RNI NO. KARKAN/2006/27779|Saturday, October 19, 2024
You are here: Home » breaking news » ಮೂಡಲಗಿ:ಸಂಬ್ರಮ ಸಡಗರದಿಂದ ಈದ್ ಉಲ್ ಫಿತರ ಆಚರಣೆ

ಮೂಡಲಗಿ:ಸಂಬ್ರಮ ಸಡಗರದಿಂದ ಈದ್ ಉಲ್ ಫಿತರ ಆಚರಣೆ 

ಭಾವೈಕ್ಯತೆಯ ರಂಜಾನ್ ( ಈದ್ ಉಲ್ ಫಿತರ್) ಹಬ್ಬವನ್ನು ಪಟ್ಟಣದಲ್ಲಿ ಬುಧವಾರ ಮುಸ್ಲಿಂ ಭಾಂದವರು ಶಾಂತಿ ಸೌಹರ್ದತೆಯೊಂದಿಗೆ ಸಂಬ್ರಮದಿಂದ ಆಚರಿಸಿದರು.

ಸಂಬ್ರಮ ಸಡಗರದಿಂದ ಈದ್ ಉಲ್ ಫಿತರ ಆಚರಣೆ

 
ನಮ್ಮ ಬೆಳಗಾವಿ ಸುದ್ದಿ , ಮೂಡಲಗಿ ಜೂ 5 :

 

ಒಂದು ತಿಂಗಳ ಕಾಲ ಉಪವಾಸ ವೃತಾಚರಣೆ ಆಚರಿಸಿ ಮನುಕುಲದ ಒಳಿತಿಗಾಗಿ ಪ್ರಾರ್ಥಿಸುವ ಭಾವೈಕ್ಯತೆಯ ರಂಜಾನ್ ( ಈದ್ ಉಲ್ ಫಿತರ್) ಹಬ್ಬವನ್ನು ಪಟ್ಟಣದಲ್ಲಿ ಬುಧವಾರ ಮುಸ್ಲಿಂ ಭಾಂದವರು ಶಾಂತಿ ಸೌಹರ್ದತೆಯೊಂದಿಗೆ ಸಂಬ್ರಮದಿಂದ ಆಚರಿಸಿದರು.
ಮಂಗಳವಾರ ಚಂದ್ರದರ್ಶನ ಮಾಡಿದ ಮುಸ್ಲಿಂ ಬಾಂದವರು ಮುಂಜಾನೆ ಹೊಸಬಟ್ಟೆ ಧರಿಸಿ ಜೇಲಾನಿ ಮರ್ಕಸ್ ದಿಂದ ಸರ್ವ ಸಮಾಜ ಬಾಂಧವರು ಈದ್ಗಾ ಮೈದಾನಕ್ಕೆ ತೆರಳಿ ಸಾಮೂಹಿಕ ಪ್ರಾರ್ಥನೆ ಸಲ್ಲಿಸಿ ಬಡವ, ಶ್ರೀಮಂತನೆಂಬ ಭೇದಭಾವವಿಲ್ಲದೇ ಮಕ್ಕಳು, ಹಿರಿಯರು ಪರಸ್ಪರ ಅಪ್ಪಿಕೊಂಡು ಸಿಹಿ ಹಂಚಿ ರಂಜಾನ್ ಹಬ್ಬದ ಶುಭಾಶಯ ವಿನಿಮಯ ಮಾಡಿಕೊಂಡರು.
ರಂಜಾನ್ ಬಹ್ಹದ ಪ್ರಯುಕ್ತ ಪ್ರಾರ್ಥನೆಯನ್ನು ಮೌಲಾನಾ ಅಬುಬಕ್ಕರ ದಾವಲಸಾಬ ಪೈಲವಾನ, ಕುರಾಣ ಪಠನವನ್ನು ಮೌಲಾನಾ ಅಬುಲ್ ಸಮದ ಮಕ್ತುಮಸಾಬ ನದಾಫ್ ಮತ್ತು ಬಯಾನವನ್ನು ಮೌಲಾನಾ ಇಲಿಯಾಸ್ ಇಮಾಮಶಾ ಫೀರಜಾದೆ ನೇತೃತ್ವದಲ್ಲಿ ಧಾರ್ಮಿಕ ಕಾರ್ಯಕ್ರಮಗಳನ್ನು ನೇರವೇರಿಸಿದರು.
ಜಿಲ್ಲಾ ಉಸ್ತುವಾರಿ ಸಚಿವ ಸತೀಶ ಜಾರಕಿಹೊಳಿ, ಅರಭಾಂವಿ ಶಾಸಕ ಬಾಲಚಂದ್ರ ಜಾರಕಿಹೊಳಿ, ಬೆಳಗಾವಿ ಸಂಸದ ಸುರೇಶ ಅಂಗಡಿಯವರು ಸಮಸ್ತ ಮುಸ್ಲಿಂ ಸಮಾಜದವರಿಗೆ ರಂಜಾನ ಹಬ್ಬದ ಕುರಿತು ಶುಭಾಷಯ ತಿಳಿಸಿರುವದನ್ನು ತಿಳಿಸಲಾಯಿತು.
ಅಂಜುಮನ್ ಇಸ್ಲಾಮ್ ಸಮಿತಿಯ ಲಾಲಸಾಬ ಸಿದ್ದಾಪೂರ, ಹುಸೇನಸಾಬ ಶೇಖ, ಮಲೀಕ ಹುಣಶ್ಯಾಳ, ಹಾಜಿ ಮೌಲಾಸಾಬ ಮೊಗಲ, ಹಾಜಿ ಅಕ್ಬರಸಾಬ ಪಶ್ಚಾಪೂರ, ಹಾಜಿ ಇರ್ಷಾದ ಫೀರಜಾದೆ, ಅಮಿನಷಾ ಫೀರಜಾದೆ, ಅನ್ವರ ಜಮಾದಾರ, ಮಕ್ತುಮ ಬೇಪಾರಿ, ಅಪ್ಪಾಸಾನ ನದಾಫ್, ಇಸ್ಮಾಯಿಲ ಇನಾಮದಾರ, ಇಕ್ಬಾಲ ಪೈಲವಾನ, ಮೀರಾಸಾಬ ಸೈಯ್ಯದ, ಆಸ್ಪಾಕ ಕಲಾರಕೋಪ್ಪ, ನೂರ ಮೋಮಿನ, ಮುಕ್ತುಮ್ ಶೇಖ, ಹಾಜಿ ಅಯ್ಯೂಬ ಮುಜಾವರ, ಶಬ್ಬಿರ ಕರಿಪಳ್ಳಿ ಹಾಗೂ ಪಟ್ಟಣದ ಮುಸ್ಲಿಂ ಸಮಾಜ ಬಾಂಧವರು ಪ್ರಾರ್ಥನೆಯಲ್ಲಿ ಪಾಲ್ಗೊಂಡಿದ್ದರು.
ಮುನ್ನೆಚ್ಚರಿಕೆ ಕ್ರಮವಾಗಿ ಮೂಡಲಗಿ ವೃತ್ತ ನಿರೀಕ್ಷಕ ವೇಂಕಟೇಶ ಮುರನಾಳ, ಉಪ ಆರಕ್ಷಕ ಶರಣೇಶ ಜಾಲಿಹಾಳ ಹಾಗೂ ಸಿಬ್ಬಂದಿ ವರ್ಗ ಸೂಕ್ತ ಬಂದೂ ಬಸ್ತ ವ್ಯವಸ್ಥೆ ಕಲ್ಪಿಸಿದ್ದರು.

Related posts: