ಗೋಕಾಕ:ಸದೃಢ ಶರೀರಕ್ಕೆ ಮತ್ತು ಆತ್ಮ ರಕ್ಷಣೆಗೆ ಕರಾಟೆ ವಿದ್ಯೆ ಅವಶ್ಯವಾಗಿದೆ : ಲಕ್ಷ್ಮಣ ಚೌರಿ
ಸದೃಢ ಶರೀರಕ್ಕೆ ಮತ್ತು ಆತ್ಮ ರಕ್ಷಣೆಗೆ ಕರಾಟೆ ವಿದ್ಯೆ ಅವಶ್ಯವಾಗಿದೆ : ಲಕ್ಷ್ಮಣ ಚೌರಿ
ನಮ್ಮ ಬೆಳಗಾವಿ ಸುದ್ದಿ , ಗೋಕಾಕ ಜೂ 3 :
ಸದೃಢ ಶರೀರಕ್ಕೆ ಮತ್ತು ಆತ್ಮ ರಕ್ಷಣೆಗೆ ಕರಾಟೆ ವಿದ್ಯೆ ಅವಶ್ಯವಾಗಿದೆ ಎಂದು ಮಕ್ಕಳ ಸಾಹಿತಿ ಲಕ್ಷ್ಮಣ ಚೌರಿ ಹೇಳಿದರು.
ಅವರು ರವಿವಾರದಂದು ಇಲ್ಲಿಯ ಪ್ರಿನ್ಸ್ ಡ್ಯಾನ್ಸ್ ಅಕ್ಯಾಡೆಮಿ ಗೋಕಾಕ,ಬೂಡೊಬೊಸ್ ಇಂಟರ್ ನ್ಯಾಶನಲ್ ಕರಾಟೆ ಡೂ ಅಕ್ಯಾಡೆಮಿ ಗೋಕಾಕ ಇವುಗಳ ಸಂಯುಕ್ತಾಶ್ರಯದಲ್ಲಿ ಡ್ಯಾನ್ಸ್ ಮತ್ತು ಕರಾಟೆಯ ಬೇಸಿಗೆ ಕ್ಯಾಂಪ ಬಿಳ್ಕೋಡುವ ಸಮಾರಂಭದ ಮುಖ್ಯ ಅತಿಥಿಗಳಾಗಿ ಭಾಗವಹಿಸಿ ಮಾತನಾಡಿದರು.
ಇಂದಿನ ಮಕ್ಕಳು ನಾಳಿನ ದೇಶದ ಪ್ರಜೆಗಳು ಈ ನಿಟ್ಟಿನಲ್ಲಿ ಮಕ್ಕಳಲ್ಲಿ ಕರಾಟೆ ವಿದ್ಯೆ ಅತೀ ಅವಶ್ಯವಾಗಿದೆ. ನೃತ್ಯ ಕಲಿಯುವ ಮೂಲಕ ಕಲೆಯಲ್ಲಿ ಆಸಕ್ತಿ ಹೆಚ್ಚಾಗುತ್ತದೆ. ಮಕ್ಕಳ ಬೆಳವಣಿಗೆಗೆ ಡ್ಯಾನ್ಸ್ ಮತ್ತು ಕರಾಟೆ ಉತ್ತಮ ವಿದ್ಯೆಯಾಗಿದೆ. ಶಿಕ್ಷಣದ ಜೊತೆಗೆ ಇಂತಹ ಚಟುವಟಿಕೆಗಳ ಬಗ್ಗೆ ಪಾಲಕರು ಹೆಚ್ಚಿನ ಆಸಕ್ತಿ ಮಕ್ಕಳಿಗೆ ತೋರಿಸಬೇಕು ಎಂದರು.
ಕಾರ್ಯಕ್ರಮದ ಅಧ್ಯಕ್ಷತೆಯನ್ನು ಬಿಸಿಎ ಕಾಲೇಜಿನ ಆಡಳಿತಾಧಿಕಾರಿ ಅಡಿವೇಶ ಗವಿಮಠ ವಹಿಸಿದ್ದರು. ಈ ಸಂದರ್ಬದಲ್ಲಿ ಸಾಹಿತಿ ಹಾಗೂ ಪ್ರಾಚಾರ್ಯ ಜಯಾನಂದ ಮಾದರ, ಸುನೀಲ ಭಗತ್, ಚೇತನ ಜೋಗನ್ನವರ, ಶಶಿ ಕನ್ನಪ್ಪನವರ,ಕರಾಟೆ ಶಿಕ್ಷಕರಾದ ದುರ್ಯೋಧನ ಕಡಕೋಳ, ಬಾಳು ದುರದುಂಡಿ,ರವಿ ನಾಯಕ,ಭೀಮಶಿ ಕೊಡೆನ್ನವರ, ಸವಿತಾ ಕೊಟಗಿ,ಕೆಂಪಣ್ಣಾ ಶಿಂಗಳಾಪೂರ,ಅಭಿ ಯೋಗಿಕೊಳ್ಳಮಠ,ಪೂಜಾ ಕಾಂಬಳೆ, ಸುಮಿತ್ರಾ ಮಾದರ ಹಾಗೂ ಶಿಬಿರದಲ್ಲಿ ಭಾಗವಹಿಸಿದ ಮಕ್ಕಳು ಸೇರಿದಂತೆ ಇತರರು ಇದ್ದರು.