ಗೋಕಾಕ:ಜನಪರ ಕಾರ್ಯಗಳನ್ನು ಮಾಡಿದವರು ಜನರ ಮನದಲ್ಲಿ ಸದಾ ಅಚ್ಚಳಿಯದೇ ಇರುತ್ತಾರೆ: ಎಮ್.ಆರ್.ಮುಂಜಿ
ಜನಪರ ಕಾರ್ಯಗಳನ್ನು ಮಾಡಿದವರು ಜನರ ಮನದಲ್ಲಿ ಸದಾ ಅಚ್ಚಳಿಯದೇ ಇರುತ್ತಾರೆ: ಎಮ್.ಆರ್.ಮುಂಜಿ
ನಮ್ಮ ಬೆಳಗಾವಿ ಸುದ್ದಿ , ಗೋಕಾಕ ಜೂ 20 :
ವೃತ್ತಿ ಜೀವನದಲ್ಲಿ ಜನಪರ ಕಾರ್ಯಗಳನ್ನು ಮಾಡಿದವರು ಜನರ ಮನದಲ್ಲಿ ಸದಾ ಅಚ್ಚಳಿಯದೇ ಇರುತ್ತಾರೆಂದು ವಾಯುವ್ಯ ರಸ್ತೆ ಸಾರಿಗೆ ಸಂಸ್ಥೆಯ ಬೆಳಗಾವಿ ವಿಭಾಗೀಯ ನಿಯಂತ್ರಣ ಅಧಿಕಾರಿ ಎಮ್.ಆರ್.ಮುಂಜಿ ಹೇಳಿದರು.
ಬುಧವಾರದಂದು ಸಂಜೆ ನಗರದ ಸಮುದಾಯ ಭವನದಲ್ಲಿ ಸಾರಿಗೆ ಇಲಾಖೆ ಹಾಗೂ ಉಪ್ಪಾರ ಸಮಾಜದ ಬಾಂಧವರು ಹಮ್ಮಿಕೊಂಡ ರಸ್ತೆ ಸಾರಿಗೆ ಇಲಾಖೆಯಲ್ಲಿ ಆರ್ಥಿಕ ಸಲಹೆಗಾರರಾಗಿ ಇತ್ತಿಚೆಗೆ ನಿವೃತ್ತರಾದ ಶಾಂತಪ್ಪ ಗೋಡಖಿಂಡಕಿ ಹಾಗೂ ಕೆ.ಎನ್.ಖಾನಪ್ಪನವರ ಅವರಿಗೆ ಸತ್ಕಾರ ಸಮಾರಂಭದ ಅಧ್ಯಕ್ಷತೆಯನ್ನು ವಹಿಸಿ ಅವರು ಮಾತನಾಡುತ್ತಿದ್ದರು.
ನಿಷ್ಠೆ, ಪ್ರಾಮಾಣಿಕತೆಯಿಂದ ತಮ್ಮ ಸೇವಾವಧಿಯಲ್ಲಿ ಕಾರ್ಯನಿರ್ವಹಿಸಿದರೆ ನೆಮ್ಮದಿಯ ಬದುಕಿನೊಂದಿಗೆ ನಿವೃತ್ತಿಯ ಜೀವನವು ಸುಖಮಯವಾಗಿರುತ್ತದೆ. ಕೆಲ ದಿನಗಳ ಹಿಂದೆ ನಿವೃತ್ತರಾದ ಶಾಂತಪ್ಪ ಗೋಡಖಿಂಡಕಿ ಹಾಗೂ ಕೆ.ಎನ್.ಖಾನಪ್ಪನವರ ಅವರು ಇತರರಿಗೂ ಮಾದರಿಯಾಗಿ ಕಾರ್ಯನಿರ್ವಹಿಸಿದ್ದರಿಂದಲೇ ಇಂಥ ಸಮಾರಂಭವನ್ನು ಹಮ್ಮಿಕೊಂಡು ಅಭಿನಂದಿಸಲಾಗುತ್ತಿದೆ ಎಂದ ಅವರು ಅವರ ನಿವೃತ್ತಿಯ ಜೀವನ ಸುಖಮಯವಾಗಿ ಸಾಗಲಿ ಎಂದು ಹಾರೈಸಿದರು.
ಇದೇ ಸಂದರ್ಭದಲ್ಲಿ ನಿವೃತ್ತ ಪ್ರಾಚಾರ್ಯೆ ಜಯಶ್ರೀ ಖಾನಪ್ಪನವರನ್ನು ಸತ್ಕರಿಸಲಾಯಿತು.
ಕಾರ್ಯಕ್ರಮದಲ್ಲಿ ಸಾರಿಗೆ ಸಂಚಾರಿ ಅಧಿಕಾರಿ ಕೆ.ಎಸ್.ಗುಡೇನ್ನವರ, ಉಪ್ಪಾರ ಸಮಾಜದ ಯುವ ಘಟಕದ ರಾಜ್ಯಾಧ್ಯಕ್ಷ ಭರಮಣ್ಣ ಉಪ್ಪಾರ, ಕಾರ್ಯದರ್ಶಿ ಮಲ್ಲಿಕಾರ್ಜುನ ಚೌಕಶಿ, ನಗರಸಭೆ ಸದಸ್ಯ ಭಗವಂತ ಹುಳ್ಳಿ, ನ್ಯಾಯವಾದಿ ವಿಷ್ಣು ಲಾತೂರ, ಹಿಂದುಳಿದ ವರ್ಗಗಳ ಇಲಾಖೆಯ ವಿಸ್ತ್ರರಣಾಧಿಕಾರಿ ಆರ್.ಕೆ.ಬಿಸಿರೊಟ್ಟಿ, ಭೀಮವ್ವ ಹುಳ್ಳಿ ಇದ್ದರು. ಚಂದ್ರಶೇಖರ ನಿಂಬರಗಿ ಸ್ವಾಗತಿಸಿ ವಂದಿಸಿದರು.