ಗೋಕಾಕ:ಉಚಿತ ನೇತ್ರ ತಪಾಸಣೆ ಹಾಗೂ ಶಸ್ತ್ರ ಚಿಕಿತ್ಸೆ ಶಿಬಿರ
ಉಚಿತ ನೇತ್ರ ತಪಾಸಣೆ ಹಾಗೂ ಶಸ್ತ್ರ ಚಿಕಿತ್ಸೆ ಶಿಬಿರ
ನಮ್ಮ ಬೆಳಗಾವಿ ಸುದ್ದಿ , ಗೋಕಾಕ ಜೂ 8 :
ಲಯನ್ ಹಾಗೂ ಲಯನೆಸ್ಸ ಸಂಸ್ಥೆ ಮತ್ತು ಹುಬ್ಬಳ್ಳಿಯ ಎಮ್ ಎಮ್ ಜೋಶಿ ನೇತ್ರಾಲಯದ ಸಂಯುಕ್ತ ಆಶ್ರಯದಲ್ಲಿ ಶನಿವಾರದಂದು 36ನೇ ಮಾಸಿಕ ಉಚಿತ ನೇತ್ರ ತಪಾಸಣೆ ಹಾಗೂ ಶಸ್ತ್ರ ಚಿಕಿತ್ಸೆ ಶಿಭಿರವನ್ನು ನಗರದ ಡಾ|| ಮುರಗೋಡ ಮೆಮೊರಿಯಲ್ ಆಸ್ಪತ್ರೆಯಲ್ಲಿ ಹಮ್ಮಿಕೊಳ್ಳಲಾಗಿತ್ತು.
ಈ ಶಿಭಿರದಲ್ಲಿ 45ಜನರ ನೇತ್ರಗಳ ತಪಾಸಣೆ ಮಾಡಿ, 32 ಜನರ ನೇತ್ರ ಶಸ್ತ್ರ ಚಿಕಿತ್ಸೆಗಾಗಿ ಹುಬ್ಬಳ್ಳಿಯ ಎಮ್ ಎಮ್ ಜೋಶಿ ನೇತ್ರಾಲಯಕ್ಕೆ ಕಳುಹಿಸಿಕೊಡಲಾಗುವದೆಂದು ಜಿ ಎಸ್ ಸಿದ್ದಾಪೂರಮಠ ತಿಳಿಸಿದರು.
ಈ ಸಂದರ್ಭದಲ್ಲಿ ಹುಬ್ಬಳ್ಳಿಯ ಎಮ್ ಎಮ್ ಜೋಶಿ ನೇತ್ರಾಲಯದ ಡಾ|| ಪ್ರಕಾಶ, ಸ್ಥಳೀಯ ವೈದ್ಯರಾದ ಡಾ|| ಬಿ ಎಸ್ ಮದಬಾವಿ, ಅಶೋಕ ಮುರಗೋಡ, ಗೀತಾ ಪಟಗುಂದಿ, ಲಯನ್ ಸಂಸ್ಥೆಯ ವಿಶ್ವನಾಥ ಬೆಲ್ಲದ, ರವಿ ಕೌಜಲಗಿ ಇದ್ದರು.