RNI NO. KARKAN/2006/27779|Saturday, October 19, 2024
You are here: Home » breaking news » ಗೋಕಾಕ:ಕೌಜಲಗಿಯಲ್ಲಿ ರಾಷ್ಟ್ರಮಟ್ಟದ ಜಂಗೀ ನಿಕಾಲಿ ಕುಸ್ತಿ

ಗೋಕಾಕ:ಕೌಜಲಗಿಯಲ್ಲಿ ರಾಷ್ಟ್ರಮಟ್ಟದ ಜಂಗೀ ನಿಕಾಲಿ ಕುಸ್ತಿ 

ಕೌಜಲಗಿಯಲ್ಲಿ ರಾಷ್ಟ್ರಮಟ್ಟದ ಜಂಗೀ ನಿಕಾಲಿ ಕುಸ್ತಿ

 

 
ನಮ್ಮ ಬೆಳಗಾವಿ ಸುದ್ದಿ , ಕೌಜಲಗಿ ಜೂ 11 :

 

 
ಪಟ್ಟಣದ ದೇಸಗತಿಯ ರಾಜವಾಡೆಯಲ್ಲಿ ರಾಷ್ಟ್ರಮಟ್ಟದ ನಿಕಾಲಿ ಜಂಗೀ ಕುಸ್ತಿಗಳು ಸೋಮವಾರ ಜರುಗಿದವು. ಊರಿನ ಹನಮಂತ ದೇವರ ಓಕಳಿಯ ನಿಮಿತ್ತವಾಗಿ ದೇಸಗತಿಯ ಕಾಲದಿಂದಲೂ ಕುಸ್ತಿ ಪಂದ್ಯಾವಳಿಗಳು ಜರುಗುತ್ತ ಬಂದಿದ್ದು, ಈ ವರ್ಷ 9ನೇ ರಾಷ್ಟ್ರಮಟ್ಟದ ಕುಸ್ತಿ ಪಂದ್ಯಾವಳಿ ಅತ್ಯಂತ ಆಕರ್ಷಕವಾಗಿ ಜರುಗಿದವು.
ರಾಷ್ಟ್ರಮಟ್ಟದ ಕುಸ್ತಿ ಪಂದ್ಯಾವಳಿಯನ್ನು ಸ್ಥಳೀಯ ಮುಖಂಡ ಡಾ.ರಾಜೇಂದ್ರ ಸಣ್ಣಕ್ಕಿ ಉದ್ಘಾಟಿಸಿ ಮಾತನಾಡಿ ದೇಶಿಯ ಕ್ರೀಡೆಗಳನ್ನು ಇಂದಿನ ಯುವಕರು ಬೆಳೆಸಬೇಕು. ಕುಸ್ತಿಯಾಟವು ಪ್ರತಿ ಹಳ್ಳಿಗಳಲ್ಲಿ ಬೆಳೆದು ಬಂದ ಅದ್ಭುತ ಕಲೆಯಾಗಿದ್ದು, ಆರೋಗ್ಯದಾಯಕ ಕ್ರೀಡೆಯು ಆಗಿದೆ. ಈ ಕ್ರಿಡೆಯನ್ನು ಯುವ ಸಮುದಾಯ ಉಳಿಸಬೇಕೆಂದು ಕರೆ ನೀಡಿದರು.
ಕೌಜಲಗಿ ಕುಸ್ತಿ ಪಂದ್ಯಾವಳಿ ಕಮೀಟಿ ವತಿಯಿಂದ 1 ಬೆಳ್ಳಿ ಗದೆ ಬಹುಮಾನ ಇಡಲಾಗಿತ್ತು. ಇದನ್ನು ಬೆಳಗಾವಿಯ ರತನ ಮಠಪತಿ ಆಖಾಡ ತಾಲೀಮನ ಸಂಗಮೇಶ ಕೋಹಳ್ಳಿ ಪ್ರಥಮ ಸ್ಥಾನ ಪಡೆಯುವುದರ ಮೂಲಕ ಬೆಳ್ಳಿ ಗದೆಯನ್ನು ತಮ್ಮದಾಗಿಸಿಕೊಂಡರು. ದ್ವಿತೀಯ ಬಹುಮಾನವನ್ನು ಸಾಂಗ್ಲಿಯ ಪರಶುರಾಮ ಸಿಂಧಿಹಳ್ಳಿ ಮತ್ತು ಮಹಾರಾಷ್ಟ್ರದ ನಾಶಿಕದ ನಿಖಿಲ ದನಗಲಕರ ಪಡೆದುಕೊಂಡಿದ್ದಾರೆ. ಹನಗಂಡಿ ಗ್ರಾಮದ ಗಜಾನನ ಹನಗಂಡಿ ಹಾಗೂ ಬೆಳಗಾವಿಯ ಸಾಗರ ಎಲಡಗಿ ಇಬ್ಬರೂ ತೃತೀಯ ಬಹುಮಾನ ಪಡೆದರು. ದ್ವಿತೀಯ ಮತ್ತು ತೃತೀಯ ಕುಸ್ತಿಗಳು ಬಿಡಗುಸ್ತಿಗಳಾದವು. ಬೆಳಗಾವಿಯ ಸಂಗಮೇಶ ಕೊಹಳ್ಳಿ ಮತ್ತು ಕೊಲ್ಹಾಪೂರದ ಅಮುಲ ಕೊಲ್ಹಾಪೂರ ಅವರ ಮಧ್ಯೆ ರೋಚಕ ನಿಕಾಲಿ ಜಂಗಿ ಕುಸ್ತಿ ಏರ್ಪಟ್ಟಿತ್ತು. ಈಟಿಜಿಟಿ ಮಳೆಯಲ್ಲಿಯೂ ಇವರಿಬ್ಬರ ನಡುವಿನ ಕುಸ್ತಿ ಪಂದ್ಯಾವಳಿಯನ್ನು ಜನ ಕಣ್ತುಂಬಿಸಿಕೊಂಡರು.
ಕುಸ್ತಿ ಪಂದ್ಯಾವಳಿಯ ನಿರ್ಣಾಯಕರಾಗಿ ಜೀವನ ಧರೆನ್ನವರ, ಫಕೀರಪ್ಪ ಛಾಯವ್ವಗೋಳ, ಲಾಡಸಾಬ ಮುಲ್ತಾನಿ, ಸದಾಶಿವ ಲಗಳಿ ಕಾರ್ಯನಿರ್ವಹಿಸಿದರು. ಪಂದ್ಯಾವಳಿ ಏರ್ಪಡಲು ಬಸಪ್ಪ ಸಣ್ಣಕ್ಕಿ, ವಿಠ್ಠಲ ರಾವುತ, ಹನಮಂತ ಕುಂದರಗಿ, ರಾಮಚಂದ್ರ ಥರಕಾರ, ಮಹಾಂತೇಶ ಭೀ. ಕೌಜಲಗಿ ಮುಂತಾದವರು ಗ್ರಾಮಸ್ಥರ ಸಹಾಯದೊಂದಿಗೆ ಕುಸ್ತಿಯಾಟವನ್ನು ಸಮರ್ಥವಾಗಿ ಸಂಘಟಿಸಿದ್ದರು.
ಈ ಕಾರ್ಯಕ್ರಮಕ್ಕೆ ಮುಖ್ಯ ಅತಿಥಿಗಳಾಗಿ ಅರವಿಂದ ದಳವಾಯಿ, ನೀಲಪ್ಪ ಕೇವಟಿ, ರವಿ ಪರುಶೆಟ್ಟಿ, ಸುಭಾಸ ಕೌಜಲಗಿ, ಮಹೇಶ ಪಟ್ಟಣಶೆಟ್ಟಿ, ಜಕೀರ ಜಮಾದಾರ, ರಾಯಪ್ಪ ಬಳೋಲದಾರ, ಬಸವರಾಜ ಜೋಗಿ, ಮಹಾಂತಪ್ಪ ಶಿವನಮಾರಿ, ಶ್ರೀಶೈಲ ಗಾಣಿಗೇರ, ವಿಠ್ಠಲ ದೇವರ್ಷಿ ಸ್ವಾಮಿಗಳು, ಮಹಾನಿಂಗ ಹಳ್ಳೂರ, ಜಗದೀಶ ಭೋವಿ, ಬಿ.ಎನ್.ಮುತಾಲಿಕ ದೇಸಾಯಿ ಮುಂತಾದವರು ಆಗಮಿಸಿದ್ದರು.

Related posts: