ಘಟಪ್ರಭಾ:ಪಿಕೆಪಿಎಸ್ ವತಿಯಿಂದ ಶಾಲೆಗೆ ಕಂಪ್ಯೂಟರ್ ದೇಣಿಗೆ
ಪಿಕೆಪಿಎಸ್ ವತಿಯಿಂದ ಶಾಲೆಗೆ ಕಂಪ್ಯೂಟರ್ ದೇಣಿಗೆ
ನಮ್ಮ ಬೆಳಗಾವಿ ಸುದ್ದಿ , ಘಟಪ್ರಭಾ ಏ 9 :
ಸಹಕಾರಿ ಸಂಘಗಳು ಶೈಕ್ಷಣಿಕ ಅಭಿವೃದ್ದಿಗೆ ಸಹಕಾರಿಯಾಗಬೇಕು ಎಂದು ಪಿಕೆಪಿಎಸ್ ಅಧ್ಯಕ್ಷ ಮಂಜುನಾಥ ಗುಡಕೇತ್ರ ಹೇಳಿದರು.
ಅವರು ಸಮೀಪದ ಶಿಂದಿಕುರಬೇಟ ಗ್ರಾಮದ ಶ್ರೀ ಸಿದ್ಧರಾಮೇಶ್ವರ ಕನ್ನಡ ಆದರ್ಶ ಅನುದಾನಿತ ಹಿರಿಯ ಪ್ರಾಥಮಿಕ ಶಾಲೆಗೆ ಶಿಂದಿಕುರಬೇಟ ಗ್ರಾಮದ ಪ್ರಾಥಮಿಕ ಕೃಷಿ ಪತ್ತಿನ ಸಹಕಾರಿ ಸಂಘದ ವತಿಯಿಂದ ಕಂಪ್ಯೂಟರ್ ದೇಣಿಗೆ ನೀಡಿ ಮಾತನಾಡಿದರು.
ಗ್ರಾಮೀಣ ಪ್ರದೇಶದ ಮಕ್ಕಳು ಶೈಕ್ಷಣಿಕವಾಗಿ ಮುಂದೆ ಬರಬೇಕು. ಅವರಿಗೆ ಕಂಪ್ಯೂಟರ್ ಜ್ಞಾನ ಅವಶ್ಯವಾಗಿದೆ. ಈ ನಿಟ್ಟಿನಲ್ಲಿ ಇನ್ನಷ್ಟು ಶೈಕ್ಷಣಿಕವಾಗಿ ಅಭಿವೃದ್ದಿ ಹೊಂದಲು ನಮ್ಮ ಸಹಕಾರಿ ಸಂಘವು ಸಹಾಯ ಸಹಕಾರ ನೀಡುತ್ತದೆ ಎಂದರು.
ಈ ಸಂದರ್ಭದಲ್ಲಿ ಸ್ಥಳೀಯ ಆಡಳಿತ ಮಂಡಳಿ ಅಧ್ಯಕ್ಷ ಜ್ಯೋತ್ತೇಪ್ಪ ಬಂತಿ, ನಿರ್ದೇಶಕರುಗಳಾದ ಭೀಮಪ್ಪ ಕಳಸನ್ನವರ, ವಿಠ್ಠಲ ಪಾಟೀಲ, ಮುತ್ತೇಪ್ಪ ಮಜ್ಜುಗೋಳ, ರಾಮಪ್ಪ ಕಟ್ಟಿಕಾರ, ಸಿದ್ದಪ್ಪ ಸತ್ತಿಗೇರಿ, ಮುಖ್ಯೋಪಾಧ್ಯಾಯ ಎಂ.ಆರ್.ಕಡಕೋಳ, ಎಸ್.ಆರ್.ತರಾಳ, ಎಸ್.ಎಸ್.ಪಾಟೀಲ, ಎಸ್.ಎಂ.ಯಮಕನಮರಡಿ, ಪಿ.ಎ.ಸರ್ಕಾವಸ್, ಎಂ.ಡಿ.ಪರವ್ವಗೋಳ, ಎಸ್.ಎಸ್.ಮೋಗಾನಿ, ಎಸ್.ಎಸ್.ದೊಡಮನಿ ಸೇರಿದಂತೆ ಇತರರು ಇದ್ದರು.