RNI NO. KARKAN/2006/27779|Saturday, October 19, 2024
You are here: Home » breaking news » ಗೋಕಾಕ:ಸರಕಾರಿ ಆಸ್ಪತ್ರೆಯಲ್ಲಿಯ ಅವ್ಯವಸ್ಥೆಯನ್ನು ಸುಧಾರಿಸುವಂತೆ ಆಗ್ರಹಿಸಿ ಕರವೇಯಿಂದ ಪ್ರತಿಭಟನಾ ಧರಣಿ

ಗೋಕಾಕ:ಸರಕಾರಿ ಆಸ್ಪತ್ರೆಯಲ್ಲಿಯ ಅವ್ಯವಸ್ಥೆಯನ್ನು ಸುಧಾರಿಸುವಂತೆ ಆಗ್ರಹಿಸಿ ಕರವೇಯಿಂದ ಪ್ರತಿಭಟನಾ ಧರಣಿ 

ಸರಕಾರಿ ಆಸ್ಪತ್ರೆಯಲ್ಲಿಯ ಅವ್ಯವಸ್ಥೆಯನ್ನು ಸುಧಾರಿಸುವಂತೆ ಆಗ್ರಹಿಸಿ ಕರವೇಯಿಂದ ಪ್ರತಿಭಟನಾ ಧರಣಿ

 
ನಮ್ಮ ಬೆಳಗಾವಿ ಸುದ್ದಿ , ಗೋಕಾಕ ಮಾ : 2

 
ಸರಕಾರಿ ಆಸ್ಪತ್ರೆಯಲ್ಲಿಯ ಅವ್ಯವಸ್ಥೆಯನ್ನು ಸುಧಾರಿಸಿ, ತಪ್ಪಿತಸ್ಥರ ವಿರುದ್ದ ಸೂಕ್ತ ಕಾನೂನು ಕ್ರಮ ಜರುಗಿಸುವಂತೆ ಆಗ್ರಹಿಸಿ ಕರ್ನಾಟಕ ರಕ್ಷಣಾ ವೇದಿಕೆ ಕಾರ್ಯಕರ್ತರು ತಾಲೂಕಾ ಅಧ್ಯಕ್ಷ ಬಸವರಾಜ ಖಾನಪ್ಪನವರ ನೇತೃತ್ವದಲ್ಲಿ ಒಂದು ದಿನದ ಸಾಂಕೇತಿಕ ಪ್ರತಿಭಟನಾ ಧರಣಿ ನಡೆಸಿದರು.
ಶನಿವಾರದಂದು ಮುಂಜಾನೆ ಸರಕಾರಿ ಆಸ್ಪತ್ರೆಯ ಆವರಣದಲ್ಲಿ ಸೇರಿದ ಕರವೇ ಕಾರ್ಯಕರ್ತರು ಆಸ್ಪತ್ರೆಯ ವೈದ್ಯರ ವಿರುದ್ಧ ಘೋಷಣೆಗಳನ್ನು ಕೂಗಿ ತಮ್ಮ ಆಕ್ರೋಶವನ್ನು ವ್ಯಕ್ತಪಡಿಸಿ ಸುಮಾರು ನಾಲ್ಕು ಘಂಟೆಗಳ ಕಾಲ ಪ್ರತಿಭಟನಾ ಧರಣಿ ನಡೆಸಿದರು.
ಧರಣಿ ಸ್ಥಳಕ್ಕೆ ಮನವಿ ಸ್ವೀಕರಿಸಲು ಆಗಮಿಸಿದ ಮುಖ್ಯ ವೈದ್ಯಾಧಿಕಾರಿ ಆರ್. ಎಸ್. ಬೆಣಚಿನಮರಡಿ ಅವರಿಗೆ ಮನವಿ ನೀಡಲು ನಿರಾಕರಿಸಿದ ಕಾರ್ಯಕರ್ತರು ಜಿಲ್ಲಾ ವೈದ್ಯಾಧಿಕಾರಿ ಸ್ಥಳಕ್ಕೆ ಆಗಮಿಸುವಂತೆ ಪಟ್ಟು ಹಿಡಿದರು. ಧರಣಿ ಸ್ಥಳಕ್ಕೆ ಆಸ್ಪತ್ರೆಯ ಎಲ್ಲ ಸಿಬ್ಬಂದಿಗಳನ್ನು ಕರೆಯಿಸಿ ಮುಖ್ಯ ವೈದ್ಯಾಧಿಕಾರಿಗಳು ಧರಣಿ ಸ್ಥಳದಲ್ಲಿಯೇ ಸಭೆ ನಡೆಯಿಸಿ ಎಲ್ಲ ಸಿಬ್ಬಂದಿಗಳಿಗೆ ಖಡಕ್ ಎಚ್ಚರಿಕೆ ನೀಡಿ ಲೋಪವೆಸಗಿದವರ ಮೇಲೆ ಕಠಿಣ ಕ್ರಮ ಜರುಗಿಸುವ ಭರವಸೆ ನೀಡಿದರು.

ಧರಣಿ ನಿರತರನ್ನು ಭೇಟಿಯಾದ ಅಪರ ಜಿಲ್ಲಾ ವೈದ್ಯಾಧಿಕಾರಿ ಮುನ್ಯಾಳ ಅವರಿಗೆ ಮನವಿ ಸಲ್ಲಿಸುತ್ತಿರುವ ಕರವೇ ಕಾರ್ಯಕರ್ತರು

ನಂತರ ಸ್ಥಳಕ್ಕೆ ಆಗಮಿಸಿದ ಜಿಲ್ಲಾ ಅಪರ ವೈದ್ಯಾಧಿಕಾರಿ ಮುನ್ಯಾಳ ಅವರ ಮುಖಾಂತರ ಜಿಲ್ಲಾ ವೈದ್ಯಾಧಿಕಾರಿಗಳಿಗೆ ಮನವಿ ಅರ್ಪಿಸಿದರು.
ಕಳೆದ ಹಲವಾರು ತಿಂಗಳಿನಿಂದ ಗೋಕಾಕ ಸರಕಾರಿ ಆಸ್ಪತ್ರೆಯಲ್ಲಿ ರೋಗಿಗಳಿಗೆ ಸರಿಯಾಗಿ ಚಿಕಿತ್ಸೆ ದೊರೆಯುತ್ತಿಲ್ಲ. ಇದರಿಂದ ಬಡ ರೋಗಿಗಳು ಸಾಕಷ್ಟು ತೊಂದರೆಯನ್ನು ಅನುಭವಿಸುತ್ತಿದ್ದಾರೆ. ಮಾನ್ಯ ಶಾಸಕರ ಸತತ ಪರಿಶ್ರಮ ಮತ್ತು ಕಾಳಜಿಯಿಂದ ಗೋಕಾಕ ಸರಕಾರಿ ಆಸ್ಪತ್ರೆಗೆ ಎಲ್ಲ ರೀತಿಯ ಸವಲತ್ತುಗಳನ್ನು ದೊರಕಿಸಿದ್ದು, ಅಲ್ಟ್ರಾಸೌಂಡ ಸ್ಕ್ಯಾನಿಂಗ್, ಹೈಟೆಕ್ ರಕ್ತ ತಪಾಸಣೆ ಕೇಂದ್ರ, ಸುಸಜ್ಜಿತ ಡಯಾಲೆಸಿಸ್ ಘಟಕ, ಔಷಧಿ ಉಗ್ರಾಣ ಘಟಕ, ಹೊಸ ಸುಸಜ್ಜಿತ ಮಹಿಳಾ ಮತ್ತು ಮಕ್ಕಳ ಆಸ್ಪತ್ರೆ ಸೇರಿದಂತೆ ಹೆರಿಗೆ, ಮಕ್ಕಳ, ಕಿವಿ ಮತ್ತು ಗಂಟಲು, ಹಲ್ಲಿನ, ಹೃದಯ ಸೇರಿದಂತೆ ವಿವಿಧ ತಜ್ಞ ವೈದ್ಯರು ಈ ಆಸ್ಪತ್ರೆಯಲ್ಲಿ ಕಾರ್ಯ ನಿರ್ವಹಿಸುತ್ತಿದ್ದರು ಸಹ ಇಲ್ಲಿ ಬರುವ ರೋಗಿಗಳಿಗೆ ಸರಿಯಾಗಿ ಚಿಕಿತ್ಸೆ ದೊರಕದಿಲ್ಲದಿರುವುದು ತುಂಬಾ ಖೇದಕರ ವಿಷಯವಾಗಿದೆ.
