ಘಟಪ್ರಭಾ:ಪಾಮಲದಿನ್ನಿಯಲ್ಲಿ 5 ನೇ ವಿಶ್ವ ಯೋಗ ದಿನ ಆಚರಣೆ
ಪಾಮಲದಿನ್ನಿಯಲ್ಲಿ 5 ನೇ ವಿಶ್ವ ಯೋಗ ದಿನ ಆಚರಣೆ
ನಮ್ಮ ಬೆಳಗಾವಿ ಸುದ್ದಿ , ಘಟಪ್ರಭಾ ಜೂ 21 :
ಸಮೀಪದ ಪಾಮಲದಿನ್ನಿ ಗ್ರಾಮದಲ್ಲಿ ಸಿದ್ಧ ಸಮಾಧಿ ಯೋಗ ಸಂಸ್ಥೆ ಹಾಗೂ ಗ್ರಾಮ ಪಂಚಾಯತ ಕಾರ್ಯಾಲಯ ಪಾಮಲದಿನ್ನಿ ಇವರ ಸಂಯುಕ್ತಾಶ್ರಯದಲ್ಲಿ 5ನೇ ವಿಶ್ವ ಯೋಗ ದಿನಾಚರಣೆಯನ್ನು ಸರ್ಕಾರಿ ಪ್ರೌಢ ಶಾಲೆಯ ಶುಕ್ರವಾರ ಆವರಣದಲ್ಲಿ ಆಚರಿಸಲಾಯಿತು.
ಪೂಜ್ಯ ಶ್ರೀ ಹನುಮಂತ ಗುರೂಜಿಯವರ ನೇತೃತ್ವದಲ್ಲಿ ಜರುಗಿದ ಕಾರ್ಯಕ್ರಮದಲ್ಲಿ ನೂರಾರು ಸಂಖ್ಯೆಯಲ್ಲಿ ಗ್ರಾಮಸ್ಥರು ಭಾಗವಹಿಸಿ ವಿವಿಧ ಯೋಗಾಸನಗಳನ್ನು ಮಾಡಿದರು.