RNI NO. KARKAN/2006/27779|Saturday, December 14, 2024
You are here: Home » breaking news » ಗೋಕಾಕ:ಭಾರಿ ಮಳೆ, ಗಾಳಿಗೆ ಧರೆಗುರುಳಿದ 70 ವರ್ಷ ಹಳೆಯ ಆಲದ ಮರ : ಸಂಚಾರ ಅಸ್ತವ್ಯಸ್ತ

ಗೋಕಾಕ:ಭಾರಿ ಮಳೆ, ಗಾಳಿಗೆ ಧರೆಗುರುಳಿದ 70 ವರ್ಷ ಹಳೆಯ ಆಲದ ಮರ : ಸಂಚಾರ ಅಸ್ತವ್ಯಸ್ತ 

ಭಾರಿ ಮಳೆ, ಗಾಳಿಗೆ ಧರೆಗುರುಳಿದ 70 ವರ್ಷ ಹಳೆಯ ಆಲದ ಮರ : ಸಂಚಾರ ಅಸ್ತವ್ಯಸ್ತ

 

 

ನಮ್ಮ ಬೆಳಗಾವಿ ಸುದ್ದಿ , ಗೋಕಾಕ ಜೂ 9 :

 

 
ರಾಜ್ಯದ ರಾಜ್ಯದಾನಿ ಬೆಂಗಳೂರಿನಲ್ಲಿ ಕಳೆದ ಕೆಲವು ದಿನಗಳಿಂದ ವರುಣನ ಅರ್ಭಟ ಜೋರಾಗಿ ನಡೆಯುತ್ತಿದ್ದು , ಇಂದು ಸಾಯಂಕಾಲ ಮಳೆರಾಯನ ಕೃಪೆ ಗೋಕಾಕ ನಗರ ಸೇರಿದಂತೆ ಅನೇಕ ಕಡೆಗಳಲ್ಲಿ ವಾಲಿದ ಪರಿಣಾಮ ಒಂದು ಘಂಟೆಗೂ ಹೆಚ್ಚು ಕಾಲ ಧಾರಾಳವಾಗಿ ಸುರಿದಿದೆ

ಸಾಯಂಕಾಲ 6 ಘಂಟಗೆ ಸುಮಾರು ಪ್ರಾರಂಭವಾದ ಭಾರಿ ಮಳೆಯಿಂದ ಗೋಕಾಕ ತಾಲೂಕಿನ ಮರಡಿಮಠ ಗ್ರಾಮದ ಮರಡಿಮಠ – ಕೊಣ್ಣೂರ ಮುಖ್ಯರಸ್ತೆಯಲ್ಲಿ ಇದ್ದ 70 ವರ್ಷಗಳ ಹಳೆಯ ಬೃಹದಾಕಾರದ ಆಲದ ಮರ ನೆಲಕ್ಕುರುಳಿದೆ . ಇದರಿಂದ ಸಂಚಾರದಲ್ಲಿ ಭಾರಿ ತೊಂದರೆ ಉಂಟಾಗಿದ್ದು ವಾಹನ ಸವಾರರು ಪರದಾಡುವ ಪರಿಸ್ಥಿತಿ ನಿರ್ಮಾಣವಾಗಿದೆ

ವಿಷಯ ತಿಳಿದು ಸ್ಥಳಕ್ಕೆ ಭೇಟಿ ನೀಡಿರುವ ಅರಣ್ಯ ಇಲಾಖೆಯ ಅಧಿಕಾರಿಗಳು ನೆಲಕ್ಕುರುಳಿರುವ ಬೃಹದಾಕಾರದ ಮರವನ್ನು ಪಕ್ಕಕ್ಕೆ ಸರಿಸುವಲ್ಲಿ ನಿರತರಾಗಿದ್ದಾರೆ . ಇದರಿಂದ ಯಾವುದೆ ಯಾವುದೆ ಆಸ್ತಿ ಪಾಸ್ತಿ ಹಾನಿಯಾಗಿಲ್ಲ ಆದಷ್ಟು ಬೇಗ ಇದನ್ನು ತೆರುವು ಗೊಳಿಸಿ ಸುಗಮ ಸಂಚಾರಕ್ಕೆ ಅನುವು ಮಾಡಿಕೊಡಲಾಗುವುದೆಂದು ಉಪ ವಲಯ ಅರಣ್ಯ ಅಧಿಕಾರಿ ಹಮ್ಮನವರ ಪತ್ರಿಕೆಗೆ ತಿಳಿಸಿದ್ದಾರೆ

Related posts: