RNI NO. KARKAN/2006/27779|Monday, December 23, 2024
You are here: Home » breaking news » ಬೈಲಹೊಂಗಲ:ಜಿಲ್ಲೆಯಾದ್ಯಂತ ಸಿದ್ದರಾಮಯ್ಯನವರ ಅಲೆ ಇದೆ,ಕಾಂಗ್ರೆಸ್ ಅಭ್ಯರ್ಥಿ ಸಾಧುನವರ ಗೆಲ್ಲೋದು ಖಚಿತ:ಶಾಸಕ ಮಹಾಂತೇಶ ಕೌಜಲಗಿ

ಬೈಲಹೊಂಗಲ:ಜಿಲ್ಲೆಯಾದ್ಯಂತ ಸಿದ್ದರಾಮಯ್ಯನವರ ಅಲೆ ಇದೆ,ಕಾಂಗ್ರೆಸ್ ಅಭ್ಯರ್ಥಿ ಸಾಧುನವರ ಗೆಲ್ಲೋದು ಖಚಿತ:ಶಾಸಕ ಮಹಾಂತೇಶ ಕೌಜಲಗಿ 

ಜಿಲ್ಲೆಯಾದ್ಯಂತ ಸಿದ್ದರಾಮಯ್ಯನವರ ಅಲೆ ಇದೆ,ಕಾಂಗ್ರೆಸ್ ಅಭ್ಯರ್ಥಿ ಸಾಧುನವರ ಗೆಲ್ಲೋದು ಖಚಿತ:ಶಾಸಕ ಮಹಾಂತೇಶ ಕೌಜಲಗಿ

ನಮ್ಮ ಬೆಳಗಾವಿ ಸುದ್ದಿ , ಬೈಲಹೊಂಗಲ ಏ 10 :

ಮತಕ್ಷೇತ್ರದ ಹಲಕಿ ತಾಂಡಾ, ಹುಲಿಕೇರಿ ತಾಂಡಾ ರಾಮಾಪೂರ, ರಾಮಾಪೂರ ತಾಂಡಾ ಹಾಗೂ ಸೂಬ್ಬಾಪೂರ ಗ್ರಾಮಗಳಲ್ಲಿ ಕಾಂಗ್ರೆಸ್ ಅಭ್ಯರ್ಥಿ ವಿ.ಎಸ್ ಸಾಧುನವರ ಪರ ಸಂಸಧಿಯ ಕಾರ್ಯದರ್ಶಿ ಶಾಸಕ ಮಹಾಂತೇಶ ಕೌಜಲಗಿ ಅವರು ಪ್ರಚಾರ ನಡೆಸಿದರು

ಶಾಸಕ ಮಹಾಂತೇಶ ಕೌಜಲಗಿ ಕಾಂಗ್ರೆಸ್ ಅಭ್ಯರ್ಥಿ ಸಾಧುನವರ ಅವರ ಪರವಾಗಿ ಬೈಲಹೊಂಗಲ ಕ್ಷೇತ್ರದಲ್ಲಿ ಬಿರುಸಿನ ಪ್ರಚಾರ ನಡೆಸಿದ್ದಾರೆ ಸಾಧುನವರ ಅವರ ಪುತ್ರಿ ಕೃಪಾ ಅವರೂ ಕೂಡಾ ಕ್ಷೇತ್ರದಲ್ಲಿ ಪ್ರಚಾರ ನಡೆಸಿದ್ದು ಶಾಸಕ ಮಹಾಂತೇಶ ಕೌಜಲಗಿ ಅವರ ಪ್ರಚಾರಕ್ಕೆ ಸಾಥ್ ನೀಡಿದರು.

ಮತಯಾಚಿಸಿ ಮಾತನಾಡಿದ ಶಾಸಕ ಮಹಾಂತೇಶ ಕೌಜಲಗಿ ಮಾಜಿ ಮುಖ್ಯಮಂತ್ರಿ ಸಿದ್ರಾಮಯ್ಯ ಬೆಳಗಾವಿ ಜಿಲ್ಲೆಯ ಅಭಿವೃದ್ಧಿಗೆ ವಿಶೇಷ ಒತ್ತು ನೀಡಿದ್ದಾರೆ ಬೆಳಗಾವಿ ನಗರದ ಅಭಿವೃದ್ಧಿಗೆ ನಗರೋಥ್ಥಾನ ಯೋಜನೆಯ ನೂರು ಕೋಟಿಯ ಜೊತೆಗೆ ಹೆಚ್ಚುವರಿಯಾಗಿ ನೂರು ಕೊಟಿ ಅನುದಾನ ನೀಡಿದ್ದರಿಂದಲೇ ಕೇಂದ್ರ ಸರ್ಕಾರ ಸ್ಮಾರ್ಟ್ ಸಿಟಿ ಯೋಜನೆ ಘೋಷಿಸುವ ಮೊದಲೇ ಬೆಳಗಾವಿ ಸ್ಮಾರ್ಟ ಸಿಟಿ ಆಗಲು ಸಾಧ್ಯವಾಯಿತು ಎಂದು ಮಹಾಂತೇಶ ಕೌಜಲಗಿ ಹೇಳಿದರು

 

ಬೆಳಗಾವಿ ಕೇಂದ್ರ ಬಸ್ ನಿಲ್ಧಾಣದ ನವ ನಿರ್ಮಾಣಕ್ಕೆ ,ಯಲ್ಲಮ್ಮ ದೇವಸ್ಥಾನದ ಅಭಿವೃದ್ಧಿಗೆ ಬೈಲಹೊಂಗಲದ ವೀರ ರಾಣಿ ಕಿತ್ತೂರು ಚನ್ನಮ್ಮಾಜಿಯ ಸಮಾಧಿ ಅಭಿವೃದ್ಧಿಗೆ ,ಬೆಳಗಾವಿಯಲ್ಲಿ ಸೂಪರ್ ಸ್ಪೇಶ್ಯಾಲಿಟಿ ಆಸ್ಪತ್ರೆ ನಿರ್ಮಾಣಕ್ಕೆ ಅನುದಾನ ಕೊಟ್ಟಿದ್ದು ಸಿದ್ರಾಮಯ್ಯ ಹೀಗಾಗಿ ಬೆಳಗಾವಿ ಜಿಲ್ಲೆಯಾದ್ಯಂತ್ಯ ಸಿದ್ರಾಮಯ್ಯನವರ ಅಲೆ ಇದೆ ಇಲ್ಲಿ ಕಾಂಗ್ರೆಸ್ ಅಲೆ ಇದೆ ಹೀಗಾಗಿ ಕಾಂಗ್ರೆಸ್ ಅಭ್ಯರ್ಥೀ ಸಾಧುನವರ ಗೆಲ್ಲೋದು ಖಚಿತ ಎಂದು ಮಹಾಂತೇಶ ಕೌಜಲಗಿ ವಿಶ್ವಾಸ ವ್ಯಕ್ತಪಡಿಸಿದರು.

Related posts: