ಗೋಕಾಕ:ಮೋದಿ ಅವರ ಸಿಂಹ ಘರ್ಜನೆಯ ಮಾತುಗಳಿಗೆ ಪಾಕ್ ತತ್ತರ : ಭೀಮಶಿ ಹೊರಟ್ಟಿ
ಮೋದಿ ಅವರ ಸಿಂಹ ಘರ್ಜನೆಯ ಮಾತುಗಳಿಗೆ ಪಾಕ್ ತತ್ತರ : ಭೀಮಶಿ ಹೊರಟ್ಟಿ
ನಮ್ಮ ಬೆಳಗಾವಿ ಸುುದ್ದಿ , ಬೆಟಗೇರಿ ಮಾ 5 :
ಕೇಂದ್ರ ಸರ್ಕಾರ ಹಾಗೂ ಪ್ರಧಾನಿ ಮೋದಿ ಅವರ ಸಿಂಹ ಘರ್ಜನೆಯ ಮಾತುಗಳಿಗೆ ಒತ್ತಡಕ್ಕೆ ಮಣಿದು ಪಾಪಿ ಪಾಕಿಸ್ತಾನ ಸರ್ಕಾರ ಭಾರತೀಯ ಯೋಧ ಅಭಿನಂದನ್ ಅವರನ್ನು ಬಿಡುಗಡೆ ಮಾಡಿದೆ ಎಂದು ಗೋಕಾಕ ತಾಲೂಕಿನ ಬೆಟಗೇರಿ ಗ್ರಾಮದ ಭಾರತೀಯ ವೀರಯೋಧರ ಅಭಿಮಾನಿ ಬಳಗದ ಪ್ರಧಾನ ಸಂಚಾಲಕ ಭೀಮಶಿ ಹೊರಟ್ಟಿ ಹೇಳಿದರು.
ಗ್ರಾಮದ ಭಾರತೀಯ ವೀರಯೋಧರ ಅಭಿಮಾನಿ ಬಳಗ ಹಾಗೂ ಗ್ರಾಮಸ್ಥರು ಸಹಯೋಗದಲ್ಲಿ ಪಾಕಿಸ್ತಾನದಿಂದ ಭಾರತ ದೇಶದ ವಿಂಗ್ ಕಮಾಂಡರ್ ಅಭಿನಂದನ್ ಅವರು ಬಿಡುಗಡೆಯಾಗಿ ಭಾರತ ದೇಶಕ್ಕೆ ಆಗಮಿಸಿದ ಪ್ರಯುಕ್ತ ಇತ್ತೀಚೆಗೆ ನಡೆದ ಸಂಭ್ರಮಾಚರಣೆ ಕಾರ್ಯಕ್ರಮದಲ್ಲಿ ಮಾತನಾಡಿ, ರಾಜತಾಂತ್ರಿಕವಾಗಿ ಭಾರತ ದೇಶಕ್ಕೆ ಅಮೋಘ ಜಯ ದಕ್ಕಿದೆ ಎಂದರು.
ಸ್ಥಳೀಯ ಯುವ ಮುಖಂಡ ಶ್ರೀಧರ ದೇಯಣ್ಣವರ ಮಾತನಾಡಿ, ಕಳೆದೆರಡು ದಿನಗಳಿಂದ ಪಾಕಿಸ್ತಾನದ ಸೈನ್ಯದ ವಶದಲ್ಲಿದ್ದ ಯೋಧ ಅಭಿನಂದನ್ ಭಾರತ-ಪಾಕ್‍ದ ವಾಘಾ ಗಡಿ ಮೂಲಕ ದೇಶಕ್ಕೆ ಮರಳಿದಾಗ ಇಡೀ ದೇಶ ಸಂಭ್ರಮಾಚರಣೆ ಮಾಡಿದೆ. ದೇಶಕ್ಕಾಗಿ ತಮ್ಮ ಪ್ರಾಣ, ಬದುಕನ್ನು ತ್ಯಾಗಮಾಡಿದ ಮಹಾನ್ ಪುರುಷ ಹಾಗೂ ವೀರಯೋದರನ್ನು ಇಂದು ಪ್ರತಿಯೊಬ್ಬರೂ ಸ್ಮರಿಸಬೇಕಿದೆ ಎಂದÀರು.
ಊರಿನ ಪ್ರಮುಖ ಬೀದಿಗಳಲ್ಲಿ ಭಾರತ ದೇಶದ ವೀರ ಯೋಧರ ಶೌರ್ಯ, ತ್ಯಾಗಗಳ ಪರ ಯುವಕರು ಜಯಘೋಷಣೆ ಕೂಗಿ, ನಟನೆಯ ಹೆಜ್ಜೆ ಹಾಕುತ್ತಾ ಯೋಧ ಅಭಿನಂದನ್ ಅವರ ಭಾವಚಿತ್ರದ ಭವ್ಯ ಮೆರವಣಿಗೆ ನಡೆಯಿತು. ಒಬ್ಬರಿಗೊಬ್ಬರೂ ಯುವಕರು ಗುಲಾಲು ಎರಚಿಕೊಂಡು, ಪಟಾಕಿ ಸಿಡಿಸಿ, ಸಿಹಿ ಹಂಚಿ ಸಂಭ್ರಮಿಸಿದರು.
ಸಿದ್ಧಲಿಂಗ ಹಟ್ಟಿ, ಅಜ್ಜಪ್ಪ ಕೂಟೂರ, ಬಸವರಾಜ ಬಂಡಿಗಣಿ, ಶಂಭು ಹಿರೇಮಠ, ಸುರೇಶ ವಡೇರ, ಗಿರೀಶ ಗಾಣಗಿ, ಈರಣ್ಣ ಕಂಬಾರ, ಭರಮಪ್ಪ ಪೂಜೇರ, ಸಿದ್ರಾಮ ಚಂದರಗಿ, ಸುರೇಶ ಕರೆಣ್ಣವರ, ಇಲ್ಲಿಯ ಭಾರತೀಯ ವೀರಯೋಧರ ಅಭಿಮಾನಿ ಬಳಗದ ಸದಸ್ಯರು, ಅಭಿಮಾನಿಗಳು, ಗ್ರಾಮಸ್ಥರು ಇದ್ದರು.