ಗೋಕಾಕ:ಅಧ್ಯಕ್ಷರಾಗಿ ಹನುಮಂತ ಪಾಟೀಲ, ಉಪಾಧ್ಯಕ್ಷರಾಗಿ ಸಂಜೀವ ಪೂಜೇರಿ ಅವಿರೋಧವಾಗಿ ಆಯ್ಕೆ
ಅಧ್ಯಕ್ಷರಾಗಿ ಹನುಮಂತ ಪಾಟೀಲ, ಉಪಾಧ್ಯಕ್ಷರಾಗಿ ಸಂಜೀವ ಪೂಜೇರಿ ಅವಿರೋಧವಾಗಿ ಆಯ್ಕೆ
ನಮ್ಮ ಬೆಳಗಾವಿ ಸುದ್ದಿ , ಬೆಟಗೇರಿ ಫೆ 7 :
ಗ್ರಾಮದ ಹಾಲು ಉತ್ಪಾದಕರ ಸಹಕಾರಿ ಸಂಘದ ಕಾರ್ಯಾಲಯದಲ್ಲಿ ಬುಧವಾರ ಫೆ.6 ರಂದು ನಡೆದ ಸಂಘದ ಆಡಳಿತ ಮಂಡಳಿ ಅಧ್ಯಕ್ಷ-ಉಪಾಧ್ಯಕ್ಷರ ಆಯ್ಕೆಯ ಚುನಾವಣಾ ಪ್ರಕ್ರಿಯೆಯಲ್ಲಿ ಸಂಘದ ಅಧ್ಯಕ್ಷರಾಗಿ ಹನುಮಂತ ಪಾಟೀಲ, ಉಪಾಧ್ಯಕ್ಷರಾಗಿ ಸಂಜೀವ ಪೂಜೇರಿ ಅವಿರೋಧವಾಗಿ ಆಯ್ಕೆಯಾಗಿದ್ದಾರೆ.
ಸಂಘದ ಆಡಳಿತ ಮಂಡಳಿಗೆ ಚುನಾಯಿತಗೊಂಡ ನೂತನ ಅಧ್ಯಕ್ಷ, ಉಪಾಧ್ಯಕ್ಷ ಹಾಗೂ ಸದಸ್ಯರಿಗೆ ಪ್ರಮಾಣ ಪತ್ರವನ್ನು ವಿತರಿಸಲಾಯಿತು. ಈ ವೇಳೆ ನೂತನ ಅಧ್ಯಕ್ಷ ಹನುಮಂತ ಪಾಟೀಲ, ಉಪಾಧ್ಯಕ್ಷ ಸಂಜೀವ ಪೂಜೇರಿ ಅವರನ್ನು ಸತ್ಕರಿಸಲಾಯಿತು. ಚುನಾವಣಾಧಿಕಾರಿಯಾಗಿ ಎಸ್.ಬಿ. ಬಿರಾದಾರ ಪಾಟೀಲ ಕಾರ್ಯನಿರ್ವಹಿಸಿದರು.
ತಾಪಂ ಸದಸ್ಯ ಲಕ್ಷ್ಮಣ ನೀಲಣ್ಣವರ, ತಾಪಂ ಮಾಜಿ ಸದಸ್ಯ ಬಸವಂತ ಕೋಣಿ, ಮಲ್ಲಪ್ಪ ಪಣದಿ, ಈಶ್ವರ ಬಳಿಗಾರ, ಈಶ್ವರ ಮುಧೋಳ, ಸುಭಾಷ ಜಂಬಗಿ, ಶ್ರೀಧರ ದೇಯಣ್ಣವರ, ಸುಭಾಷ ಕರೆಣ್ಣವರ, ವೀರನಾಯ್ಕ ನಾಯ್ಕರ, ಸದಾಶಿವ ಕುರಿ, ಸಂಗಯ್ಯ ಹಿರೇಮಠ, ಮಾಯಪ್ಪ ಬಾಣಸಿ, ಪಿ.ಎಲ್.ಹಾಲಣ್ಣವರ, ಹನುಮಂತ ವಗ್ಗರ, ಸಂಘದ ಆಡಳಿತ ಮಂಡಳಿಗೆ ಆಯ್ಕೆಗೊಂಡ ನೂತನ ಸದಸ್ಯರು ಸೇರಿದಂತೆ ಮುಖ್ಯ ಕಾರ್ಯನಿರ್ವಾಹಕ ನಿಂಗಪ್ಪ ನೀಲಣ್ಣವರ, ಸಿಬ್ಬಂದಿ ರಾಜಕೀಯ ಮುಖಂಡರು, ಯುವಕರು, ಇತರರು ಇದ್ದರು.