RNI NO. KARKAN/2006/27779|Friday, October 18, 2024
You are here: Home » breaking news » ಬೆಳಗಾವಿ:ವಿಟಿಯು ವಿಭಜನೆ : ಹೆಚ್ಚಿದ ಕಾವು , ಕನ್ನಡ ಪರ ಸಂಘಟನೆಗಳ ಭಾರಿ ವಿರೋಧ

ಬೆಳಗಾವಿ:ವಿಟಿಯು ವಿಭಜನೆ : ಹೆಚ್ಚಿದ ಕಾವು , ಕನ್ನಡ ಪರ ಸಂಘಟನೆಗಳ ಭಾರಿ ವಿರೋಧ 

ವಿಟಿಯು ವಿಭಜನೆ : ಹೆಚ್ಚಿದ ಕಾವು , ಕನ್ನಡ ಪರ ಸಂಘಟನೆಗಳ ಭಾರಿ ವಿರೋಧ

ನಮ್ಮ ಬೆಳಗಾವಿ ಸುದ್ದಿ , ಬೆಳಗಾವಿ ಫೆ 10 :

ರಾಜ್ಯ ಸರಕಾರ ವಿಶ್ವೇಶ್ವರಯ್ಯ ತಾಂತ್ರಿಕ ಮಾಹಾವಿದ್ಯಾಲಯ ವಿಭಜನೆ ಮಾಡುವ ಕ್ರಮವನ್ನು ವಿರೋಧಿಸಿ ಬೆಳಗಾವಿ ನಗರದ ಹಲವು ಕನ್ನಡಪರ ಸಂಘಟನೆಗಳು ಪ್ರತಿಭಟನೆ ನಡೆಸಿದವು
ಇಂದು ನಗರದ ಚನ್ನಮ್ಮ ವೃತದದ ಬಳಿ ನೂರಾರು ಕನ್ನಡಪರ ಹೋರಾಟಗಾರು ಹಾಗೂ ಶಿಕ್ಷಣ ಪ್ರೇಮಿಗಳು, ಸರ್ಕಾರದ ನಿರ್ಧಾರ ಖಂಡಿಸಿ ಧರಣಿ ಕುಳಿತರು. ನಂತರ ಮಾನವ ಸರಪಳಿ ನಿರ್ಮಿಸಿ ಪ್ರಾಣ ಬಿಡಯತ್ತೇವೆ ಆದರೆ ವಿಶ್ವವಿದ್ಯಾಲಯ ಬಿಟ್ಟುಕೊಡುವುದಿಲ್ಲ ಎಂದು ಆಕ್ರೋಶ ಹೊರಹಾಕಿದರು.
ಇದಕ್ಕೂ ಮುಂಚೆ ಸುದ್ದಿಗೊಷ್ಠಿ ನಡೆಸಿದ ಕನ್ನಡಪರ ಸಂಘಟನೆ ಮುಖಂಡರಾದ ಸಿದ್ದನಗೌಡ ಪಾಟೀಲ್ ಹಾಗೂ ಅಶೊಕ ಚಂದರಗಿ, ಮುಖ್ಯಮಂತ್ರಿ ಕುಮಾರಸ್ವಾಮಿ ಹಾಗೂ ರೇವಣ್ಣ ಇಬ್ಬರು ಬೆಳಗಾವಿ ಜಿಲ್ಲೆಗೆ ಅನ್ಯಾಯ ಮಾಡುತ್ತಿದ್ದಾರೆ. ಇಲ್ಲಿ ಇರುವಂತಹ ಸೌಲಭ್ಯಗಳನ್ನು ಹೊತ್ತುಕೊಂಡು ಹೋಗುವುದೇ ಅವರ ಕೆಲಸ ಎಂದು ಆರೋಪಿಸಿದರು. ಇವರ ಕಾರ್ಯವೈಖರಿ ಹೀಗೆ ಮುಂದುವರಿದರೆ ಜಿಲ್ಲೆಯಲ್ಲಿ ಬೃಹತ್ ಪ್ರತಿಭಟನೆ ಮಾಡುವುದರ ಜೊತೆಗೆ, ಬೆಳಗಾವಿ ಬಂದ್ ಗೆ ಕರೆ ನೀಡುವ ಎಚ್ಚರಿಕೆ ನೀಡಿದ್ದಾರೆ.

ಇದರ ಜೊತೆಗೆ  ಇತ್ತ ಸಾರ್ವಜನಿಕ ವಲಯದಲ್ಲೂ ಕೂಡಾ ಇದರ ಬಗ್ಗೆ ವಿರೋಧ ವ್ಯಕ್ತವಾಗಿದೆ. 

Related posts: