ಗೋಕಾಕ:ಬಾಕುಬಾಯಿ ದೇವಿಯ ಜಾತ್ರಾ ಮಹೋತ್ಸವ ಸಂಪನ್ನ
ಬಾಕುಬಾಯಿ ದೇವಿಯ ಜಾತ್ರಾ ಮಹೋತ್ಸವ ಸಂಪನ್ನ
ನಮ್ಮ ಬೆಳಗಾವಿ ಸುದ್ದಿ , ಬೆಟಗೇರಿ ಪೆ 23 :
ಗೋಕಾಕ ತಾಲೂಕಿನ ಬೆಟಗೇರಿ-ಬಗರನಾಳ ಗ್ರಾಮದ ಮಧ್ಯ ಭಾಗದಲ್ಲಿರುವ ಬಾಕುಬಾಯಿ ದೇವಿಯ ಜಾತ್ರಾ ಮಹೋತ್ಸವ ಶುಕ್ರವಾರ ಫೆ.22ರಂದು ವಿಜೃಂಭನೆಯಿಂದ ನಡೆದು ಸಂಪನ್ನಗೊಂಡಿತು.
ಬೆಳಿಗ್ಗೆ 7 ಗಂಟೆಗೆ ಸಂಪ್ರದಾಯದಂತೆ ಶ್ರೀ ದೇವಿಯ ಗದ್ದುಗೆಗೆ ಮಹಾಪೂಜೆ, ಮಹಾಭಿಷೇಕÀ ನಡೆದ ಬಳಿಕ ಪುರಜನರಿಂದ ಶ್ರೀ ದೇವಿಗೆ ಉಡಿತುಂಬುವ, ಪೂಜೆ, ಹರಕೆ ಸಮರ್ಪಿಸುವ ಹಾಗೂ ವಿವಿಧ ಧಾರ್ಮಿಕ ಕಾರ್ಯಕ್ರಮಗಳು ಭಕ್ತಿ, ಸಡಗರದಿಂದ ಜರುಗಿ, ಮಧ್ಯಾಹ್ನ 1 ಗಂಟೆಗೆ ಮಹಾಪ್ರಸಾದ, ಸಾಯಂಕಾಲ 7 ಗಂಟೆಗೆ ಗದಗ ಜಿಲ್ಲೆಯ ಶಿರೂಂಜಿ ಜ್ಞಾನಯೋಗಾಶ್ರಮದ ಬಸವ ಸಮರ್ಥ ಸ್ವಾಮಿಜಿ ಅವರಿಂದ ಪ್ರವಚನ ಕಾರ್ಯಕ್ರಮ ನಡೆಯಿತು.
ಜಾತ್ರಾ ಮಹೋತ್ಸವ ಸಮಿತಿ ಅಧ್ಯಕ್ಷ ಸಣ್ಣಪ್ಪ ಐದುಡ್ಡಿ, ಶಿವನಿಂಗಪ್ಪ ಕೋಣಿ, ಮಲ್ಲಪ್ಪ ಕಂಬಿ, ಯಮನಪ್ಪ ಹಾವಾಡಿ, ರಾಮಣ್ಣ ತಳವಾರ, ಶಿವಪುತ್ರ ಪರಮಾನಟ್ಟಿ, ಪ್ರಕಾಶ ಹಳಬರ, ವಿಠಲ ಮೆಳ್ಳಿಕೇರಿ, ಉದ್ದಪ್ಪ ಮೆಳ್ಳಿಕೇರಿ, ಬಸಪ್ಪ ತಳಂಗಿ, ದೇವಪ್ಪ ಮೆಳ್ಳಿಕೇರಿ, ಅಣ್ಣಪ್ಪ ಗೊಡೇರ, ಮಾಯಪ್ಪ ಕುರಿ, ಹನುಮಂತ ಹಾವಾಡಿ, ಭೀಮಶೆಪ್ಪ ಇಳಿಗೇರ, ಬೆಟಗೇರಿ, ಬಗರನಾಳ ಹಾಗೂ ಸುತ್ತಲಿನ ಹಳ್ಳಿಗಳ ಗಣ್ಯರು, ಜಾತ್ರಾ ಮಹೋತ್ಸವ ಸಮಿತಿ ಸದಸ್ಯರು, ಭಕ್ತರು ಪಾಲ್ಗೊಂಡಿದ್ದರು.