RNI NO. KARKAN/2006/27779|Saturday, October 19, 2024
You are here: Home » breaking news » ಗೋಕಾಕ:ರೇಣುಕಾಚಾರ್ಯ ಸೊಸೈಟಿ ಮುಂದೆ ಶವವಿಟ್ಟು ಪ್ರತಿಭಟನೆ : ಗೋಕಾಕದಲ್ಲಿ ಘಟನೆ

ಗೋಕಾಕ:ರೇಣುಕಾಚಾರ್ಯ ಸೊಸೈಟಿ ಮುಂದೆ ಶವವಿಟ್ಟು ಪ್ರತಿಭಟನೆ : ಗೋಕಾಕದಲ್ಲಿ ಘಟನೆ 

ರೇಣುಕಾಚಾರ್ಯ ಸೊಸೈಟಿ ಮುಂದೆ ಶವವಿಟ್ಟು ಪ್ರತಿಭಟನೆ : ಗೋಕಾಕದಲ್ಲಿ ಘಟನೆ

 
ನಮ್ಮ ಬೆಳಗಾವಿ ಸುದ್ದಿ , ಗೋಕಾಕ ಜೂ 8 :

 
ಇಲ್ಲಿಯ ಜಗದ್ಗುರು ರೇಣುಕಾಚಾರ್ಯ ಮಹಿಳಾ ಪತ್ತಿನ ಸಹಕಾರಿ ಸೊಸೈಟಿ ಗ್ರಾಹಕರಿಗೆ ಬಹುಕೋಟಿ ರೂ. ಪಂಗನಾಮ ಹಾಕಿದ ಪರಿಣಾಮ ಗ್ರಾಹಕರು ಮಾನಸಿಕವಾಗಿ ನೊಂದಿ ಸಾವನ್ನಪ್ಪುತ್ತಿದ್ದಾರೆ ಎಂದು ಆರೋಪ ಸ್ಥಳೀಯ ಜೈ ಭಾರತ ಯುವ ಸೇನೆ ಸಂಘಟನೆಯವರ ಇಂದು ಹೃದಯಘಾತದಿಂದ ಸಾವನ್ನಪ್ಪಿದ ಬಸವರಾಜ ನಾಗಪ್ಪ ಹಾಗರಗಿ (55) ಎಂಬಾತನ ಶವವನ್ನು ಸೊಸೈಟಿ ಕಛೇರಿ ಮುಂದಿಟ್ಟು ಪ್ರತಿಭಟನೆ ನಡೆಯಿಸಿದ ಘಟನೆ ಗೋಕಾಕ ನಗರದಲ್ಲಿ ಜರುಗಿದೆ .

ಬಸವರಾಜ ನಾಗಪ್ಪ ಹಾಗರಗಿ ಎಂಬಾತ ನಗರದಲ್ಲಿ ತಿರುಗಾಡಿ ಚುನುಮುರಿ ವ್ಯಾಪಾರ ಮಾಡುತ್ತಿದ ಇತನ್ನು ಜಗದ್ಗುರು ರೇಣುಕಾಚಾರ್ಯ ಮಹಿಳಾ ಪತ್ತಿನ ಸೊಸೈಟಿಯಲ್ಲಿ 3.70 ಸಾವಿರ ಹಣ ಠೇವಣಿ ಇಟ್ಟದ ಎನ್ನಲಾಗಿದೆ ಠೇವಣಿ ಹಣದ ಮುದ್ದತು ಮುಗಿದರು ಸೊಸೈಟಿಯವರು ಹಣ ಮರಳಿ ನೀಡದ ಪರಿಣಾಮ ಮಾನಸಿಕವಾಗಿ ನೊಂದಿದ್ದ ಇತ ಶನಿವಾರದಂದು ಹೃದಯಘಾತದಿಂದ ಮೃತಪಟ್ಟಿದು ಇವನ ಸಾವು ಈ ಕಾಣರಣಕ್ಕಾಗಿಯೇ ಆಗಿದೆ ಎಂದು ಆರೋಪಿಸಿ ನಗರದ ಜೈ ಭಾರತ ಯುವ ಸೇನೆ ಸಂಘಟನೆಯವರು ಮತ್ತು ಠೇವಣಿದಾರರು ಇಂದು ಶವವನ್ನು ಸೊಸೈಟಿಯ ಕಛೇರಿ ಎದುರು ಇಟ್ಟು ಪ್ರತಿಭಟನೆ ನಡೆಸಿದ್ದಾರೆ ಎಂದು ತಿಳಿದು ಬಂದಿದೆ

