ಘಟಪ್ರಭಾ:ಮಲ್ಲಾಪೂರ ಪಿ.ಜಿ ಪಟ್ಟಣ ಪಂಚಾಯತಿ ವ್ಯಾಪ್ತಿಯಲ್ಲಿ ಡೆಂಗ್ಯೂ ಜ್ವರ ಪತ್ತೆ : ಎಚ್ಚೆತ್ತಕೊಳ್ಳದ ಅಧಿಕಾರಿ
ಮಲ್ಲಾಪೂರ ಪಿ.ಜಿ ಪಟ್ಟಣ ಪಂಚಾಯತಿ ವ್ಯಾಪ್ತಿಯಲ್ಲಿ ಡೆಂಗ್ಯೂ ಜ್ವರ ಪತ್ತೆ : ಎಚ್ಚೆತ್ತಕೊಳ್ಳದ ಅಧಿಕಾರಿ
ನಮ್ಮ ಬೆಳಗಾವಿ ಸುದ್ದಿ , ಘಟಪ್ರಭಾ ಮೇ 27 :
ಮಲ್ಲಾಪೂರ ಪಿ.ಜಿ ಪಟ್ಟಣ ಪಂಚಾಯತಿ ವ್ಯಾಪ್ತಿಯಲ್ಲಿ ಡೆಂಗ್ಯೂ ಜ್ವರ ಪತ್ತೆಯಾಗಿದ್ದು, ಜನರಲ್ಲಿ ಆತಂಕ ಮೂಡಿಸಿದೆ.
ಪಟ್ಟಣದಲ್ಲಿ ಇಲ್ಲಿಯವರೆಗೆ ಮಕ್ಕಳು ಸೇರಿ ಸುಮಾರು 8 ಕ್ಕೂ ಹೆಚ್ಚು ಜನರಿಗೆ ಡೆಂಗ್ಯೂ ಸೊಂಕು ತಗುಲಿದೆ ಎಂದು ಹೇಳಲಾಗುತ್ತಿದೆ. ಅದರಲ್ಲಿ ಗಾಯಕವಾಡ ಓಣಿ, ಕಬ್ಬೂರ ಓಣಿ ಹಾಗೂ ಕೊರವರ ಓಣಿಯಲ್ಲಿ ಹೆಚ್ಚು ಪ್ರಕರಣಗಳು ಪತ್ತೆಯಾಗಿವೆ. ಇವರೆಲ್ಲರಿಗೂ ಈಗಾಗಲೆ ಪಟ್ಟಣ ವಿವಿಧ ಖಾಸಗಿ ಆಸ್ಪತ್ರೆಗಳಲ್ಲಿ ಚಿಕಿತ್ಸೆ ನೀಡಲಾಗುತ್ತಿದ್ದು, ಪಟ್ಟಣದಲ್ಲಿ ರೋಗ ಹರಡುವ ಭೀತಿ ಎದುರಾಗಿದೆ. ಇದರಲ್ಲಿ ಕಲವರಿಗೆ ಡೆಂಗ್ಯೂ ಸೊಂಕು ತಗಲಿರುವ ಬಗ್ಗೆ ಇಲ್ಲಿಯ ಪ್ರತಿಷ್ಠಿತ ಕೆ.ಎಚ್.ಐ ಆಸ್ಪತ್ರೆಯವರು ಧೃಢಪಡಿಸಿದ್ದಾರೆ.
ಎಚ್ಚೆತ್ತಕೊಳ್ಳದ ಅಧಿಕಾರಿಗಳು : ಪಟ್ಟಣದಲ್ಲಿ ಅಸ್ವಛ್ಛತೆ ತಾಂಡವಾಡುತ್ತಿದ್ದು, ಚರಂಡಿಗಳು ತುಂಬಿ ತುಳುಕುತ್ತಿವೆ. ಪಟ್ಟಣ ಪಂಚಾಯತಿಯಲ್ಲಿ ಚರಂಡಿ ಸ್ವಛ್ಚಗೊಳಿಸುದಕ್ಕಾಗಿ 22 ಕ್ಕೂ ಹೆಚ್ಚು ಜನ ಸಿಬ್ಬಂದಿ ಇದ್ದರೂ ಸಹ ಸಮಯಕ್ಕೆ ಸರಿಯಾಗಿ ಚರಂಡಿಗಳು ಸ್ವಛ್ಛಗೊಳಿಸುತ್ತಿಲ್ಲ. ಪಟ್ಟಣದಲ್ಲಿ ಡೆಂಗ್ಯೂ ಜ್ವರ ಹರಡುತ್ತಿದ್ದರು ಕೂಡಾ ಪಟ್ಟಣ ಪಂಚಾಯತಿ ಹಾಗೂ ಆರೋಗ್ಯ ಇಲಾಖೆ ಅಧಿಕಾರಿಗಳು ಯಾವು ಕ್ರಮ ಕೈಗೊಂಡಿಲ್ಲ ಎಂದು ಸಾರ್ವಜನಿಕರು ಆರೋಪವಾಗಿದೆ.
ಪಟ್ಟಣದಲ್ಲಿ ಡೆಂಗ್ಯೂ ಜ್ವರ ಸೊಂಕು ಹರಡಿರುವ ಬಗ್ಗೆ ಮಾಹಿತಿ ಬಂದಿದೆ. ಮುಂಜಾಗ್ರತಾ ಕ್ರಮವಾಗಿ ಡೆಂಗ್ಯೂ ಸೊಂಕು ಪತ್ತೆಯಾದ ಪ್ರದೇಶಗಳಲ್ಲಿ ಡಿ.ಟಿ.ಟಿ ಪೌಡರ್ ಸಿಂಪಡಿಸಲಾಗಿದ್ದು, ಮುಂದೆ ಚರಂಡಿಗಳನ್ನು ಸ್ವಚ್ಚಗೊಳಿಸಿ ಫಾಗಿಂಗ್ ಮಾಡಲಾಗುವುದು.
ಎಸ್.ಟಿ.ಆಲೂರ, ಮುಖ್ಯಾಧಿಕಾರಿಗಳು ಪ.ಪಂ ಮಲ್ಲಾಪೂರ ಪಿ.ಜಿ