RNI NO. KARKAN/2006/27779|Tuesday, December 24, 2024
You are here: Home » breaking news » ಘಟಪ್ರಭಾ:ಸೂರ್ಯ ಚಂದ್ರ ಇರುವವರೆಗೆ ರಾಯಣ್ಣ ಹೆಸರು ಅಜರಾಮರವಾಗಿದೆ : ಶ್ರೀ ಅಮರೇಶ್ವರ ಮಹಾಸ್ವಾಮಿಜಿ

ಘಟಪ್ರಭಾ:ಸೂರ್ಯ ಚಂದ್ರ ಇರುವವರೆಗೆ ರಾಯಣ್ಣ ಹೆಸರು ಅಜರಾಮರವಾಗಿದೆ : ಶ್ರೀ ಅಮರೇಶ್ವರ ಮಹಾಸ್ವಾಮಿಜಿ 

ಸೂರ್ಯ ಚಂದ್ರ ಇರುವವರೆಗೆ ರಾಯಣ್ಣ ಹೆಸರು ಅಜರಾಮರವಾಗಿದೆ : ಶ್ರೀ ಅಮರೇಶ್ವರ ಮಹಾಸ್ವಾಮಿಜಿ

ನಮ್ಮ ಬೆಳಗಾವಿ ಸುದ್ದಿ , ಘಟಪ್ರಭಾ 12 :

ಸಂಗೋಳ್ಳಿ ರಾಯಣ್ಣ ಎಲ್ಲ ಜಾತಿ ದರ್ಮಗಳನ್ನು ಮೀರಿ ಕಿತ್ತೂರು ಸಂಸ್ಥಾನದ ರಕ್ಷಣೆಗಾಗಿ ಹಗಲಿರುಳು ಶ್ರಮಿಸಿ ಜೀವದಾನ ಮಾಡಿದ್ದಾರೆ. ಸೂರ್ಯ ಚಂದ್ರ ಇರುವವರೆಗೆ ರಾಯಣ್ಣ ಹೆಸರು ಅಜರಾಮರವಾಗಿದೆ ಎಂದು ಕವಲಗುಡ್ಡದ ಶ್ರೀ ಅಮರೇಶ್ವರ ಮಹಾಸ್ವಾಮಿಗಳು ಹೇಳಿದರು.
ಅವರು ಸೋಮವಾರ ಸಮೀಪದ ಹುಣಶ್ಯಾಳ ಪಿ.ಜಿ ಗ್ರಾಮದಲ್ಲಿ ಕ್ರಾಂತಿವೀರ ಸಂಗೋಳ್ಳಿ ರಾಯಣ್ಣ ನವರ ಮೂರ್ತಿ ಪ್ರತಿಷ್ಟಾಪನೆಗೆ ತಮ್ಮ ಅಮೃತ ಹಸ್ತದಿಂದ ಗುದ್ದಲಿ ಪೂಜೆ ನೇರವೇರಿಸಿ ಮಾತನಾಡುತ್ತ, ಸಂಗೋಳ್ಳಿ ರಾಯಣ್ಣ ಹುಟ್ಟಿದು ಆಗಷ್ಟ 15 ಅದೇ ದಿನ ಭಾರತ ದೇಶಕ್ಕೆ ಸ್ವಾತಂತ್ರ್ಯ ಸಿಕ್ಕಿತ್ತು. ಸಂಗೊಳ್ಳಿ ರಾಯಣ್ಣ ಗಲ್ಲಿಗೇರಿಸಿದ ದಿನ ಜನವರಿ 26 ಅದೇ ದಿನ ಭಾರತ ಗಣರಾಜ್ಯವಾಯಿತು ಇಂತಹ ಮಹಾನ ದೇವ ಮಾನವನ ತತ್ವ ಆದರ್ಶಗಳನ್ನು ಯುವ ಪೀಳಿಗೆ ಪಾಲನೆ ಮಾಡಬೇಕು ಎಂದು ಹೇಳಿದರು.
ಈ ಸಂದರ್ಭದಲ್ಲಿ ಉದಗಟ್ಟಿಯ ಶ್ರೀ ಸಿದ್ದಪ್ಪ ಮಹಾರಾಜರು, ಶ್ರೀ ಶಿವಲಿಂಗ ಮಹಾಸ್ವಾಮಿಗಳು, ಹಾಲುಮತ ಮಹಾಸಭಾದ ರಾಜ್ಯ ಸಂಚಾಲಕ ಮಾರುತಿ ಮರಡಿ ಮೌರ್ಯ, ಸಮರ ಸಿಂಹ ಸಂಗೋಳ್ಳಿ ರಾಯಣ್ಣ ಸಂಘದ ಅಧ್ಯಕ್ಷರ ವಿಜಯ ಜಂಬಗಿ, ಕರ್ನಾಟಕ ಪ್ರದೇಶ ಯುವ ಕುರುಬರ ಸಂಘದ ಅಧ್ಯಕ್ಷ ಸಿದ್ದು ಕಂಕಣವಾಡಿ, ತಾಲೂಕಾ ಸಂಘಟನಾ ಕಾರ್ಯದರ್ಶಿ ಜ್ಞಾನೇಶ್ವರ ಭಂಗೇರ, ಭಿಮಶಿ ಕಿತ್ತೂರ, ಮುತ್ತೇಪ್ಪ ಜಂಗಟಿ, ಗ್ರಾಮ ಘಟಕಲ ಅಧ್ಯಕ್ಷ ಮುತ್ತು ಬಡವಣಿ, ಶಿವನಪ್ಪ ಹಳ್ಳೂರ, ಗ್ರಾ.ಪಂ ಸದ್ಯಸರಾದ ಸಿದ್ದಗೌಡ ಬಡವಣ್ಣಿ, ಮಾರುತಿ ಕಟಕಟಿ, ಶಂಕರ ಇಂಚಲ, ಕಲ್ಲಪ್ಪ ಬಂಗೇರ, ಗುರುಸಿದ್ದ ಹಳ್ಳೂರ, ಲಕ್ಕಪ್ಪ ವಗ್ಗನವರ, ಬಾಳಪ್ಪ ನೇಸರಗಿ, ಗಂಗಪ್ಪ ಡಬ್ಬನವರ, ಮಹಾಂತೇಶ ರೂಡನ್ನವರ, ಹೊಳೆಪ್ಪಾ ಹಳ್ಳೂರ, ಮುತ್ತೆಪ್ಪಾ ಐದುಡ್ಡಿ, ಮಹಾದೇವ ಹಳ್ಳೂರ, ಸಣ್ಣತಮ್ಮಾ ಪಾಟೀಲ ಹಾಗೂ ಸಮಾಜದ ಪ್ರಮುಖರು ಹಾಜರಿದ್ದರು.

Related posts: