ಘಟಪ್ರಭಾ:ಪಟ್ಟಣ ಪಂಚಾಯತಿ ವ್ಯಾಪ್ತಿಯ ವಿವಿಧ ಅಭಿವೃದ್ಧಿ ಕಾಮಗಾರಿಗಳಿಗೆ ಕಾರ್ಮಿಕ ಮುಖಂಡರಾದ ಅಂಬಿರಾವ ಪಾಟೀಲ ಚಾಲನೆ
ಪಟ್ಟಣ ಪಂಚಾಯತಿ ವ್ಯಾಪ್ತಿಯ ವಿವಿಧ ಅಭಿವೃದ್ಧಿ ಕಾಮಗಾರಿಗಳಿಗೆ ಕಾರ್ಮಿಕ ಮುಖಂಡರಾದ ಅಂಬಿರಾವ ಪಾಟೀಲ ಚಾಲನೆ
ನಮ್ಮ ಬೆಳಗಾವಿ ಸುದ್ದಿ , ಘಟಪ್ರಭಾ ಜೂ 24 :
ಮಲ್ಲಾಪೂರ ಪಿ.ಜಿ ಪಟ್ಟಣ ಪಂಚಾಯತಿ ವ್ಯಾಪ್ತಿಯ ವಿವಿಧ ಅಭಿವೃದ್ಧಿ ಕಾಮಗಾರಿಗಳಿಗೆ ಕಾರ್ಮಿಕ ಮುಖಂಡರಾದ ಅಂಬಿರಾವ ಪಾಟೀಲ ಸೋಮವಾರ ಚಾಲನೆ ನೀಡಿದರು.
ಸನ್ 2018-19 ನೇ ಸಾಲಿನ ಎಸ್.ಸಿ.ಪಿ/ಟಿ.ಎಸ್.ಪಿ ಯೋಜನೆ ಅಡಿಯಲ್ಲಿ 5 ಕೋಟಿ 78 ಲಕ್ಷ ರೂ.ಗಳ ವೆಚ್ಚದಲ್ಲಿ ವಾಲ್ಮೀಕಿ ಹಾಗೂ ಸುಡುಗಾಡ ಸಿದ್ಧ ಸಮಾಜಕ್ಕೆ ಸಮುದಾಯ ಭವನ, ರಸ್ತೆ ಡಾಂಬರಿಕರಣ, ಫುಟಪಾತ, ಸೇರಿದಂತೆ ವಿವಿಧ ಕಾಮಗಾರಿಗಳಿಗೆ ಚಾಲನೆ ನೀಡಲಾಯಿತು.
ಈ ಸಂದರ್ಭದಲ್ಲಿ ಪ್ರಾಸ್ತಾವಿಕವಾಗಿ ಮಾತನಾಡಿದ ಪ.ಪಂ ಮುಖ್ಯಾಧಿಕಾರಿ, ಕೆ.ಬಿ.ಪಾಟೀಲ ಸನ್ 2016 ರಿಂದ 2019-20 ಸಾಲಿನವರೆಗೆ ಶಾಸಕರಾದ ರಮೇಶ ಜಾರಕಿಹೊಳಿ ಅವರ ಪ್ರಯತ್ನದಿಂದ ಸುಮಾರು 20 ಕೋಟಿಗಳ ಅನುದಾನ ಮಲ್ಲಾಪೂರ ಪಿ.ಜಿ ಪಟ್ಟಣ ಪಂಚಾಯತಿಗೆ ಬಂದಿದೆ. ಮುಂದಿನ ದಿನಗಳಲ್ಲಿ ಹೆಚ್ಚಿನ ಅನುದಾನವನ್ನು ತಂದು ಅಭಿವೃದ್ಧಿ ಕೆಲಸಗಳಿಗೆ ಹೆಚ್ಚಿನ ಒತ್ತು ನೀಡಲಾಗುವದು ಎಂದು ಹೇಳಿದರು.
ಇದೇ ಸಂದರ್ಭದಲ್ಲಿ ಎಸ್.ಎಫ್.ಸಿ ಯೋಜನೆ ಅಡಿಯಲ್ಲಿ ದಿವ್ಯಾಂಗರಿಗೆ ಮೂರು ದ್ವೀಚಕ್ರ ವಾಹನಗಳು, ಮಹಿಳೆಯರಿಗೆ ಹೊಲಿಗೆ ಯಂತ್ರ ಹಾಗೂ ಗ್ಯಾಸ್ ವಿತರಿಸಲಾಯಿತು.
ಪಟ್ಟಣದ ದನಗಳ ಪೇಟೆಯಲ್ಲಿ ಹಾಗೂ ಜನತಾ ಪ್ಲಾಟ್‍ದಲ್ಲಿ ನಿರ್ಮಿಸಲಾದ ಅಂಬೇಡ್ಕರ ಭವನಗಳು, ಕಾಯಿಪಲ್ಲೆ ಮಾರುಕಟ್ಟೆಯಲ್ಲಿ ಹಾಕಲಾದ ಹೈಮಾಸ್ಟ್ ಲೈಟ್‍ಗಳು, ಪ.ಪಂ ವಾಹನ ನಿಲುಗಡೆಗೆ ನಿರ್ಮಿಸಲಾದ ಬೃಹತ ಶೇಡ್, ಮಧುಕರ ದೇಶಪಾಂಡೆ (ಇನಾಮದಾರ) ಸರ್ಕಾರಿ ಪ್ರೌಡ ಶಾಲೆಯಲ್ಲಿ ನಿರ್ಮಿಸಲಾದ ಮೂರು ಶಾಲಾ ಕೊಠಡಿಗಳನ್ನು ಉದ್ಘಾಟಿಸಲಾಯಿತು.
ಈ ಸಂದರ್ಭದಲ್ಲಿ ಜಿ.ಪಂ ಸದಸ್ಯ ತುಕಾರಾಮ ಕಾಗಲ, ಹಿರಿಯರಾದ ಡಿ.ಎಂ.ದಳವಾಯಿ, ಸುಭಾಸ ಹುಕ್ಕೇರಿ, ಮಡಿವಾಳಪ್ಪಾ ಮುಚಳಂಬಿ, ಸುಲ್ತಾನಸಾಬ ಕಬ್ಬೂರ, ರಮೇಶ ತುಕ್ಕಾನಟ್ಟಿ, ನೂರ ಪೀರಜಾದೆ, ಸುಧೀರ ಜೋಡಟ್ಟಿ, ಈಶ್ವರ ಮಟಗಾರ, ಪ.ಪಂ ಮುಖ್ಯಾಧಿಕಾರಿ, ಕೆ.ಬಿ.ಪಾಟೀಲ, ಹಾಗೂ ಪ.ಪಂ ಸರ್ವ ಸದಸ್ಯರು ಹಾಗೂ ಸಿಬ್ಬಂದಿ ವರ್ಗ ಇದ್ದರು.