ಬೆಳಗಾವಿ:ಶಾಸಕ ರಮೇಶ್ ಜಾರಕಿಹೊಳಿ ರಾಜೀನಾಮೆ ಬಾಲ್ ನಮ್ಮ ಕಡೆ ಇಲ್ಲ : ಅರಣ್ಯ ಸಚಿವ ಸತೀಶ
ಶಾಸಕ ರಮೇಶ್ ಜಾರಕಿಹೊಳಿ ರಾಜೀನಾಮೆ ಬಾಲ್ ನಮ್ಮ ಕಡೆ ಇಲ್ಲ : ಅರಣ್ಯ ಸಚಿವ ಸತೀಶ
ನಮ್ಮ ಬೆಳಗಾವಿ ಸುದ್ದಿ , ಬೆಳಗಾವಿ ಜೂ 16 :
ಗೋಕಾಕ್ ಕಾಂಗ್ರೆಸ್ ರೆಬೆಲ್ ಶಾಸಕ ರಮೇಶ್ ಜಾರಕಿಹೊಳಿ ರಾಜೀನಾಮೆ ವಿಚಾರವಾಗಿ ಸಚಿವ ಸತೀಶ್ ಜಾರಕಿಹೊಳಿ ಪ್ರತಿಕ್ರಿಯೆ ನೀಡಿದ್ದಾರೆ.
ಬೆಳಗಾವಿಯಲ್ಲಿ ಸುದ್ದಿಗಾರರ ಜೊತೆ ಮಾತನಾಡಿದ ಅವರು ‘ ಬಾಲ್ ನಮ್ಮ ಕಡೆ ಇಲ್ಲ, ಅವರ ಕಡೆ ಇದೆ. ಅವರನ್ನೇ ಕೇಳಬೇಕು ಎಂದಿದ್ದಾರೆ.
ಕಳೆದ ಒಂದೂವರೆ ತಿಂಗಳಿನಿಂದ ಕ್ಷೇತ್ರದಲ್ಲಿ ರಮೇಶ್ ಇಲ್ಲದ ಕಾರಣ, ಅವರನ್ನೇ ಕೇಳಿ ಅವರು ಶಾಸಕರಾಗಿ ತಿಳಿದು ಕೊಳ್ಳಬೇಕು. ಕೊಣ್ಣೂರು ಮತ್ತು ಗೋಕಾಕ್ ನಗರ ಸಭೆಯನ್ನು ಪ್ರತ್ಯೇಕವಾಗಿ ಮಾಡುತ್ತಿದ್ದೇವೆ ಎಂದು ಹೇಳಿದರು. ರಮೇಶ್ ಜಾರಕಿಹೊಳೀ ರಾಜೀನಾಮೆ ಮಾಡೋದು ಬಿಡೋದು ಅವರಿಗೆ ಗೊತ್ತು, ರಮೇಶ್ ಜಾರಕಿಹೊಳಿಯಿಂದ ಸರ್ಕಾರಕ್ಕೆ ತೊಂದರೆ ಇಲ್ಲ ಎಂದು ಸತೀಶ್ ಜಾರಕಿಹೊಳಿ ಹೇಳಿದರು.
Related posts:
ಮೂಡಲಗಿ:ಮೂಡಲಗಿ ತಾಲೂಕು ಕೈಬಿಟ್ಟ ಸರಕಾರ : ಫಲಕ ಪ್ರರ್ದಶಿಸಿ ಜಾರಕಿಹೊಳಿ ಸಹೋದರರ ವಿರುದ್ಧ ಸಾರ್ವಜನಿಕರ ಓಫನ ಆಕ್ರೋಶ
ಗೋಕಾಕ:ಕುಟುಂಬದಲ್ಲಿ ಸಾಹಿತ್ಯದ ಚರ್ಚೆಯಾಗದಿದ್ದರೆ ನಾವು ಒಳ್ಳೆಯ ಸಾಹಿತಿಯಾಗಲು ಸಾಧ್ಯವಿಲ್ಲ : ಕವಿ ಅಲ್ಲಾಗಿರಿರಾಜ ಅಭಿ…
ಯಮಕನಮರಡಿ:ಈ ಬಾರಿ ರಾಜ್ಯದಲ್ಲಿ ಕಾಂಗ್ರೆಸ್ ಪಕ್ಷ ಅಧಿಕಾರಕ್ಕೆ ಬರಲಿದೆ : ಕೆಪಿಸಿಸಿ ಕಾರ್ಯಾಧ್ಯಕ್ಷ ಸತೀಶ ಜಾರಕಿಹೊಳಿ ವ…