ರಾತ್ರಿ ಸಮಯದಲ್ಲಿ ತುರ್ತು ಪರಸ್ಥಿತಿಯಲ್ಲಿ ಸರಕಾರಿ ಆಸ್ಪತ್ರೆಗೆ ಬರುವ ರೋಗಿಗಳಿಗೆ ರಾತ್ರಿ ಸಮಯದಲ್ಲಿ ಕಾರ್ಯ ನಿರ್ವಹಿಸುವ ದಾದಿಯರು ರೋಗಿಗಳೊಂದಿಗೆ ಸರಿಯಾಗಿ ಸ್ಪಂದನೆ ನೀಡದೇ ಕರ್ತವ್ಯ ನಿರತ ವೈದ್ಯರಿಗೆ ತಿಳಿಸದೇ ಬೇಜವಾಬ್ದಾರಿಯುತ ಧೋರಣೆಯನ್ನು ತೋರುತ್ತಿದ್ದಾರೆ. ಇದರಿಂದ ಸಾವು ಬದುಕಿನ ಮದ್ಯೆ ಹೋರಾಡುತ್ತಿರುವ ರೋಗಿಗಳು ತೊಂದರೆಯನ್ನು ಅನುಭವಿಸಿ ಖಾಸಗಿ ವೈದ್ಯರ ಮೊರೆ ಹೋಗÀುತ್ತಿರುವ ನಿದರ್ಶನಗಳು ಈ ಆಸ್ಪತ್ರೆಯಲ್ಲಿ ಆಗಾಗ ನೋಡುತ್ತಿರುತ್ತೇವೆ. ಬಹು ಮುಖ್ಯವಾಗಿ ರಾತ್ರಿ ಸಮಯದಲ್ಲಿ ಕರ್ತವ್ಯದಲ್ಲಿ ಇರಬೇಕಾದ ವೈದ್ಯರು ಆಸ್ಪತ್ರೆಯಲ್ಲಿ ಇರುವದೇ ಇಲ್ಲ. ಇದರ ಬಗ್ಗೆ ಮೌಖಿಕವಾಗಿ ವೈದ್ಯಾಧಿಕಾರಿಗಳಿಗೆ ಹೇಳಿದರೂ ಯಾವುದೇ ಪ್ರಯೋಜನವಾಗಿಲ್ಲ.
ಹೆರಿಗೆ ಸಂಬಂಧಿ ರೋಗಿಗಳು ಚಿಕಿತ್ಸೆಗಾಗಿ ಆಸ್ಪತ್ರೆಗೆ ಬಂದರೆ ಅವರ ಆರೋಗ್ಯ ತಪಾಸಣೆಗಾಗಿ ಈ ಆಸ್ಪತ್ರೆಯಲ್ಲಿ ಎಲ್ಲ ಸೌಲಭ್ಯಗಳು ಇದ್ದರೂ ಸಹ ಇಲ್ಲಿ ಕಾರ್ಯ ನಿರ್ವಹಿಸುವ ಹೆರಿಗೆ ವೈದ್ಯಾಧಿಕಾರಿ ಸೇರಿದಂತೆ ಇನ್ನೀತರ ವೈದ್ಯರು ಅಲ್ಟ್ರಾಸೌಂಡ ಸ್ಕ್ಯಾನಿಂಗ ಮಾಡದೇ ಕಮೀಷನದ ಆಸೆಗಾಗಿ ಹೊರಗಡೆ ಸ್ಕ್ಯಾನಿಂಗ ಮಾಡಲು ಹೇಳಿ ಗರ್ಭಿಣಿಯರಿಗೆ ಮೋಸ ಮಾಡುತ್ತಿದ್ದಾರೆ. ಎಲ್ಲ ವಿಭಾಗದ ತಜ್ಞವೈದÀ್ಯರು ಇದ್ದರೂ ಸಹ ಕೆಲ ವೈದ್ಯರು ಸರಿಯಾಗಿ ಆಸ್ಪತ್ರೆಯಲ್ಲಿ ಇರುವದೇ ಇಲ್ಲ. ಇದ್ದರೂ ಸಹÀ ವೈದ್ಯರ ಬಳಿ ಆರೋಗ್ಯ ತಪಾಸನೆಗಾಗಿ ಬರುವ ರೋಗಿಗಳು ಆಯಾ ವೈದ್ಯರ ಬಳಿ ಕುರಿ ಹಿಂಡಿನಂತೆ ಮುಗಿ ಬಿಳುತ್ತಾರೆ. ರೋಗಿಗಳನ್ನು ಸರತಿ ಸಾಲಿನಲ್ಲಿ ನಿಲ್ಲಿಸಿ ಅಥವಾ ಹೊರಗಡೆ ಇರುವ ಆಸನಗಳಲ್ಲಿ ಕೂಡ್ರಿಸಿ ಒಬ್ಬೊಬ್ಬರನ್ನಾಗಿ ಒಳಗಡೆ ಕಳುಹಿಸುವ ಕನಿಷ್ಠ ಸೌಜನ್ಯ ಇಲ್ಲಿಯ ವೈದ್ಯರಿಗಿಲ್ಲ. ಹೆರಿಗೆ ಆದ ನಂತರ ಶಿಶುಗಳನ್ನು ಪರಿಕ್ಷೆ ಮಾಡಲು ಚಿಕ್ಕ ಮಕ್ಕಳ ತಜ್ಞ ಇದ್ದರೂ ಸಹ ಕಮೀಷನ್ ಆಸೆಗಾಗಿ ನಗರದಲ್ಲಿ ಇರುವ ಸುರಕ್ಷಾ ಹೆಸರಿನ ಐ.ಸಿ.ಯು. ಕೇಂದ್ರಕ್ಕೆ ಕಳುಹಿಸಲಾಗುತ್ತಿದೆ. ಶಿಶುಗಳು ಆರೋಗ್ಯವಂತರಾಗಿದ್ದರೂ ಸಹ ಕಮೀಷನ್ ಆಸೆಗಾಗಿ ಮಕ್ಕಳನ್ನು ಇಲ್ಲಿ ಕಳುಹಿಸುವ ಪರಿಪಾಠ ಗೋಕಾಕ ಸರಕಾರಿ ಆಸ್ಪತ್ರೆಯಲ್ಲಿ ಇದೆ.
ನಗರದಲ್ಲಿ ಆಗಾಗ ಹರಡುವ ಮಾರಣಾಂತಿಕ ಕಾಯಿಲೆಗಳಾದ ಡೆಂಗ್ಯೂ, ಕಾಮಾಲೆ, ವಾಂತಿ ಬೇಧಿ ಸೇರಿದಂತೆ ಇನ್ನೀತರ ರೋಗಗಳು ನಗರದಲ್ಲಿ ಹರಡಿದರೂ ಸಹ ಅವುಗಳನ್ನು ತಡೆಗಟ್ಟಲು ಸಾರ್ವಜನಿಕರಲ್ಲಿ ಜಾಗೃತಿ ಮೂಡಿಸುವ ಕಾರ್ಯ ಈ ಆಸ್ಪತ್ರೆಯಲ್ಲಿ ಸರಿಯಾಗಿ ನಡೆಯುತ್ತಿಲ್ಲ. ಇದಕ್ಕಾಗಿ ಸರಕಾರದಿಂದ ನೇಮಕವಾಗಿರುವ ಅಧಿಕಾರಿಗಳು ಆಸ್ಪತ್ರೆಯ ಆವರಣದಲ್ಲಿಯೇ ಕಾಲ ಕಳೆದು ತಮ್ಮ ಬೇಜವಾಬ್ದಾರಿಯನ್ನು ತೋರುತ್ತಿದ್ದಾರೆ. ಇದಕ್ಕೆ ಸಂಬಂಧಿಸಿದಂತೆ ನಗರದಲ್ಲಿರುವ ರಕ್ತ ತಪಾಸಣೆ ಕೇಂದ್ರಗಳಿಗೆ ಯಾವದೇ ರೋಗಗಳು ಕಂಡು ಬಂದರೆ ಸರಕಾರಿ ಆಸ್ಪತ್ರೆಗೆ ಸೂಚಿಸುವಂತೆ ನೋಟಿಸು ನೀಡದೇ ಇಲ್ಲಿಯ ವೈದ್ಯಾಧಿಕಾರಿ ಕರ್ತವ್ಯ ಲೋಪವೆಸಗುತ್ತಿದ್ದಾರಲ್ಲದೇ ಹೆರಿಗೆ ಶಸ್ತ್ರ ಚಿಕಿತ್ಸೆ ಸೇರಿದಂತೆ ಇನ್ನೀತರ ಶಸ್ತ್ರ ಚಿಕಿತ್ಸೆಗಳಿಗೆ ರೋಗಿಗಳಿಂದ ಬೇಕಾಬಿಟ್ಟಿಯಾಗಿ ಹಣ ವಸೂಲಿ ಮಾಡುತ್ತಿದ್ದಾರೆ. ಈ ಎಲ್ಲ ಕಾರಣಗಳಿಂದ ಇಲ್ಲಿಗೆ ಬರುವ ಸಾರ್ವಜನಿಕರು ಸಾಕಷ್ಟು ತೊಂದರೆಯನ್ನು ಅನುಭವಿಸಿ ಆಸ್ಪತ್ರೆಯಲ್ಲಿಯ ಅವ್ಯವಸ್ಥೆಯನ್ನು ಕಂಡು ಹಿಡಿ ಶಾಪ ಹಾಕುತ್ತಿದ್ದಾರೆ. ಈ ಎಲ್ಲ ಪ್ರಕರಣಗಳನ್ನು ಅತ್ಯಂತ ಗಂಭಿರವಾಗಿ ಪರಿಗಣಿಸಿ ಇದಕ್ಕೆಲ್ಲ ಕಾರಣಿಕರ್ತರಾದ ವೈದ್ಯರ ಮತ್ತು ದಾದಿಯರಗಳ ಮೇಲೆ ಸೂಕ್ತ ಕಾನೂನು ಕ್ರಮ ಜರುಗಿಸಿ ಇಲ್ಲಿಯ ಅವ್ಯವಸ್ಥೆಯನ್ನು ಸರಿಪಡಿಸಿ, ಇಲ್ಲಿಯ ಎಲ್ಲ ಸವಲತ್ತುಗಳನ್ನು ಸಾರ್ವಜನಿಕರಿಗೆ ತಲುಪುವಂತೆ ಕಠಿಣ ಕ್ರಮ ಕೈಗೊಳ್ಳಬೇಕೆಂದು ಸಮಸ್ತ ನಾಗರೀಕರ ಪರವಾಗಿ ಕ.ರ.ವೇ. ಈ ಮನವಿಯಲ್ಲಿ ವಿನಂತಿಸಲಾಗಿದೆ.
ಈ ಪ್ರತಿಭಟನೆಯಲ್ಲಿ ಕೃಷ್ಣಾ ಖಾನಪ್ಪನವರ, ಸಾದಿಕ್ ಹಲ್ಯಾಳ, ದೀಪಕ್ ಹಂಜಿ, ಮಂಜುನಾಥ ಪ್ರಭುನಟ್ಟಿ, ಮಲ್ಲು ಸಂಪಗಾರ, ರಮೇಶ ಕಮತಿ, ಕಿರಣ ಕೊಳವಿ, ನಿಜಾಮ ನಧಾಪ, ರೆಹಮಾನ ಮೊಕಾಶೆ, ಮಹಾದೇವ ಮಕ್ಕಳಗೇರಿ, ನಿಯಾಜ ಪಟೇಲ, ಹನೀಫ ಸನದಿ, ಮಲ್ಲಪ್ಪ ತಲೆಪ್ಪಗೋಳ, ಬಸು ಗಾಡಿವಡ್ಡರ, ರಾಮ ಕುಡ್ಡೆಮ್ಮಿ, ಕಿರಣ ತೊಗರಿ, ಯಲ್ಲಪ್ಪಾ ಧರ್ಮಟ್ಟಿ, ರಾಜು ಪಾಮನಾಯಕ, ಶಾನು ಲಕ್ಕಿ, ದಸ್ತಗೀರ ಮುಲ್ಲಾ, ಜಗದೀಶ ತಳವಾರ, ರವಿ ನಾಂವಿ, ಯಶವಂತ ಗ್ಯಾನಪ್ಪನವರ, ಸಂಜು ಪಾಮನಾಯಕ, ಶಾರವ್ವಾ ಶೇಖರಗೋಳ, ಗೌರವ್ವಾ ಕೆ, ಲಕ್ಷ್ಮೀ ಕೆ, ತೇಜಸ್ವಿನಿ, ರೇಖಾ, ಕಮಲಾ ದರ್ಶನ, ಬಾಯವ್ವಾ ಶೇಖರಗೋಳ, ಸುಸಲವ್ವಾ ಹೆಳವ್ವಗೋಳ, ಯಲ್ಲವ್ವಾ ಹೆಳವ್ವಗೋಳ, ಕೋಲಕಾರ ಸೇರಿದಂತೆ ಇನ್ನೂ ಅನೇಕರು ಇದ್ದರು.

Related posts: