ಗೋಕಾಕ:ಬಹುಕೋಟಿ ರೂ. ಟೋಪಿ ಹಾಕಿದ್ದ ಆರೋಪ ಚನ್ನಬಸಯ್ಯ ಯೋಗಿಕೊಳ್ಳಮಠ ಅಂಧರ
ಬಹುಕೋಟಿ ರೂ. ಟೋಪಿ ಹಾಕಿದ್ದ ಆರೋಪ ಚನ್ನಬಸಯ್ಯ ಯೋಗಿಕೊಳ್ಳಮಠ ಅಂಧರ
ನಮ್ಮ ಬೆಳಗಾವಿ ಸುದ್ದಿ , ಗೋಕಾಕ ಮಾ 14 :
ಸಹಕಾರಿ ಸಂಘದ ಬಹುಕೋಟಿ ರೂ.ಗಳನ್ನು ಸ್ವಂತಕ್ಕೆ ಬಳಿಸಿಕೊಂಡು ಅಫರಾತಫರ ನಡೆಸಿದ ಕಾರ್ಯದರ್ಶಿಯನ್ನು ಪೋಲೀಸರು ಬಂಧಿಸಿದ ಘಟನೆ ನಗರದಲ್ಲಿ ಇಂದು ಜರುಗಿದೆ.
ನಗರದ ಸೋಮವಾರ ಪೇಟದಲ್ಲಿ ಇರುವ ಜಗದ್ಗುರು ಶ್ರೀ ರೇಣುಕಾಚಾರ್ಯ ಮಹಿಳಾ ಪತ್ತಿನ ಸಹಕಾರಿ ಸಂಘದ ಕಾರ್ಯದರ್ಶಿ ಚನ್ನಬಸಯ್ಯ ಬಸಯ್ಯ ಯೋಗಿಕೊಳ್ಳಮಠ ಈತನು ಸಹಕಾರಿ ಸಂಘದ 6,24,82232 ರೂ. ಹಣವನ್ನು ಸ್ವಂತಕ್ಕೆ ಬಳಿಸಿಕೊಂಡು ಅಫರಾತಫರ ಮಾಡಿದ್ದಾನೆಂದು ಇಲ್ಲಿಯ ಸಹಕಾರಿ ಸಂಘಗಳ ನಿರೀಕ್ಷಕ ಎಸ್.ಬಿ. ಬಿರಾದರ ಪಾಟೀಲ ಅವರು ನಗರ ಪೋಲೀಸ ಠಾಣೆಗೆ ಮೋನ್ನೆ ದಿ. 12 ರಂದು ದೂರು ನೀಡಿದ್ದರು.
ಈ ದೂರಿನನ್ವಯ ಪೋಲೀಸರು ಆರೋಪಿ ಚನ್ನಬಸಯ್ಯ ಯೋಗಿಕೊಳ್ಳಮಠನನ್ನು ಬಂಧಿಸಿ ನ್ಯಾಯಾಲಯಕ್ಕೆ ಹಾಜರು ಪಡಿಸಿದ್ದಾರೆ.
ಸಂಘದಲ್ಲಿ ಠೇವಣಿ ಇರಿಸಿದ ನೂರಾರು ಗ್ರಾಹಕರು ಗೋಕಾಕ ಹಾಗೂ ಬೆಳಗಾವಿಯಲ್ಲಿ ಪ್ರತಿಭಟನೆ ನಡೆಸಿ ಮನವಿಗಳನ್ನು ಸಲ್ಲಿಸಿದ್ದು ಇಲ್ಲಿ ಉಲ್ಲೇಖನೀಯ.