RNI NO. KARKAN/2006/27779|Tuesday, November 5, 2024
You are here: Home » breaking news » ಗೋಕಾಕ:ಮತದಾರರು ಕಾಂಗ್ರೇಸ್ ಪರವಾಗಿ ಇದ್ದಾರೆ : ಸಚಿವ ಸತೀಶ ಜಾರಕಿಹೊಳಿ ವಿಶ್ವಾಸ

ಗೋಕಾಕ:ಮತದಾರರು ಕಾಂಗ್ರೇಸ್ ಪರವಾಗಿ ಇದ್ದಾರೆ : ಸಚಿವ ಸತೀಶ ಜಾರಕಿಹೊಳಿ ವಿಶ್ವಾಸ 

ಮತದಾರರು ಕಾಂಗ್ರೇಸ್ ಪರವಾಗಿ ಇದ್ದಾರೆ : ಸಚಿವ ಸತೀಶ ಜಾರಕಿಹೊಳಿ ವಿಶ್ವಾಸ

 
ನಮ್ಮ ಬೆಳಗಾವಿ ಸುದ್ದಿ , ಗೋಕಾಕ ಏ 1 :

 

ರಾಜ್ಯದಲ್ಲಿ ಮೋದಿ ಗಾಳಿಯೇ ಇಲ್ಲ, ಮತದಾರರು ಕಾಂಗ್ರೇಸ್ ಪರವಾಗಿ ಇದ್ದಾರೆಂದು ಅರಣ್ಯ ಹಾಗೂ ಬೆಳಗಾವಿ ಜಿಲ್ಲಾ ಉಸ್ತುವಾರಿ ಸಚಿವ ಸತೀಶ ಜಾರಕಿಹೊಳಿ ಹೇಳಿದರು.
ಸೋಮವಾರದಂದು ಸಂಜೆ ನಗರದಲ್ಲಿ ಪತ್ರಕರ್ತರ ಜೊತೆ ಮಾತನಾಡಿದ ಅವರು, ಕಳೆದ ಕಾಂಗ್ರೆಸ್ ಸರ್ಕಾರದ ಹಾಗೂ ಈಗಿರುವ ಕಾಂಗ್ರೆಸ್-ಜೆಡಿಎಸ್ ಮೈತ್ರಿ ಸರ್ಕಾರದ ಜನಪರ ಹಾಗೂ ಅಭಿವೃಧ್ದಿ ಕಾರ್ಯಗಳನ್ನು ನೋಡಿ ಈ ಬಾರಿ ಬಿಜೆಪಿಯನ್ನು ಸಂಪೂರ್ಣವಾಗಿ ತಿರಸ್ಕರಿಸಲಿದ್ದಾರೆಂದು ವಿಶ್ವಾಸ ವ್ಯಕ್ತಪಡಿಸಿದರು.
ಗೋಕಾಕ ನಗರದಲ್ಲಿ ಇಂದು ನಮ್ಮ ಬೆಂಬಲಿಗರ, ಕಾರ್ಯಕರ್ತರ ಹಾಗೂ ಮುಖಂಡರ ಸಭೆಯನ್ನು ನಡೆಸಿದ್ದು, ಸಹೋದರ ರಮೇಶ ಜಾರಕಿಹೊಳಿ ಅವರನ್ನು ಭೇಟಿಯಾಗಿ ಚರ್ಚಿಸುವಂತೆ ತಿಳಿಸಿಲಾಗಿದೆ. ದಿ. 4ರ ನಂತರ ಪ್ರಚಾರದ ಕಾರ್ಯ ಬಿರುಸುಗೊಳ್ಳಲಿದ್ದು, ಸಹೋದರ ರಮೇಶ ಅವರು ಕೂಡಾ ಬೆಳಗಾವಿ ಹಾಗೂ ಚಿಕ್ಕೋಡಿ ಲೋಕಸಭಾ ಮತಕ್ಷೇತ್ರದಲ್ಲಿ ಪ್ರಚಾರ ಕಾರ್ಯದಲ್ಲಿ ಪಾಲ್ಗೊಳ್ಳಲಿದ್ದಾರೆಂದು ತಿಳಿಸಿದರಲ್ಲದೆ ಇನ್ನೊರ್ವ ಸಹೋದರ ಲಖನ ಜಾರಕಿಹೊಳಿ ಸಹ ಕಾಂಗ್ರೆಸ್ ಪಕ್ಷದ ಸಕ್ರಿಯ ಕಾರ್ಯಕರ್ತರಾಗಿದ್ದು ಅವರು ಕೂಡಾ ಪ್ರಚಾರ ಕಾರ್ಯದಲ್ಲಿ ತೊಡಗಲಿದ್ದಾರೆಂದು ತಿಳಿಸಿದರು.
ಶಾಸಕ ಉಮೇಶ ಕತ್ತಿ ಹಾಗೂ ಅವರ ಸಹೋದರ ರಮೇಶ ಕತ್ತಿ ಅವರು ಕಾಂಗ್ರೆಸ ಸೇರ್ಪಡೆ ಬಗ್ಗೆ ಎದ್ದ ಊಹಾಪೋಹಗಳ ಬಗ್ಗೆ ಸಚಿವರನ್ನು ಪತ್ರಕತರ್Àರು ಪ್ರಶ್ನಿಸಿದಾಗ ಈಗಾಗಲೇ ಅದು ಮುಗಿದು ಹೋದ ಅಧ್ಯಾಯ ಎಂದರಲ್ಲದೆ ಕಾಂಗ್ರೆಸ ಸೇರುವ ಬಗ್ಗೆ ಕತ್ತಿ ಸಹೋದರರು ತಮ್ಮನ್ನು ಸಂಪರ್ಕಿಸಿಲ್ಲ ಎಂದು ಸ್ಷಷ್ಟ ಪಡಿಸಿದರು. ತಾಲೂಕಿನ ಕಾರ್ಯಕರ್ತರು ಕಾಂಗ್ರೆಸ ಅಭ್ಯರ್ಥಿಯನ್ನು ಅತ್ಯಧಿಕ ಮತಗಳಿಂದ ಆಯ್ಕೆ ಮಾಡಲು ಶ್ರಮಿಸಬೇಕೆಂದು ಸತೀಶ ಜಾರಕಿಹೊಳಿ ಕರೆ ನೀಡಿದರು.
ದಿ. 3ರಂದು ಸಾಯಂಕಾಲ 4 ಗಂಟೆಗೆ ನಗರದ ಬೀರೇಶ್ವರ ಕಲ್ಯಾಣ ಮಂಟಪದಲ್ಲಿ ಅರಭಾಂವಿ ಹಾಗೂ ಗೋಕಾಕ ಕ್ಷೇತ್ರಗಳ ಜೆಡಿಎಸ್ ಕಾರ್ಯಕರ್ತರ ಸಭೆಯನ್ನು ಕರೆಯಲಾಗಿದೆ ಎಂದೂ ಸತೀಶ ಜಾರಕಿಹೊಳಿ ತಿಳಿಸಿದರು.

Related posts: