ಗೋಕಾಕ:ರಮೇಶ್ ಜಾರಕಿಹೊಳಿಗೆ ಕೈ ಕೊಟ್ಟ ಆಪ್ತ ಶಾಸಕರು
ರಮೇಶ್ ಜಾರಕಿಹೊಳಿಗೆ ಕೈ ಕೊಟ್ಟ ಆಪ್ತ ಶಾಸಕರು
ನಮ್ಮ ಬೆಳಗಾವಿ ಸುದ್ದಿ , ಗೋಕಾಕ ಏ 27 :
ರಾಜ್ಯ ಸರಕಾರದ ವಿರುದ್ಧ ಬಂಡಾಯವೆದ್ದಿರುವ ಗೋಕಾಕ್ ಶಾಸಕ ರಮೇಶ್ ಜಾರಕಿಹೊಳಿಗೆ ಆಪ್ತ ಶಾಸಕರು ಕೈ ಕೊಟ್ಟಿದ್ದಾರೆ.
ಈ ಮೊದಲು ಕಾಗವಾಡ ಶಾಸಕ ಶ್ರೀಮಂತ ಪಾಟೀಲ್ ರಾಜೀನಾಮೆ ನೀಡುವುದಿಲ್ಲ ಎಂದಿದ್ದರು. ಬಳ್ಳಾರಿ ಗ್ರಾಮೀಣ ಶಾಸಕ ನಾಗೇಂದ್ರ ಕೂಡ ರಮೇಶ್ ಸಂಪರ್ಕಕ್ಕೆ ಸಿಕ್ಕಿರಲಿಲ್ಲ. ಇದೀಗ ಅಥಣಿ ಶಾಸಕ ಮಹೇಶ್ ಕುಮಟಳ್ಳಿ ಕೂಡ ರಮೇಶ್ ಜಾರಕಿಹೊಳಿ ಸಂಪರ್ಕದಲ್ಲಿಲ್ಲ ಎಂಬ ಬಗ್ಗೆ ವರದಿಯಾಗಿದೆ.
ಹಾಗಾಗಿ, ಸರ್ಕಾರ ಕೆಡವುತ್ತೇನೆ ಎಂದ ಜಾರಕಿಹೊಳಿ ಬಂಡಾಯ ಮತ್ತೊಮ್ಮೆ ವಿಫಲವಾಗುವ ಲಕ್ಷಣಗಳಿವೆ ಎಂಬ ಸುದ್ದಿ ಬೆಳಗಾವಿ ಜಿಲ್ಲೆ ಹಾಗೂ ರಾಜಾದ್ಯಂತ ಹರಿದಾಡುತ್ತಿದೆ