯ್ಯ ಕೋಟುರ, ಡಾ. ರವಿ ಪಾಟೀಲ, ಬಿಇಒಗಳಾದ ಜಿ.ಬಿ.ಬಳಗಾರ, ಅಜೀತ ಮನ್ನಿಕೇರಿ, ಅಶೋಕ ಪೂಜಾರಿ, ಮಲ್ಲಿಕಾರ್ಜುನ ಚುನಮರಿ, ಈರಣ್ಣ ಕಡಾಡಿ ರುದ್ರಗೌಡ ಪಾಟೀಲ, ಮಲ್ಲಿಕಾರ್ಜುನ ಕಲ್ಲೋಳ್ಳಿ, ಪ್ರವೀಣ ಚುನಮರಿ, ವಿವೇಕ ಜತ್ತಿ ಉಪಸ್ಥಿತರಿದ್ದರು.
ಇದೇ ಸಂದರ್ಭದಲ್ಲಿ ವಿವಿಧ ಸಾಧನೆಗೈದ ಶಿಕ್ಷಕರನ್ನು ಸತ್ಕರಿಸಲಾಯಿತು.
ಆರ್.ಎಲ್.ಮಿರ್ಜಿ ಸ್ವಾಗತಿಸಿದರು. ಎಸ್.ಕೆ.ಮಠದ ನಿರೂಪಿಸಿದರು. ಅಡಿವೇಶ ಗವಿಮಠ ವಂದಿಸಿದರು.

Related posts: