RNI NO. KARKAN/2006/27779|Saturday, October 19, 2024
You are here: Home » breaking news » ಬೆಳಗಾವಿ:ಗೋಕಾಕ ಕ್ಷೇತ್ರದಲ್ಲಿ ನಾನು ಹಣ ಹಾಗೂ ತೋಳ್ಬಲದ ಬೆದರಿಕೆಗೆ ಒಳಗಾಗಿದ್ದೇನೆ : ಅಶೋಕ ಪೂಜಾರಿ ಆರೋಪ

ಬೆಳಗಾವಿ:ಗೋಕಾಕ ಕ್ಷೇತ್ರದಲ್ಲಿ ನಾನು ಹಣ ಹಾಗೂ ತೋಳ್ಬಲದ ಬೆದರಿಕೆಗೆ ಒಳಗಾಗಿದ್ದೇನೆ : ಅಶೋಕ ಪೂಜಾರಿ ಆರೋಪ 

ಗೋಕಾಕ ಕ್ಷೇತ್ರದಲ್ಲಿ ನಾನು ಹಣ ಹಾಗೂ ತೋಳ್ಬಲದ ಬೆದರಿಕೆಗೆ ಒಳಗಾಗಿದ್ದೇನೆ : ಅಶೋಕ ಪೂಜಾರಿ ಆರೋಪ
ಬೆಳಗಾವಿ ಜು 7: ದೇಶದ ಸ್ವಾತಂತ್ರ್ಯದ ನಂತರ ಕೇಂದ್ರ ಸರಕಾರ, ರಾಜ್ಯ ಸರಕಾರಗಳ ಆಡಳಿತಾತ್ಮಕ ವ್ಯವಸ್ಥೆಯಲ್ಲಿ, ಕೇಂದ್ರ ಹಾಗೂ ರಾಜ್ಯ ಚುನಾವಣಾ ಆಯೋಗಗಳ ನೀತಿ ನಿಯಮಗಳಲ್ಲಿ ಅನೇಕ ಗುಣಾತ್ಮಕ ತಿದ್ದುಪಡಿ ಆಗುತ್ತ ಬಂದಿವೆ. ಆದರೆ ಅನೇಕ ಕ್ಷೇತ್ರಗಳಲ್ಲಿ ಭ್ರಷ್ಟಾಚಾರ, ಬೆದರಿಕೆ ರಹಿತ ಚುನಾವಣೆ ವ್ಯವಸ್ಥೆ ಬಂದಿಲ್ಲ. ಹಣಬಲ, ತೋಳ್ಬಲದ ಆಟ ಇನ್ನೂ ದೇಶದಲ್ಲಿ ಇದೆ. ಹಣ- ತೋಳ್ಬಲ ತಡೆಯಲು ಚುನಾವಣಾ ಆಯೋಗ ಇನ್ನೂ ಸುಧಾರಣೆ ಕ್ರಮಗಳನ್ನು ಮಾಡಬೇಕಿದೆ ಗೋಕಾಕ ಕ್ಷೇತ್ರದಲ್ಲಿ ನಾನು ಹಣ ಹಾಗೂ ತೋಳ್ಬಲದ ಬೆದರಿಕೆಗೆ ಒಳಗಾಗಿದ್ದೇನೆ ಎಂದು ಬಿಜೆಪಿ ಮುಖಂಡ ಅಶೋಕ ಪೂಜಾರಿ ಆರೋಪಿಸಿದ್ದಾರೆ

ಇಂದು ಮಧ್ಯಾಹ್ನ ನಗರದಲ್ಲಿ ಪತ್ರಿಕಾಗೋಷ್ಠಿಯನ್ನು ಉದ್ದೇಶಿಸಿ ಮಾತನಾಡಿದ ಅವರು
ಗೋಕಾಕ ಕ್ಷೇತ್ರ ರಾಜ್ಯದಲ್ಲೇ ಬೆದರಿಕೆ , ಹೆದರಿಕೆ ತಂತ್ರದ ನಾಯಕರ ಚುನಾವಣಾ ಕ್ಷೇತ್ರವಾಗಿದೆ. ಬರುವ ವಿಧಾನಸಭಾ ಚುನಾವಣೆಯಲ್ಲಿ ಖೊಟ್ಟಿ ಮತದಾನ, ಹಣ ತೋಳ್ಬಲ ತಡೆಯಲು ಚುನಾವಣಾ ಆಯೋಗ ಕಠಿಣ ಕ್ರಮ ಕೈಗೋಳಬೇಕು. ಕಡ್ಡಾಯವಾದ ಆಧಾರ ಕಾರ್ಡನ್ನು ಓಟರ್ ಐಡಿಗೆ ಲಿಂಕ್ ಮಾಡಬೇಕು. ಇದರಿಂದ ಖೊಟ್ಟಿ ಮತದಾನ ನಿಲ್ಲಲು ಸಾಧ್ಯ ಎಂದು ದೇಶದ ಚುನಾವಣಾ ಆಯುಕ್ತರಿಗೆ ಪತ್ರ ಬರೆದಿರುದಾಗಿ ಪೂಜಾರಿ ಪತ್ರದ ಅಂಶಗಳನ್ನು ಪ್ರದರ್ಶಿಸಿದರು.

ಮತಗಟ್ಟೆ ಒಳಗೆ ಚುನಾವಣಾ ಅಕ್ರಮ ನಡೆದದ್ದು ಸಹ ಬಹಳ ಸಾರಿ ಬೆಳಕಿಗೆ ಬಂದಿದೆ. ಸಿಸಿಟಿವಿ ಕಡ್ಡಾಯವಾಗಿ ಅಳವಡಿಸಬೇಕು. ಇಂದು ಸಾಕಷ್ಟು ತಂತ್ರಜ್ಞಾನ ನಮ್ಮ ದೇಶದಲ್ಲಿದ್ದಾಗ, ಚುನಾವಣಾ ಅಕ್ರಮಗಳನ್ನು ತಡೆಗಟ್ಟುವುದು ಸುಲಭವಾಗಿದೆ
ಬರುವ ವಿಧಾನಸಭಾ ಚುನಾವಣೆಯಲ್ಲಿ ಅಕ್ರಮ ಮತದಾನ ತಡೆಯಲು ಆಯೋಗ ಮುಂದಾಗಬೇಕೆಂದು ಅವರು ಒತ್ತಾಯಪಡಿಸಿದರು.

ಗೋಕಾಕ ಕ್ಷೇತ್ರದಲ್ಲಿ ಹಣ ತೋಳ್ಬಲ ಹಾಗೂ ಖೊಟ್ಟಿ ಮತದಾನದಿಂದ ಅಲ್ಲಿನ ನಾಯಕರು ಗೆದ್ದು ಶಾಸಕ, ಸಚಿವರಾಗಿದ್ದಾರೆ. ಇಲ್ಲವೆಂದು ಅನ್ನುವುದಾದರೆ ಆ ನಾಯಕರು ತಮ್ಮ ಮನಸಾಕ್ಷಿ ಮಾತಾಡಿಸಿಕೊಳ್ಳಲಿ ಎಂದು ಅಶೋಕ ಹೆಸರು ಪ್ರಸ್ತಾಪಿಸದೇ ಜಾರಕಿಹೊಳಿ ಸಹೋದರರ ವಿರುದ್ದ ಕಿಡಿಕಾರಿದ್ದಾರೆ.

ಸುದ್ದಿಗೋಷ್ಠಿಯಲ್ಲಿ ಈರಣ್ಣ ಕಡಾಡಿ, ವೈ. ಎಸ್. ಪಾಟೀಲ, ಎ. ವೈ. ಮಂಗನ್ನವರ, ರಾಜು ನಿರ್ವಾಣಿ ಇತರರು ಭಾಗವಹಿಸಿದ್ದರು.

Related posts: