RNI NO. KARKAN/2006/27779|Friday, November 22, 2024
You are here: Home » breaking news » ಗೋಕಾಕ:ಶರಣರ ವಚನ ಸಾಹಿತ್ಯವು ಎಲ್ಲ ಕಾಲಘಟ್ಟಕ್ಕೂ ಪ್ರಸ್ತುತವಾಗಿದ್ದು : ಪ್ರಕಾಶ ಹೊಳೆಪ್ಪಗೋಳ

ಗೋಕಾಕ:ಶರಣರ ವಚನ ಸಾಹಿತ್ಯವು ಎಲ್ಲ ಕಾಲಘಟ್ಟಕ್ಕೂ ಪ್ರಸ್ತುತವಾಗಿದ್ದು : ಪ್ರಕಾಶ ಹೊಳೆಪ್ಪಗೋಳ 

ಶರಣರ ವಚನ ಸಾಹಿತ್ಯವು ಎಲ್ಲ ಕಾಲಘಟ್ಟಕ್ಕೂ ಪ್ರಸ್ತುತವಾಗಿದ್ದು : ಪ್ರಕಾಶ ಹೊಳೆಪ್ಪಗೋಳ

 

ನಮ್ಮ ಬೆಳಗಾವಿ ಸುದ್ದಿ , ಗೋಕಾಕ ಮಾ 4 :

 
ಶರಣರ ವಚನ ಸಾಹಿತ್ಯವು ಎಲ್ಲ ಕಾಲಘಟ್ಟಕ್ಕೂ ಪ್ರಸ್ತುತವಾಗಿದ್ದು, ಸರ್ವರಿಗೂ ಸರ್ವಕಾಲಕ್ಕೂ ಸತ್ಯವಾಗಿವೆ ಎಂದು ತಹಶೀಲದಾರ ಪ್ರಕಾಶ ಹೊಳೆಪ್ಪಗೋಳ ಹೇಳಿದರು.
ಸೋಮವಾರದಂದು ನಗರದ ತಾ.ಪ. ಸಭಾ ಭವನದಲ್ಲಿ ತಾಲೂಕಾಡಳಿತ, ನಗರ ಸಭೆ ಹಾಗೂ ಸಮಾಜ ಕಲ್ಯಾಣ ಇಲಾಖೆಯ ಸಂಯುಕ್ತಾಶ್ರಯದಲ್ಲಿ ಹಮ್ಮಿಕೊಂಡ ಕಾಯಕ ಶರಣರ(ದಲಿತ ವಚನಕಾರರ) ಜಯಂತಿ ಉತ್ಸವ ಕಾರ್ಯಕ್ರಮದ ಅಧ್ಯಕ್ಷತೆಯನ್ನು ವಹಿಸಿ ಅವರು ಮಾತನಾಡಿದರು.
ವಚನ ಪರಂಪರೆಗೆ ನಾಂದಿಯಾದ 12ನೇ ಶತಮಾನದ ಸಂಧಿಗ್ದ ಪರಿಸ್ಥಿತಿಯಲ್ಲಿ ಸಮಾನತೆಗಾಗಿ ಕಲ್ಯಾಣಕ್ರಾಂತಿಯನ್ನು ಮಾಡುವ ಮೂಲಕ ವಚನ ಸಾಹಿತ್ಯದ ಅಲೆಯನ್ನು ಎಬ್ಬಿಸಿತ್ತು. ಜಾತಿ ವ್ಯವಸ್ಥೆ, ಸಮಾಜದ ಕಟ್ಟು-ಪಾಡುಗಳು, ಮೇಲು-ಕೀಳೆಂಬ ಭಾವನೆ, ಮೂಡನಂಬಿಕೆ, ಕಂದಾಚಾರ, ಸಮಾಜದ ಅಂಕು-ಡೊಂಕುಗಳನ್ನು ತಿದ್ದಿ ತೀಡಿ ಹೊಡೆದೊಡಿಸುವಲ್ಲಿ ಶರಣ ವಚನಗಳು ಮಾನವೀಯ ಮೌಲ್ಯಗಳನ್ನು ಎತ್ತಿ ಹಿಡಿಯುವ ಕಾರ್ಯವನ್ನು ಮಾಡಿವೆ ಎಂದು ತಿಳಿಸಿದ ಅವರು ಶರಣರ ವಚನಗಳನ್ನು ನಮ್ಮ ನಿಜ ಜೀವನದಲ್ಲಿ ಅಳವಡಿಸಿಕೊಂಡಾಗ ಮಾತ್ರ ಜಯಂತಿ ಆಚರಣೆ ಕಾರ್ಯಕ್ರಮಕ್ಕೆ ಮಹತ್ವ ಬರುತ್ತದೆ ಎಂದು ತಿಳಿಸಿದರು.
ಇದೇ ಸಂದರ್ಭದಲ್ಲಿ ಎಲ್‍ಇಟಿ ಕಾಲೇಜಿನ ಉಪನ್ಯಾಸಕ ವಿ.ಬಿ.ಕಣಿಲದಾರ ದಲಿತ ವಚನಕಾರರ ಕುರಿತು ವಿಶೇಷ ಉಪನ್ಯಾಸ ನೀಡಿದರು. ನಂತರ ವಿವಿಧ ಕ್ಷೇತ್ರದಲ್ಲಿ ಸಾಧನೆ ಮಾಡಿದ ಕಲಾವಿದರನ್ನು ಸತ್ಕರಿಸಲಾಯಿತು.
ವೇದಿಕೆ ಮೇಲೆ ಪೌರಾಯುಕ್ತ ಎಮ್.ಎಚ್.ಅತ್ತಾರ, ವಿವಿಧ ಇಲಾಖೆಯ ಅಧಿಕಾರಿಗಳಾದ ಎಮ್.ಎಮ್. ನದಾಫ,ಎನ್.ಆರ್.ಪಾಟೀಲ, ಎಲ್.ಬಿ.ಕೌಜಲಗಿ, ಎಸ್.ಕೆ.ಕುಲಕರ್ಣಿ, ಎಸ್.ಬಿ.ಕಟ್ಟಿಮನಿ, ನಗರ ಸಭೆ ಸದಸ್ಯ ಬಸವರಾಜ ಆರೆನ್ನವರ ಸೇರಿದಂತೆ ಅನೇಕರು. ಎ.ಜಿ.ಕೋಳಿ ಸ್ವಾಗತಿಸಿ ವಂದಿಸಿದರು.

Related posts: