ಘಟಪ್ರಭಾ:ಆರೋಗ್ಯವಂತ ಸಮಾಜ ನಿರ್ಮಾಣ ಮಾಡುವಲ್ಲಿ ವಿದ್ಯಾರ್ಥಿಗಳ ಪಾತ್ರ ಮುಖ್ಯವಾಗಿದೆ : ಡಾ| ಪ್ರವೀಣ ಕರಗಾಂವಿ
ಆರೋಗ್ಯವಂತ ಸಮಾಜ ನಿರ್ಮಾಣ ಮಾಡುವಲ್ಲಿ ವಿದ್ಯಾರ್ಥಿಗಳ ಪಾತ್ರ ಮುಖ್ಯವಾಗಿದೆ : ಡಾ| ಪ್ರವೀಣ ಕರಗಾಂವಿ
ನಮ್ಮ ಬೆಳಗಾವಿ ಸುದಿ , ಘಟಪ್ರಭಾ ಫೆ 8 :
ಆರೋಗ್ಯವಂತ ಸಮಾಜ ನಿರ್ಮಾಣ ಮಾಡುವಲ್ಲಿ ವಿದ್ಯಾರ್ಥಿಗಳ ಪಾತ್ರ ಮುಖ್ಯವಾಗಿದೆ ಎಂದು ಡಾ| ಪ್ರವೀಣ ಕರಗಾಂವಿ ಹೇಳಿದರು.
ಅವರು ಶುಕ್ರವಾರದಂದು ಸಮೀಪದ ಶಿಂದಿಕುರಬೇಟ ಗ್ರಾಮದ ಸರ್ಕಾರಿ ಬಾಲಕಿಯರ ಪ್ರೌಢಶಾಲೆಯಲ್ಲಿ ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆ ಬೆಳಗಾವಿ, ನೆಹರು ಯುವ ಕೇಂದ್ರ ಬೆಳಗಾವಿ, ಶ್ರೀ ಶಿವಶರಣ ಹರಳಯ್ಯ ಯುವಕ ಸಂಘ, ಜೋಕ್ಕಾನಟ್ಟಿಯ ಶ್ರೀ ಸಿದ್ಧಾರೂಡ ಮಹಿಳಾ ಕಲಾ ಸಂಘ ಸಂಯುಕ್ತಾಶ್ರಯದಲ್ಲಿ ರಾಷ್ಟ್ರೀಯ ಜಂತುಹುಳ ನಿವಾರಣೆ ಜಾಗೃತಿ ದಿನ ಜಾಥಾ ಮತ್ತು ಮಾತ್ರೆ ಸೇವಿಸುವ ಹಾಗೂ ಮತದಾನ ಜಾಗೃತಿ ಕಾರ್ಯಕ್ರಮದ ಮುಖ್ಯ ಅತಿಥಿಗಳಾಗಿ ಮಾತನಾಡಿದರು.
ಮಣ್ಣಿನಿಂದ ಜಂತು ಹುಳಗಳು ಹುಟ್ಟುತ್ತವೆ. ಆದ್ದರಿಂದ ವಿದ್ಯಾರ್ಥಿಗಳು ಸ್ವಚ್ಛತೆಯ ಬಗ್ಗೆ ಗಮನಹರಿಸಬೇಕು ಎಂದರು.
ಕಾರ್ಯಕ್ರಮದ ಅಧ್ಯಕ್ಷತೆಯನ್ನು ಜಿ.ಪಂ ಮಾಜಿ ಸದಸ್ಯ ಸುಧೀರ ಜೋಡಟ್ಟಿ ವಹಿಸಿ ಮಾತನಾಡಿ ಸರ್ಕಾರ ಹಲವಾರು ಯೋಜನೆಗಳು ಜಾರಿಗೆ ತಂದಿದ್ದು ವಿದ್ಯಾರ್ಥಿಗಳು ಸದುಪಯೋಗ ಪಡಿಸಿಕೊಳ್ಳಬೇಕು. ಮತದಾನ ಬಗ್ಗೆ ಅರಿವು ಮೂಡಿಸುವಂತಹ ಕಾರ್ಯಕ್ರಮವನ್ನು ಮಾಡಬೇಕು ಎಂದರು.
ಪ್ರಾರಂಭದಲ್ಲಿ ಗ್ರಾಮದಲ್ಲಿ ವಿದ್ಯಾರ್ಥಿಗಳಿಂದ ಜಾಥಾ ಕಾರ್ಯಕ್ರಮ ಜರುಗಿತು.
ಈ ಸಂದರ್ಭದಲ್ಲಿ ವಿಠ್ಠಲ ಕರೋಶಿ, ರಾಜು ನಿಲಜಗಿ, ಕಿರಿಯ ಮಹಿಳಾ ಆರೋಗ್ಯ ಸಹಾಯಕಿ ಎಸ್.ಬಿ.ಕಾಳ್ಯಾಗೋಳ, ಆರೋಗ್ಯ ಇಲಾಖೆಯ ಯು.ಡಿ.ಪತ್ತಾರ, ಬಿ.ಬಿ.ಬಿಳಗಿ ಸೇರಿದಂತೆ ಆಶಾ ಹಾಗೂ ಅಂಗನವಾಡಿ ಕಾರ್ಯಕರ್ತೆಯರು ಮುಖ್ಯೋಪಾಧ್ಯಾಯ ಎಲ್.ಬಿ.ರಡ್ಡಿ, ಪಿ.ಬಿ.ಕದಮ, ಕೆ.ಎ. ಗಡ್ಡಿ, ಶ್ರೀಮತಿ ರೇಖಾ ಕೆ., ಎಫ್.ಜಿ.ಬಾಗವಾನ, ವಿ.ಎಂ.ಮುನ್ನೋಳ್ಳಿ, ಕೆ.ವಿ.ಕರನೆಲ್ಲಿ ಇದ್ದರು.