ಘಟಪ್ರಭಾ:ವಿಜೃಂಭನೆಯಿಂದ ಜರುಗಿದ ಶ್ರೀ ಕಾಳಿಕಾದೇವಿ ದೇವಸ್ಥಾನದ 18 ನೇ ವಾರ್ಷಿಕೋತ್ಸವ ಹಾಗೂ ಜಾತ್ರಾ ಮಹೋತ್ಸವ
ವಿಜೃಂಭನೆಯಿಂದ ಜರುಗಿದ ಶ್ರೀ ಕಾಳಿಕಾದೇವಿ ದೇವಸ್ಥಾನದ 18 ನೇ ವಾರ್ಷಿಕೋತ್ಸವ ಹಾಗೂ ಜಾತ್ರಾ ಮಹೋತ್ಸವ
ನಮ್ಮ ಬೆಳಗಾವಿ ಸುದ್ದಿ , ಘಟಪ್ರಭಾ ಮೇ 18 :
ಮಲ್ಲಾಪೂರ ಪಿ.ಜಿ. ಪಟ್ಟಣದ ಶ್ರೀ ಕಾಳಿಕಾದೇವಿ ದೇವಸ್ಥಾನದ 18 ನೇಯ ವಾರ್ಷಿಕೋತ್ಸವ ಹಾಗೂ ಜಾತ್ರಾ ಮಹೋತ್ಸವವು ಗುರುವಾರದಂದು ವಿಜೃಂಭನೆಯಿಂದ ಜರುಗಿತು.
ಮುಂಜಾನೆ ಮಹಾಗಣಪತಿ ಪ್ರಾರ್ಥನೆಯೊಂದಿಗೆ ಧ್ವಜಾರೋಹಣ, ಶ್ರೀ ಕಾಳಿಕಾದೇವಿಗೆ ಮಹಾರುಧ್ರಾಭಿಷೇಕ ಮತ್ತು ವಿಶ್ವಕರ್ಮ ವಟುಗಳಿಗೆ ಉಪನಯನ ಮಾಡಲಾಯಿತು. ಸಕಲ ವಾದ್ಯ ವೈಭವ ದೊಂದಿಗೆ ಶ್ರೀ ಕಾಳಿಕಾದೇವಿ ಭಾವ ಚಿತ್ರದ ಭವ್ಯ ಮೆರವಣಿಗೆ ಜರುಗಿತು.
ನಂತರ ನಡೆದ ಧಾರ್ಮಿಕ ಚಿಂತನ ಗೋಷ್ಟಿ ಹಾಗೂ ಸತ್ಕಾರ ಸಮಾರಂಭದ ಅಧ್ಯಕ್ಷತೆಯನ್ನು ವಹಿಸಿದ ಮುರನಾಳದ ಶ್ರೀ ಮಳಿಯಪ್ಪಯ್ಯಾ ಸ್ವಾಮಿಗಳು ಮಾತನಾಡಿ ಮೇಲಿಂದ ಮೇಲೆ ಇಂತಹ ಧಾರ್ಮಿಕ ಕಾರ್ಯಕ್ರಮಗಳು ನಡಯುವದರಿಂದ ಪುಣ್ಯ ಪ್ರಾಪ್ತಿಯಾಗುತ್ತದೆ. ಜಗನ್ಮಾತೆ ಕಾಳಿಕಾದೇವಿ ಮಹಿಮೆ ಅಪಾರವಾದುದು ಎಂದು ಹೇಳಿದರು.
ಶಿಕ್ಷಕ ಎಲ್.ಬಿ.ದೊಡಮನಿ ಹಾಗೂ ಸಂಗಡಿಗರಿಂದ ಸಂಗೀತ ಸಂಜೆ ಕಾರ್ಯಕ್ರಮ ಜರುಗಿತು. ಶ್ರೀ ಮಳಿಯಪ್ಪಯ್ಯಾ ಸ್ವಾಮಿಗಳು ಹಾಗೂ ವಿವಿಧ ಕ್ಷೇತ್ರದಗಳಲ್ಲಿ ಸಾಧನೆಗೈದ ಗಣ್ಯರಿಗೆ ಸತ್ಕರಿಸಲಾಯಿತು.
ಸಾನಿದ್ಯವನ್ನು ಸ್ಥಳೀಯ ಗುಬ್ಬಲಗುಡ್ಡ ಮಠದ ಶ್ರೀ ಮಲ್ಲಿಕಾರ್ಜುನ ಸ್ವಾಮಿಗಳು ವಹಿಸಿದ್ದರು. ಮುಖ್ಯ ಅತಿಥಿಗಳಾಗಿ ಸಮಾಜದ ಮುಖಂಡರಾದ ಭಗವಂತ ಪತ್ತಾರ, ವಿರೇಂದ್ರ ಪತ್ತಾರ, ಶ್ರೀಕಾಂತ ಪತ್ತಾರ, ಅಶೋಕ ಪೊತದಾರ, ಡಾ.ವಿರುಪಾಕ್ಷ ಪತ್ತಾರ, ಜಿ.ಎ.ಪತ್ತಾರ, ಗಂಗಾದರ ರಾಜಾಪೂರೆ, ಅರುಣಗೌಡಾ ಪಾಟೀಲ, ಮೌನೇಶ ಬಡಿಗೇರ, ಸುರೇಶ ಪೋತದಾರ, ಅಮೃತ ಯರಕದ, ಶ್ರೀಕಾಂತ ರಾ.ಪತ್ತಾರ, ಉಮೇಶ ಶಿರಾಲಕರ, ಬಾಬುರಾವ ಪತ್ತಾರ, ಮೌನೇಶ ಸೋನಾರ, ಸಂಜಯ ಪೊತದಾರ, ಸೇರಿದಂತೆ ಸಮಾಜದ ಅನೇಕ ಮುಖಂಡರು ಇದ್ದರು.