ಹುಕ್ಕೇರಿ:ಮುಖಾಮುಖಿ ಬೈಕ್ ಡಿಕ್ಕಿ ಇಬ್ಬರ ಸಾವು : ಹುಕ್ಕೇರಿಯ ಮಸರಗುಪ್ಪಿಯಲ್ಲಿ ಘಟನೆ
ಮುಖಾಮುಖಿ ಬೈಕ್ ಡಿಕ್ಕಿ ಇಬ್ಬರ ಸಾವು : ಹುಕ್ಕೇರಿಯ ಮಸರಗುಪ್ಪಿಯಲ್ಲಿ ಘಟನೆ
ಹುಕ್ಕೇರಿ ಜು 4: ಎರೆಡು ಬೈಕಗಳ ಮಧ್ಯೆ ಮುಖಾಮುಖಿ ಡಿಕ್ಕಿ ಸಂಭವಿಸಿದ ಪರಿಣಾಮ ಇಬ್ಬರು ಸ್ಥಳದಲ್ಲಿಯೇ ಮೃತಪಟ್ಟ ಘಟನೆ ಬೆಳಗಾವಿ ಜಿಲ್ಲೆಯ ಹುಕ್ಕೇರಿ ತಾಲೂಕಿನ ಮಸರಗುಪ್ಪಿಯಲ್ಲಿ ನಡೆದಿದೆ.
ಮಸರಗುಪ್ಪಿ ಕ್ರಾಸ್ ಬಳಿ ಎರಡು ಬೈಕ್‌ಗಳ ಮಧ್ಯೆ ಮುಖಾಮುಖಿ ಡಿಕ್ಕಿಯಾಗಿದೆ. ಪರಿಣಾಮ ಇಬ್ಬರು ಸವಾರರು ಸಾವನ್ನಪ್ಪಿದ್ದು, ಇನ್ನಿಬ್ಬರ ಸ್ಥಿತಿ ಚಿಂತಾಜನಕವಾಗಿದೆ. ವೃಷಭ ಬೆಳವಿ (24), ಅಣ್ಣಪ್ಪ ಗಸ್ತಿ ಮೃತರು. ಗಂಭೀರವಾಗಿ ಗಾಯಗೊಂಡಿರುವ ಇಬ್ಬರನ್ನು ಮಹಾರಾಷ್ಟ್ರದ ಗಡಹಿಂಗ್ಲಜ ಆಸ್ಪತ್ರೆಗೆ ರವಾನೆ ಮಾಡಲಾಗಿದೆ. ಸ್ಥಳಕ್ಕೆ ಹುಕ್ಕೇರಿ ಪೊಲೀಸರು ಭೇಟಿ ನೀಡಿ ಪರಿಶೀಲನೆ ನಡೆಸಿ ಪ್ರಕರಣ ದಾಖಲಿಸಿಕೊಂಡಿದ್ದಾರೆ.