RNI NO. KARKAN/2006/27779|Saturday, October 19, 2024
You are here: Home » breaking news » ಘಟಪ್ರಭಾ:ಬೆಳಗಾವಿಯ ರಿತೇಶ ವಾರಿಯರ್ಸ್ ತಂಡಕ್ಕೆ “ಎಲ್.ಜೆ ಟ್ರೋಫಿ

ಘಟಪ್ರಭಾ:ಬೆಳಗಾವಿಯ ರಿತೇಶ ವಾರಿಯರ್ಸ್ ತಂಡಕ್ಕೆ “ಎಲ್.ಜೆ ಟ್ರೋಫಿ 

ಘಟಪ್ರಭಾ: “ಎಲ್.ಜೆ ಟ್ರೋಫಿ 2019” ಟೇನಿಸ್ ಬಾಲ್ ಕ್ರೀಕೆಟ್ ಟ್ರಾಫಿಯನ್ನು ಗೆದ್ದಿಕೊಂಡ ಬೆಳಗಾವಿಯ ರಿತೇಶ ವಾರಿಯರ್ಸ್ ತಂಡಗೆ ಬಹುಮಾನ ವಿತರಿಸುತ್ತಿರುವ ಗಣ್ಯರು.

ಬೆಳಗಾವಿಯ ರಿತೇಶ ವಾರಿಯರ್ಸ್ ತಂಡಕ್ಕೆ “ಎಲ್.ಜೆ ಟ್ರೋಫಿ

 

 

ನಮ್ಮ ಬೆಳಗಾವಿ ಸುದ್ದಿ , ಘಟಪ್ರಭಾ ಜೂ 16 :

 
ಇಲ್ಲಿಯ ಎಸ್.ಡಿ.ಟಿ ಕಾಲೇಜ್ ಮೈದಾನದಲ್ಲಿ ದಿ.8 ರಿಂದ ಪ್ರಾರಂಭವಾದ ಅಂತರ ರಾಜ್ಯ ಮಟ್ಟದ “ಎಲ್.ಜೆ ಟ್ರೋಫಿ 2019” ಟೇನಿಸ್ ಬಾಲ್ ಕ್ರೀಕೆಟ್ ಟ್ರಾಫಿಯನ್ನು ಬೆಳಗಾವಿಯ ರಿತೇಶ ವಾರಿಯರ್ಸ್ ತಂಡ ತಮ್ಮದಾಗಿಸಿಕೊಂಡಿದೆ.
ಶನಿವಾರ ನಡೆದ ಫೈನಲ್ ಪಂದ್ಯದಲ್ಲಿ ತಮ್ಮ ಎದುರಾಳಿ ರನ್ ಮುದೋಳ ತಂಡವನ್ನು ಸುಲಬವಾಗಿ ಸೋಲಿಸಿದ ಬೆಳಗಾವಿಯ ರಿತೇಶ ವಾರಿಯರ್ಸ್ ತಂಡ ಟ್ರಾಫಿಯನ್ನು ಗೆದ್ದುಕೊಂಡಿದೆ.
ವಿಜೇತ ತಂಡಕ್ಕೆ ಪ್ರಥಮ ಬಹುಮಾನವಾಗಿ ಗೋಕಾಕದ ಖ್ಯಾತ ಉದ್ಯಮಿ ಲಖನ್ ಲ.ಜಾರಕಿಹೊಳಿ ಅವರು ನೀಡಿದ 1.00,000/ರೂ ಹಾಗೂ ಒಂದು ಆಕರ್ಷಕ ಟ್ರೋಫಿಯ ಗಣ್ಯರು ವಿತರಿಸಿದರು.
ದ್ವಿತೀಯ ಸ್ಥಾನ ಪಡೆದುಕೊಂಡ ರನ್ ಮುದೋಳ ತಂಡಕ್ಕೆ ಬಹುಮಾನವಾಗಿ ಪ್ರಥಮ ದರ್ಜೆ ಗುತ್ತಿಗೆದಾರ ಜಯಶೀಲ ಶೆಟ್ಟಿ ಅವರು ನೀಡಿದ 50,000/ರೂ ಹಾಗೂ ಒಂದು ಆಕರ್ಷಕ ಟ್ರೋಫಿಯನ್ನು ನೀಡಲಾಯಿತು.
ಯುವ ಮುಖಂಡ ಅಲ್ತಾಫ ಉಸ್ತಾದ ಇವರಿಂದ ಸರಣಿ ಶ್ರೇಷ್ಠರಿಗೆ ನೀಡಲಾದ 10,000/ರೂ ಹಾಗೂ ಒಂದು ಆಕರ್ಷಕ ಟ್ರೋಫಿ ಬನಹಟ್ಟಿಯ ಮೊಹ್ಮದ ಕೈಫ್ ಪಡೆದುಕೊಂಡರು. ಪಂದ್ಯಾವಳಿಗಳಿಗೆ ಥರ್ಡ ಅಂಪಾಯರ ಸೇವೆಯನ್ನು ಪ್ರಕಾಶ ಬಿ.ಬಡಿಗೇರ ಇರಿಂದ ಮಾಡಲಾಗಿತ್ತು.
ಈ ಸಂದರ್ಭದಲ್ಲಿ ಹಿರಿಯರಾದ ಡಿ.ಎಂ.ದಳವಾಯಿ, ಜಯಶೀಲ ಶೆಟ್ಟಿ, ಸುಲ್ತಾನಸಾಬ ಕಬ್ಬೂರ, ಪ್ರಕಾಶ ಡಾಂಗೆ, ಸುಧೀರ ಜೋಡಟ್ಟಿ, ಮಲ್ಲು ಕೋಳಿ, ಸುರೇಶ ಪೂಜಾರಿ, ಸಲೀಮ ಕಬ್ಬೂರ, ಗಣೇಶ ಗಾಣಿಗ, ರಹೀಮ ಪಠಾಣ, ಕುಮಾರ ಹುಕ್ಕೇರಿ, ಕಲ್ಲಪ್ಪ ಕಾಡದವರ, ಮಲ್ಲಿಕಾಜುನ ಶಿಂದೆ, ಯೂನೂಸ ಶೇಖ, ಪ್ರಾಯೋಜಕರಾದ ನವೀನ ಹೊಸಮನಿ, ರಾಜು ಕಾಡದವರ, ರಾಜು ಸಂಪಗಾವಿ, ದೀಪಕ ಬಾನೆ ಸೇರಿದಂತೆ ಅನೇಕರು ಇದ್ದರು.

Related posts: