RNI NO. KARKAN/2006/27779|Wednesday, November 6, 2024
You are here: Home » breaking news » ಗೋಕಾಕ:ಬೆಟಗೇರಿ ಪ್ರೌಢ ಶಾಲೆಯ ಎಸ್ಸೆಸ್ಸೆಲ್ಸಿ ವಿದ್ಯಾರ್ಥಿಗಳಿಂದ ವಾಗ್ದಾನ..!

ಗೋಕಾಕ:ಬೆಟಗೇರಿ ಪ್ರೌಢ ಶಾಲೆಯ ಎಸ್ಸೆಸ್ಸೆಲ್ಸಿ ವಿದ್ಯಾರ್ಥಿಗಳಿಂದ ವಾಗ್ದಾನ..! 

ಬೆಟಗೇರಿ ಪ್ರೌಢ ಶಾಲೆಯ ಎಸ್ಸೆಸ್ಸೆಲ್ಸಿ ವಿದ್ಯಾರ್ಥಿಗಳಿಂದ ವಾಗ್ದಾನ..!

 

ಶಾಲೆಯ ನೋಟಿಸ್ ಫಲಕದ ಮೇಲೆ ವಿದ್ಯಾರ್ಥಿ ಭಾವಚಿತ್ರ : ಶಿಕ್ಷಕರಿಂದ ವಿಶೇಷ ಪಾಠ
*ಅಡಿವೇಶ ಮುಧೋಳ.

 

ನಮ್ಮ ಬೆಳಗಾವಿ ಸುದ್ದಿ , ಬೆಟಗೇರಿ ಪೆ 28 :

 
ಶಿಕ್ಷಕರಿಂದ ವಿಶೇಷ ಗಮನ… ಪಾಠ ಪ್ರವಚನ… ವಿದ್ಯಾರ್ಥಿಗಳಿಂದ ವಾಗ್ದಾನ.., ಫಲಿಂತಾಂಶ ಸುಧಾರಣೆಗೆ ಪ್ರೇರಣೆ… ಇದೇನು.? ಎಲ್ಲಿ ಅನ್ನುತ್ತೀರಾ.! ಇದು ಮೂಡಲಗಿ ಶೈಕ್ಷಣಿಕ ವಲಯ ವ್ಯಾಪ್ತಿಯ ಬೆಟಗೇರಿ ಗ್ರಾಮದ ವೀರಭದ್ರಪ್ಪ ವೀರಸಂಗಪ್ಪ ದೇಯಣ್ಣವರ ಸರ್ಕಾರಿ ಪ್ರೌಢ ಶಾಲೆಯ ಮುಖ್ಯಾಧ್ಯಾಪಕ, ಶಿಕ್ಷಕರು ಎಸ್ಸೆಸ್ಸೆಲ್ಸಿ ವಿದ್ಯಾರ್ಥಿಗಳಿಗೆ ಪ್ರೋತ್ಸಾಹಿಸಿ, ಹುಮ್ಮಸು ತುಂಬುವ ನಿಟ್ಟಿನಲ್ಲಿ ವಿದ್ಯಾರ್ಥಿಗಳಿಂದ ವಾಗ್ದಾನ ಎಂಬ ವಿನೂತನ ವಿಶೇಷ ಕಾರ್ಯಕ್ರಮ ಹಮ್ಮಿಕೊಂಡಿದ್ದಾರೆ.
ಏನೀದೂ ವಿದ್ಯಾರ್ಥಿ ವಾಗ್ದಾನ.! : ಶಾಲೆಯ ಎಸ್‍ಎಸ್‍ಎಲ್‍ಸಿ ಫಲಿತಾಂಶ ಹೆಚ್ಚಿಸುವ ನಿಟ್ಟಿನಲ್ಲಿ ಕೆಲವು ದಿನಗಳಿಂದ ಮುಖ್ಯೋಪಾಧ್ಯಯ, ಶಿಕ್ಷಕರು ಸೇರಿ ವಿದ್ಯಾರ್ಥಿಗಳಿಂದ ವಾಗ್ದಾನ ಎಂಬ ವಿನೂತನ ಕಾರ್ಯಕ್ರಮ ಆಯೋಜಿಸಿ, ವಿದ್ಯಾರ್ಥಿಗಳು ತಮ್ಮ ಜ್ಞಾನದ ಶಕ್ತಿ, ಸಾಮಥ್ರ್ಯಕ್ಕೆ ಅನುಗುಣವಾಗಿ ಫಲಿಂತಾಂಶ ಸ್ವ ಸಾಧನೆಯ ಘೋಷಣೆಯ ಕುರಿತು ಶಾಲೆಯ ನೋಟಿಸ್ ಫಲಕ ಮೇಲೆ ವಿದ್ಯಾರ್ಥಿ ತನ್ನ ಭಾವ ಚಿತ್ರ ಅಂಟಿಸುತ್ತಾರೆ.
ಬಳಿಕ ಸ್ವ ಘೋಷಣೆಯ ಫಲಿಂತಾಂಶ ಪಡೆಯುವ ವಿದ್ಯಾರ್ಥಿಗಳ ಸಾಮಥ್ರ್ಯ ಗುರುತಿಸಿ, ಶೇ75, ಶೇ80, ಶೇ90, ಶೇ95, ಶೇ100ರಷ್ಟು ಅಂಕ ಗಳಿಕೆಯ ಸಾಧನೆ ಸಾಮಥ್ರ್ಯದ ಮೇಲೆ ಕೆಲವು ವಿದ್ಯಾರ್ಥಿಗಳ ಗುಂಪುಗಳನ್ನಾಗಿಸಿ ಶಿಕ್ಷಕರು ಆ ಮಕ್ಕಳಲ್ಲಿ ಹುಮ್ಮಸ್ಸು ತುಂಬಿ, ವಿಶೇಷ ಪಾಠ ಪ್ರವಚನ, ನುರಿತ ಶಿಕ್ಷಕರಿಂದ ಪಠ್ಯದ ಉಪನ್ಯಾಸ ಸೇರಿದಂತೆ ಪಠ್ಯ ಮತ್ತು ಪಠ್ಯೇತರ ಚಟುವಟಿಕೆಯ ವಿಶೇಷ ತರಬೇತಿ ನೀಡುತ್ತಿದ್ದಾರೆ. ಅಲ್ಲದೇ ಶಾಲೆಯ ಮುಖ್ಯೋಪಾಧ್ಯಯ, ಶಿಕ್ಷಕರು ಹೆಚ್ಚು ಹೆಚ್ಚು ಅಂಕ ಗಳಿಸುವಂತೆ ವಿದ್ಯಾರ್ಥಿಗಳಿಗೆ ವಿಶೇಷ ಕಲಿಕಾ ಸಾಮಗ್ರಿ ನೀಡಿ ಅವರಲ್ಲಿ ಹುಮ್ಮಸ್ಸು ತುಂಬುತ್ತಿದ್ದಾರೆ.
ಹಲವಾರು ವಿನೂತನ ಕಾರ್ಯಕ್ರಮಗಳನ್ನು ಶಾಲೆಯ ಎಸ್ಸೆಸ್ಸೆಲ್ಸಿ ವಿದ್ಯಾರ್ಥಿಗಳಿಗೆ ಹಮ್ಮಿಕೊಂಡು ಎಸ್ಸೆಸ್ಸೆಲ್ಸಿ ಪರೀಕ್ಷೆ ಬಗ್ಗೆ ಅರಿವು, ಪರೀಕ್ಷೆಯ ಭಯ ಮುಕ್ತ ವಾತಾವರಣ ನಿರ್ಮಾಣ, ಪರೀಕ್ಷೆ ಬರೆಯುವ ವಿಧಾನ ಸೇರಿದಂತೆ ಹಲವಾರು ವಿಷಯಗಳ ಕುರಿತು ಹಾಗೂ ಮಕ್ಕಳ ಕಲಿಕೆಗೆ ಬೇಕಾದ ಪಾಠೋಪಕರಣಗಳ ಸಮಸ್ಯೆಗಳನ್ನು ಅರಿತು ಅಂತಹ ವಿದ್ಯಾರ್ಥಿಗಳಿಗೆ ಸ್ಥಳೀಯ ಶಿಕ್ಷಣ ಪ್ರೇಮಿಗಳ ಮೂಲಕ ಸಹಾಯ, ಸಹಕಾರ ಪೂರೈಸಲಾಗುತ್ತಿದೆ ಎಂದು ಶಾಲೆಯ ಮುಖ್ಯೋಪಾಧ್ಯಯ ರಮೇಶ ಅಳಗುಂಡಿ ತಿಳಿಸಿದ್ದಾರೆ.

“ಬೆಟಗೇರಿ ವಿವಿಡಿ ಸರ್ಕಾರಿ ಪ್ರೌಢ ಶಾಲೆಯಲ್ಲಿ ಎಸ್ಸೆಸ್ಸೆಲ್ಸಿ ಮಕ್ಕಳಿಗೆ ಹಮ್ಮಿಕೊಂಡಿರುವ ವಿದ್ಯಾರ್ಥಿಗಳಿಂದ ವಾಗ್ದಾನ ಎಂಬ ವಿನೂತನ ಕಾರ್ಯಕ್ರಮ ಆಯೋಜನೆಯ ಮೂಲಕ ಶಾಲೆಯ ಮುಖ್ಯಾಧ್ಯಾಪಕ, ಶಿಕ್ಷಕರು ಮಕ್ಕಳಲ್ಲಿ ಉತ್ಸವ, ಪ್ರೋತ್ಸಾಹ ತುಂಬುತ್ತಿರುವ ಕಾರ್ಯ ಶ್ಲಾಘನೀಯವಾಗಿದೆ. ಈ ವಿನೂತನ ಕಾರ್ಯಕ್ರಮ ಆಯೋಜನೆ ಎಸ್ಸೆಸ್ಸೆಲ್ಸಿ ಮಕ್ಕಳು ವಾರ್ಷಿಕ ಪರೀಕ್ಷೆಯಲ್ಲಿ ಯಶಸ್ಸು ಸಾಧಿಸಲು ಪ್ರೇರಣಾ ಪೂರಕವಾಗಿವೆ. *

ಅಜೀತ ಮನ್ನಿಕೇರಿ. ಬಿಇಒ ಮೂಡಲಗಿ ಶೈಕ್ಷಣಿಕ ವಲಯ.

“ವಿದ್ಯಾರ್ಥಿಗಳ ಜೀವನದಲ್ಲಿ 10ನೇ ತರಗತಿ ಬಹುಮುಖ್ಯವಾದ ಘಟ್ಟವಾಗಿದೆ. ಹಲವು ವಿನೂತನ ವಿಶೇಷ ಕಾರ್ಯಕ್ರಮಗಳ ಮೂಲಕ ಶಾಲೆಯ ಎಸ್ಸೆಸ್ಸೆಲ್ಸಿ ವಿದ್ಯಾರ್ಥಿಗಳ ಕಲಿಕೆಗೆ ಪ್ರೇರಣೆ ನೀಡುತ್ತಿರುವ ಶಾಲೆಯ ಮುಖ್ಯೋಪಾಧ್ಯಯ, ಶಿಕ್ಷಕರ ಸೇವೆ ಶ್ಲಾಘನೀಯವಾಗಿದೆ. *

ಕುತುಬುಸಾಬ ಮಿರ್ಜಾನಾಯ್ಕ. ಅಧ್ಯಕ್ಷರು ಎಸ್‍ಡಿಎಮ್‍ಸಿ ವಿವಿಡಿ ಸ.ಪ್ರೌ.ಶಾಲೆ ಬೆಟಗೇರಿ

Related posts: