ಗೋಕಾಕ:ಬಸವ ಜಯಂತಿ ಅಂಗವಾಗಿ ದಿ. 4 ರಿಂದ 8 ರವರೆಗೆ ಬಳೋಬಾಳ ಗ್ರಾಮದಲ್ಲಿ ಸತ್ಸಂಗ ಸಮ್ಮೇಳನ : ಪೂಜ್ಯಶ್ರೀ ಸಂಗನ ಬಸವ ಸ್ವಾಮೀಜಿ
ಬಸವ ಜಯಂತಿ ಅಂಗವಾಗಿ ದಿ. 4 ರಿಂದ 8 ರವರೆಗೆ ಬಳೋಬಾಳ ಗ್ರಾಮದಲ್ಲಿ ಸತ್ಸಂಗ ಸಮ್ಮೇಳನ : ಪೂಜ್ಯಶ್ರೀ ಸಂಗನ ಬಸವ ಸ್ವಾಮೀಜಿ
ನಮ್ಮ ಬೆಳಗಾವಿ ಸುದ್ದಿ , ಗೋಕಾಕ ಮೇ 2 :
ವಿಶ್ವ ಗುರು ಮಂತ್ರ ಪುರುಷ ಮಹಾನ ಮಾನತ್ವವಾದಿ ಬಸವಣ್ಣನವರ ಜಯಂತಿ ಉತ್ಸವದ ಅಂಗವಾಗಿ ಸತ್ಸಂಗ ಸಮ್ಮೇಳನವನ್ನು ಶನಿವಾರ ದಿನಾಂಕ 4 ರಿಂದ ದಿ 8 ರವರೆಗೆ ಹಮ್ಮಿಕೊಳ್ಳಲಾಗಿದೆಂದು ಬಳೋಬಾಳ ಗ್ರಾಮದ ಬಸವ ಯೋಗ ಮಂಟಪದ ಪೂಜ್ಯಶ್ರೀ ಸಂಗನ ಬಸವ ಸ್ವಾಮೀಜಿ ತಿಳಿಸಿದ್ದಾರೆ .
ಈ ಕುರಿತು ಪತ್ರಿಕಾ ಪ್ರಕಟಣೆ ನೀಡಿರುವ ಅವರು ಶನಿವಾರ ದಿ 4ರಂದು ಸಾಯಂಕಾಲ 7.30 ರಿಂದ 9.30 ರವರೆಗೆ ಶರಣರ ಅನುಭಾವ ದರ್ಶನ ಕುರಿತು ಪ್ರವಚನ ಕಾರ್ಯಕ್ರಮ ಹಮ್ಮಿಕೊಳ್ಳಲಾಗಿದ್ದು ಕೂಡಲ ಸಂಗಮ ಬಸವ ಧರ್ಮ ಪೀಠದ ಖ್ಯಾತ ಪ್ರವಚನಕಾರ ಪೂಜ್ಯಶ್ರೀ ಬಸವ ಪ್ರಕಾಶ ಸ್ವಾಮೀಜಿಯವರು ಪ್ರವಚನ ಕಾರ್ಯಕ್ರಮ ನಡೆಸಿ ಕೊಡುವುರು ..
ಕಾರ್ಯಕ್ರಮ ಸಾನಿಧ್ಯವನ್ನು ಬಸವ ಯೋಗ ಮಂಟಪದ ಪೂಜ್ಯಶ್ರೀ ಮಾತೆ ನೀಲಾಂಬಿಕಾ ದೇವಿ ವಹಿಸುವರು .
ದಿನಾಂಕ 7 ರಂದು ಜನಪದರು ಕಂಡ ಬಸವಣ್ಣ ಎಂಬ ವಿಚಾರಗೋಷ್ಟಿ ಹಮ್ಮಿಕೊಳ್ಳಲಾಗಿದೆ. ಈ ಕಾರ್ಯಕ್ರಮದಲ್ಲಿ ಪೂಜ್ಯಶ್ರೀ ಚೆನ್ನಬಸವ ಸ್ವಾಮೀಜಿಗಳು , ಶರಣ ಶ್ರೀ ಶ್ರೀಧರ ಕಬ್ಬೂರ , ಅರಭಾಂವಿ ಶಾಸಕ ಬಾಲಚಂದ್ರ ಜಾರಕಿಹೊಳಿ , ವಿಧಾನ ಪರಿಷತ್ತಿನ ಸದಸ್ಯರಾದ ಮಹಾಂತೇಶ ಕವಟಗಿಮಠ , ಹನಮಂತ ನಿರಾಣಿ , ಭಾಗವಹಿಸುವರು .
ದಿನಾಂಕ 8 ರಂದು ಸಾಯಂಕಾಲ ಸಮಾರೋಪ ಸಮಾರಂಭ ಜರುಗುವುದು . ಸಮಾರಂಭದ ಅಧ್ಯಕ್ಷತೆಯನ್ನು ಪೂಜ್ಯಶ್ರೀ ಡಾ. ಬಸವಾನಂದ ಸ್ವಾಮೀಗಳು ವಹಿಸುವರು . ಪೂಜ್ಯಶ್ರೀ ಬಸವ ಪ್ರಕಾಶ ಸ್ವಾಮೀಜಿಗಳು , ಪೂಜ್ಯಶ್ರೀ ಚೆನ್ನಬಸವ ಸ್ವಾಮೀಜಿಗಳು , ಸಂಸದ ಶ್ರೀ ಸುರೇಶ ಅಂಗಡಿ , ಡಾ. ರಮೇಶ ಪಟಗುಂದಿ . ಕಸಾಪ ಅಧ್ಯಕ್ಷ ಮಹಾಂತೇಶ ತಾವಂಶಿ , ಕರವೇ ಅಧ್ಯಕ್ಷ ಬಸವರಾಜ ಖಾನಪ್ಪನವರ ಸೇರಿದಂತೆ ಅನೇಕ ಗಣ್ಯರು ಉಪಸ್ಥಿತರಿರುವರು..
ಪ್ರತಿನಿತ್ಯ ಜರುಗುವ ಈ ಕಾರ್ಯಕ್ರಮಗಳ ನಂತರ ಭಕ್ತಾಧಿಗಳಿಗೆ ಮಹಾಪ್ರಸಾದದ ವ್ಯವಸ್ಥೆ ಮಾಡಲಾಗಿದ್ದು ಸಧ್ಧಭಕ್ತರು ಪ್ರತಿದಿನ ಹೆಚ್ಚಿನ ಸಂಖ್ಯೇಯಲ್ಲಿ ಭಾಗವಹಿಸಿ ಬಸವ ಕೃಪೆಗೆ ಪಾತ್ರರಾಗಬೇಕೆಂದು ಪೂಜ್ಯಶ್ರೀ ಸಂಗನ ಸ್ವಾಮೀಜಿಯವರು ಪ್ರಕಟನೆಯಲ್ಲಿ ಕೋರಿದ್ದಾರೆ