ಮೂಡಲಗಿ:ರಾಜ್ಯದಲ್ಲಿಯೇ ಮೂಡಲಗಿಯಲ್ಲಿ ಮೊದಲ ಸಲ ಸಂಕಲನಾತ್ಮಕ ಪರೀಕ್ಷೆಯ ಪೂರ್ವಭಾವಿ ಸರಣಿ ಪರೀಕ್ಷೆ : ಎ.ಸಿ ಮನ್ನಿಕೇರಿ
ರಾಜ್ಯದಲ್ಲಿಯೇ ಮೂಡಲಗಿಯಲ್ಲಿ ಮೊದಲ ಸಲ ಸಂಕಲನಾತ್ಮಕ ಪರೀಕ್ಷೆಯ ಪೂರ್ವಭಾವಿ ಸರಣಿ ಪರೀಕ್ಷೆ : ಎ.ಸಿ ಮನ್ನಿಕೇರಿ
ನಮ್ಮ ಬೆಳಗಾವಿ ಸುದ್ದಿ , ಮೂಡಲಗಿ ಪೆ.21 :
ರಾಜ್ಯ ಸರಕಾರ ಪ್ರಾಥಮಿಕ ಮತ್ತು ಪ್ರೌಢ ಶಾಲೆಯ ನಾಲ್ಕನೇ ತರಗತಿಯಿಂದ ಒಂಭತ್ತನೇ ತರಗತಿಯವರೆಗೆ ಕಳೇದ ಮೊದಲ ಸೇಮಿಸ್ಟರನಲ್ಲಿ ಸಿಎಸಿಎಸ್ ಪರೀಕ್ಷೆಯನ್ನು ಆಯೋಜಿಸಿತ್ತು. ಎರಡನೇಯ ಸಂಕಲನಾತ್ಮಕ ಪರೀಕ್ಷೆಯ ಪೂರ್ವಭಾವಿ ಸರಣಿ ಪರೀಕ್ಷೆಗಳನ್ನು ರಾಜ್ಯದಲ್ಲಿಯೇ ಮೊದಲ ಸಲ ಮೂಡಲಗಿ ತಾಲೂಕಿನಲ್ಲಿ ಆಯೋಜಿಸಿರುವದಾಗಿ ಮೂಡಲಗಿ ಬಿ.ಇ.ಒ ಎ.ಸಿ ಮನ್ನಿಕೇರಿ ತಿಳಿಸಿದರು.
ಅವರು ಶನಿವಾರದಂದು ಮೂಡಲಗಿ ವಲಯದಲ್ಲಿ ಹಮ್ಮಿಕೊಂಡ ಸಿಎಸಿಎಸ್ ಪೂರ್ವಭಾವಿ ಸರಣಿ ಪರೀಕ್ಷೆಯ ಕುರಿತು ವಿವರಿಸಿದರು. ಮೂಡಲಗಿ ವಲಯದ 425 ಪ್ರಾಥಮಿಕ ಮತ್ತು ಪ್ರೌಢ ಶಾಲೆಯ ಸುಮಾರು ಅರವತ್ತು ಸಾವಿರ ಮಕ್ಕಳು ಈ ಪರೀಕ್ಷೆಯಲ್ಲಿ ಭಾಗವಹಿಸಿದ್ದಾರೆ. ಮಕ್ಕಳಲ್ಲಿರುವ ಪರೀಕ್ಷಾ ಭಯ ಹಾಗೂ ಕಲಿಕೆಯಲ್ಲಿ ಹಿಂದೂಳಿದ ಮಕ್ಕಳ ಹಿತದೃಷ್ಠಿಯಿಂದಾಗಿ ಕಲಿಕಾ ಮಾಪನ ಮಾಡಲು ಸಹಾಯಕವಾಗುವದು. ವಲಯದಲ್ಲಿ ಎರಡು ಹಂತದ ಸರಣಿ ಪರೀಕ್ಷೆಗಳಿದ್ದು ಎಲ್ಲ ವಿಷಯಗಳನ್ನು ಒಳಗೊಂಡ ಪ್ರಶ್ನೆ ಪತ್ರಿಕೆಯಾಗಿದೆ. ನೂರಿತ ಅನುಭವಿ ಶಿಕ್ಷಕರ ತಂಡ ರಚಿಸಿ ಪ್ರಶ್ನೆ ಪತ್ರಿಕೆ ತಯಾರಿ ಕಾರ್ಯಾಗಾರದ ಮೂಲಕ ತಯಾರಿಸಲಾಗಿದೆ. ಪ್ರತಿ ಶಾಲೆಗಳಿಗೆ ಒಂದು ಪ್ರತಿಯನ್ನು ನೀಡುವ ಮೂಲಕ ಸ್ಥಳೀಯರ ಸಹಾಯ ಹಾಗೂ ಕಪ್ಪು ಹಲಗೆಯ ಮೇಲೆ ಪ್ರಶ್ನೆ ಪತ್ರಿಕೆಗಳನ್ನು ಬರೆಸುವ ಮೂಲಕ ಪರೀಕ್ಷೆಗಳನ್ನು ಆಯೋಜಿಸಲಾಗಿದೆ. ವಲಯದ ಬಿ.ಆರ್.ಸಿ, ಬಿ.ಆರ್.ಪಿ, ಸಿ.ಆರ್.ಪಿ, ಪ್ರಧಾನ ಗುರುಗಳು ಹಾಗೂ ಸಂಪನ್ಮೂಲ ಶಿಕ್ಷಕರ ಕಾರ್ಯ ಅಭಿನಂದನಾರ್ಹವಾಗಿದೆ ಎಂದು ಹೇಳಿದರು.
“ಚಿಕ್ಕೋಡಿ ಡಿಡಿಪಿಐ ಎಮ್.ಜಿ ದಾಸರ ಸರಣಿ ಪರೀಕ್ಷೆಯ ಆಯೋಜನೆ ಕುರಿತು ಹರ್ಷವ್ಯಕ್ತಪಡಿಸಿ, ಮೂಡಲಗಿ ವಲಯ ರಾಜ್ಯದಲ್ಲಿಯೇ ವಿನೂತನ ಕಾರ್ಯಚಟುವಟಿಕೆಗಳನ್ನು ಹಾಕಿಕೋಳ್ಳುವ ಮೂಲಕ ಶೈಕ್ಷಣಿಕವಾಗಿ ತನ್ನದೆಯಾದ ಛಾಪನ್ನು ಮೂಡಿಸಿದೆ. ಸದ್ಯ ನಾಲ್ಕನೇ ತರಗತಿಯಿಂದ ಒಂಭತ್ತನೇ ತರಗತಿಗಳಿಗೆ ಸರಣಿ ಪರೀಕ್ಷೆಗಳನ್ನು ಆಯೋಜಿಸುವ ಮೂಲಕ ವಾರ್ಷಿಕ ಪರೀಕ್ಷೆಗಳಿಗೆ ಮಕ್ಕಳನ್ನು ಅಣಿಗೋಳಿಸುವ ಕಾರ್ಯ ಮಾದರಿಯ ಕಾರ್ಯವಾಗಿದೆ ಎಂದು ಪ್ರತಿಕ್ರೀಯೆ ನೀಡಿದರು.”
ಸರಣಿ ಪರೀಕ್ಷೆಯ ಸಂದರ್ಭದಲ್ಲಿ ವಲಯದಲ್ಲಿ ದೈಹಿಕ ಪರಿವೀಕ್ಷಕ ಎಸ್.ಎ ನಾಡಗೌಡರ, ಶಿಕ್ಷಣ ಸಂಯೋಜಕ ಟಿ ಕರಿಬಸವರಾಜು, ಸಮನ್ವಯಾಧಿಕಾರಿ ಬಿ.ಎಚ್ ಮೋರೆ, ಬಿ.ಆರ್.ಪಿಗಳಾದ ಪಿ.ಜಿ ಪಾಟೀಲ, ಬಿ.ಎಮ್ ನಂದಿ, ಎ.ಬಿ ಚವಡನ್ನವರ, ಕೆ.ಎಲ್ ಮೀಶಿ ಮಿಂಚಿನ ಸಂಚಾರ ಮಾಡಿ ಸಲಹೆ ಸೂಚನೆಗಳನ್ನು ನೀಡಿದರು.