ಘಟಪ್ರಭಾ:ಶಿಂದಿಕುರಬೇಟ ಗ್ರಾ.ಪಂ ಅಧ್ಯಕ್ಷರಾಗಿ ಕಾಶಪ್ಪಗೋಳ ಅವಿರೋಧ ಆಯ್ಕೆ
ಶಿಂದಿಕುರಬೇಟ ಗ್ರಾ.ಪಂ ಅಧ್ಯಕ್ಷರಾಗಿ ಕಾಶಪ್ಪಗೋಳ ಅವಿರೋಧ ಆಯ್ಕೆ
ನಮ್ಮ ಬೆಳಗಾವಿ ಸುದ್ದಿ , ಘಟಪ್ರಭಾ ಜೂ 11 :
ಸಮೀಪದ ಶಿಂದಿಕುರಬೇಟ ಗ್ರಾಮ ಪಂಚಾಯತ ಅಧ್ಯಕ್ಷ ರಾಜೀನಾಮೆ ನೀಡಿದ್ದರಿಂದ ತೆರವುಗೊಂಡ ಅಧ್ಯಕ್ಷ ಸ್ಥಾನಕ್ಕೆ ಅವಿರೋಧ ಆಯ್ಕೆ ಮಂಗಳವಾರದಂದು ಜರುಗಿತು.
ಅಧ್ಯಕ್ಷರಾಗಿ ವಿಠ್ಠಲ ನೀಲಪ್ಪ ಕಾಶಪ್ಪಗೋಳ ಅವಿರೋಧವಾಗಿ ಆಯ್ಕೆಗೊಂಡರು. ಒಬ್ಬರೇ ನಾಮಪತ್ರ ಸಲ್ಲಿಸಿದ್ದರಿಂದ ಈ ಅವಿರೋಧ ಆಯ್ಕೆ ಜರುಗಿತು ಎಂದು ಚುನಾವಣಾಧಿಕಾರಿ ಎಸ್.ಎಸ್.ಮೆಳವಂಕಿ ತಿಳಿಸಿದರು. ಈ ಅವಿರೋಧ ಆಯ್ಕೆಯು ಗೋಕಾಕ ಶಾಸಕ ರಮೇಶ ಜಾರಕಿಹೊಳಿ ಅವರ ಮಾರ್ಗದರ್ಶನದಲ್ಲಿ ಜರುಗಿತು. ನೂತನ ಅಧ್ಯಕ್ಷ ವಿಠ್ಠಲ ಕಾಶಪ್ಪಗೋಳ ಮಾತನಾಡಿ ಗ್ರಾಮದ ಸರ್ವಾಂಗೀಣ ಅಭಿವೃದ್ದಿ ಶ್ರಮಿಸುವುದಾಗಿ ತಿಳಿಸಿದರು.
ಈ ಸಂದರ್ಭದಲ್ಲಿ ಯುವ ಮುಖಂಡರಾದ ಸುರೇಶ ಸನದಿ, ನಿಂಗಪ್ಪ ಬಂಬಲಾಡಿ, ಮಾಜಿ ಅಧ್ಯಕ್ಷ ಮಹ್ಮದರಫೀಕ ಮಕಾನದಾರ, ಮಂಜುನಾಥ ಗುಡಕೇತ್ರ, ಸಿದ್ಧಾರೂಢ ಕಂಬಾರ, ಗೋವಿಂದ ಗಾಡಿವಡ್ಡರ, ಉಪಾಧ್ಯಕ್ಷೆ ಭೀಮವ್ವ ಭಜಂತ್ರಿ, ಪಿಡಿಓ ಎಂ.ಡಿ.ಸರಕಾವಸ್, ಸೇರಿದಂತೆ ಗ್ರಾಮ ಪಂಚಾಯತ ಸರ್ವ ಸದಸ್ಯರು ಹಾಗೂ ಸಿಬ್ಬಂದಿ ವರ್ಗದವರು ಇದ್ದರು.