ಪ್ರತಿಭಟನೆಯಲ್ಲಿ ಜೈ ಭಾರತ ಯುವ ಸೇನೆಯ ಶಿವಾನಂದ ಹಿರೇಮಠ , ಸುಧೀರಕುಮಾರ ಚಿಂಚಲಿಕರ , ಬಸವರಾಜ ಮಾನಪ್ಪಗೋಳ , ರಾಜಶ್ರಂ ಬರಗಿ , ಶೋಭಾ ಮಿರ್ಜಿ , ರಾಜಶ್ರೀ ಡೊಂಗರೆ , ಪುಷ್ಪಾ ಗುಡನ್ನವರ , ಲಕ್ಷ್ಮೀ ಗುಡನ್ನವರ ಸೇರಿದಂತೆ ನೂರಾರು ಗ್ರಾಹಕರು ಪ್ರತಿಭಟನೆಯಲ್ಲಿ ಇದ್ದರು , ತಡ ರಾತ್ರಿಯವರೆಗೂ ಪ್ರತಿಭಟನೆ ಮುಂದೆವರೆದಿತ್ತು

ಸ್ಥಳಕ್ಕೆ ಅಧಿಕಾರಿಗಳ ಭೇಟಿ : ಪ್ರತಿಭಟನೆ ವಿಷಯ ತಿಳಿದು ಸ್ಥಳಕ್ಕಾಗಮಿಸಿದ ಸಹಕಾರಿ ಸಂಘಗಳ ಅಭಿವೃದ್ಧಿ ಅಧಿಕಾರಿ ಬಿರಾದರ ಪಾಟೀಲ ಮತ್ತು ನಗರ ಠಾಣೆಯ ಪಿಎಸ್ಐ ಶ್ರೀಶೈಲ ಬ್ಯಾಕೂಡ ಸ್ಥಳಕ್ಕೆ ಭೇಟಿ ನೀಡಿ ಈಗಾಗಲೇ ಈ ಪ್ರಕರಣ ನ್ಯಾಯಾಲಯದಲ್ಲಿದ್ದು ಕಾನೂನು ಚೌಕಟ್ಟಿನಲ್ಲಿ ಈ ಪ್ರಕರಣವನ್ನು ಇತ್ಯರ್ಥಗೋಳಿಸಿ ಗ್ರಾಹಕರಿಗೆ ನ್ಯಾಯ ದೊರಕಿಸಿಕೊಡಲಾಗುವದು ಎಂದು ಭರವಸೆ ನೀಡಿದರು . ಅಧಿಕಾರಿಗಳ ಭರವಸೆಗೆ ಜಗ್ಗದ ಪ್ರತಿಭಟನಾಕಾರರು ತಡ ರಾತ್ರಿವರೆಗೆ ಪ್ರತಿಭಟನೆ ನಡೆಸಿದ್ದಾರೆ ಎಂದು ತಿಳಿದು ಬಂದಿದೆ

ಘಟನೆಯ ವಿವರ : ಕಳೆದ ಎರೆಡು ವರ್ಷಗಳ ಹಿಂದೆ ಜಗದ್ಗುರು ರೇಣುಕಾಚಾರ್ಯ ಮಹಿಳಾ ಪತ್ತಿನ ಸರಕಾರಿ ಸೊಸೈಟಿ ಗ್ರಾಹಕರಿಂದ ಸೂಮಾರು 6 ಕೋಟಿ ಹಣ ಪಂಗನಾಮ ಹಾಕಿದ್ದು , ಗ್ರಾಹಕರು ಈ ಸಂಬಂಧ ಹೋರಾಟಗಳನ್ನು ಮಾಡಿ ನ್ಯಾಯಾಲಯದಲ್ಲಿ ಪ್ರಕರಣವನ್ನು ದಾಖಲಿಸಿದ್ದಾರೆ . ಇದಕ್ಕೆ ಸಂಬಂಧಿಸಿದಂತೆ ಕಳೆದ ಎರೆಡು ತಿಂಗಳಗಳ ಹಿಂದೆ ಸೊಸೈಟಿಯ ಕಾರ್ಯದರ್ಶಿ ಚನ್ನಪರಯ್ಯ (ರಾಜು) ಯೋಗಿಕೊಳ್ಳಮಠ ಎಂಬಾತನ ಮೇಲೆ ಪೊಲೀಸರು ಪ್ರಕರಣ ದಾಖಲಿಸಿಕೊಂಡು ಬಂಧಿಸಿದ್ದರು

Related posts: