RNI NO. KARKAN/2006/27779|Monday, December 23, 2024
You are here: Home » breaking news » ಗೋಕಾಕ:ಮೂಡಲಗಿ ತಾಲೂಕು ರಾಜ್ಯ ಸರ್ಕಾರಿ ನೌಕರರ ಸಂಘದ ಅಧ್ಯಕ್ಷರಾಗಿ ಹಂಜ್ಯಾಗೋಳ ಆಯ್ಕೆ

ಗೋಕಾಕ:ಮೂಡಲಗಿ ತಾಲೂಕು ರಾಜ್ಯ ಸರ್ಕಾರಿ ನೌಕರರ ಸಂಘದ ಅಧ್ಯಕ್ಷರಾಗಿ ಹಂಜ್ಯಾಗೋಳ ಆಯ್ಕೆ 

ಮೂಡಲಗಿ ತಾಲೂಕು ರಾಜ್ಯ ಸರ್ಕಾರಿ ನೌಕರರ ಸಂಘದ ಅಧ್ಯಕ್ಷರಾಗಿ ಹಂಜ್ಯಾಗೋಳ ಆಯ್ಕೆ

 

 

ನಮ್ಮ ಬೆಳಗಾವಿ ಸುದ್ದಿ , ಗೋಕಾಕ ಜೂ 26 :

 

 

ರಾಜ್ಯ ಸರ್ಕಾರಿ ನೌಕರರ ಸಂಘದ ಮೂಡಲಗಿ ತಾಲೂಕಾ ಘಟಕದ ನೂತನ ಅಧ್ಯಕ್ಷರಾಗಿ ಆರೋಗ್ಯ ಇಲಾಖೆಯ ಆನಂದ ಹಂಜ್ಯಾಗೋಳ ಅವರು ಅವಿರೋಧವಾಗಿ ಆಯ್ಕೆಯಾಗಿದ್ದಾರೆ.
ಉಳಿದಂತೆ ರಾಜ್ಯ ಪರಿಷತ್ ಸದಸ್ಯರಾಗಿ ಶಿಕ್ಷಣ ಇಲಾಖೆಯ ಆರ್.ಎಂ. ಮಹಾಲಿಂಗಪೂರ ಹಾಗೂ ಖಜಾಂಚಿಯಾಗಿ ಹೊನಕುಪ್ಪಿ ಸರ್ಕಾರಿ ಪ್ರೌಢ ಶಾಲೆಯ ಶಿಕ್ಷಕ ಅವ್ವಣ್ಣಾ ಮೋಡ್ಯಾರ ಅವರು ಆಯ್ಕೆಯಾಗಿದ್ದಾರೆ.
ಸಮಸ್ಯೆಗಳಿಗೆ ಸ್ಪಂದಿಸಿ : ನಿಮ್ಮ ವ್ಯಾಪ್ತಿಯಲ್ಲಿಯ ಇಲಾಖೆಗಳ ನೌಕರರನ್ನು ಒಟ್ಟುಗೂಡಿಸಿ ನೌಕರರ ಸಮಸ್ಯೆಗಳಿಗೆ ಸ್ಪಂದಿಸುವ ಕೆಲಸ ಸರ್ಕಾರಿ ನೌಕರರ ಸಂಘದ ಪದಾಧಿಕಾರಿಗಳು ಮಾಡುವಂತೆ ಶಾಸಕ ಬಾಲಚಂದ್ರ ಜಾರಕಿಹೊಳಿ ಅವರು ಸಲಹೆ ಮಾಡಿದರು.
ಮೂಡಲಗಿ ತಾಲೂಕು ಘಟಕದ ಹೊಸ ಪದಾಧಿಕಾರಿಗಳನ್ನು ಅಭಿನಂದಿಸಿ ಮಾತನಾಡಿದ ಅವರು, ಇಲಾಖೆಗಳಲ್ಲಿನ ಸಣ್ಣಪುಟ್ಟ ಸಮಸ್ಯೆಗಳನ್ನು ತಾವೇ ಪರಿಹರಿಸಬೇಕು. ಸಂಘವನ್ನು ಸದೃಢಗೊಳಿಸುವಲ್ಲಿ ಶ್ರಮಿಸಬೇಕು. ನಾಗರೀಕ ನೆಲೆಗಟ್ಟಿನ ಮೇಲೆ ತಮ್ಮ ಇಲಾಖೆಯ ವೃತ್ತಿ ಜೊತೆಗೆ ಸಾಮಾಜಿಕವಾಗಿ ನಾಗರೀಕ ಸಮಸ್ಯೆಗಳಿಗೆ ಪರಿಹಾರ ಕಂಡುಕೊಳ್ಳಬೇಕು. ನಿಮ್ಮ ಸಮಸ್ಯೆಗಳಿಗೆ ಪ್ರಾಮಾಣಿಕವಾಗಿ ಶ್ರಮಿಸುತ್ತೇನೆಂದು ಬಾಲಚಂದ್ರ ಜಾರಕಿಹೊಳಿ ಅವರು ಹೊಸ ಪದಾಧಿಕಾರಿಗಳಿಗೆ ಅಭಯ ಹಸ್ತ ನೀಡಿದರು.
ಈ ಸಂದರ್ಭದಲ್ಲಿ ಜಿಪಂ ಶಿಕ್ಷಣ ಮತ್ತು ಆರೋಗ್ಯ ಸ್ಥಾಯಿ ಸಮೀತಿ ಮಾಜಿ ಅಧ್ಯಕ್ಷ ಡಾ.ರಾಜೇಂದ್ರ ಸಣ್ಣಕ್ಕಿ, ಹಿಡಕಲ್ ಡ್ಯಾಂ ಘಯೋಮನೀಬ ಮಹಾಮಂಡಳ ಅಧ್ಯಕ್ಷ ಅಶೋಕ ಖಂಡ್ರಟ್ಟಿ, ರಾಜ್ಯ ಪ್ರಾಥಮಿಕ ಶಾಲಾ ಶಿಕ್ಷಕರ ಸಂಘದ ಕೋಶಾಧ್ಯಕ್ಷ ಎಸ್.ಡಿ. ಗಂಗನ್ನವರ, ತಾಪಂ ಸದಸ್ಯ ಲಕ್ಷ್ಮಣ ಮಸಗುಪ್ಪಿ, ದುರದುಂಡಿ ಗ್ರಾಪಂ ಅಧ್ಯಕ್ಷ ಭೀಮಶಿ ಹುಕ್ಕೇರಿ, ಜಿಲ್ಲಾ ಪ್ರಾಥಮಿಕ ಶಾಲಾ ಶಿಕ್ಷಕರ ಸಂಘದ ಪ್ರಧಾನ ಕಾರ್ಯದರ್ಶಿ ಎಸ್.ಎಂ. ಲೋಕನ್ನವರ, ಮಾಜಿ ಅಧ್ಯಕ್ಷ ಮಾಲತೇಶ ಸಣ್ಣಕ್ಕಿ, ನೌಕರರ ಸಂಘದ ಸದಸ್ಯರಾದ ಎಸ್.ಎಸ್. ಬಿರಾದಾರ, ಕಸ್ತೂರಿ ಪಡೆನ್ನವರ, ಎಲ್.ಎಚ್. ಭೋವಿ, ಗೋಪಾಲ ಮುತ್ತೆಪ್ಪಗೋಳ, ಚನ್ನಬಸಪ್ಪ ನಾವಿ, ಡಾ.ರವಿಕುಮಾರ ಹುಕ್ಕೇರಿ, ಶ್ರೀಶೈಲ ಜಾಗನೂರ, ರಾಮಚಂದ್ರ ಸಣ್ಣಕ್ಕಿ, ಶಿವಲಿಂಗಪ್ಪ ಬಿ.ಪಾಟೀಲ, ಆರ್.ಟಿ.ಸೋನವಾಲ್ಕರ, ಯಲ್ಲಪ್ಪ ಶೇಖರಗೋಳ, ಸದಾಶಿವ ಸವದತ್ತಿ, ವಿಠ್ಠಲ ಹುಲ್ಲಾರ, ಕಲ್ಲಪ್ಪ ಅಜ್ಜಪ್ಪನವರ, ಶಿವನಗೌಡ ಪಾಟೀಲ, ಶಾನೂರ ನದಾಫ, ಭಾಸ್ಕರ ಹಲಗಿ, ಅನೀಲ ಮಾಂಗಳೇಕರ, ರಂಗಪ್ಪ ಗುಜನಟ್ಟಿ, ಸುರೇಶ ಧೂಳಪ್ಪ, ಸಿದ್ದನಗೌಡ ಪಾಟೀಲ, ಅವರು ಈ ಸಂದರ್ಭದಲ್ಲಿ ಉಪಸ್ಥಿತರಿದ್ದರು.

ಬಿಇಓ ಅಭಿನಂದನೆ : ನೂತನವಾಗಿ ಮೂಡಲಗಿ ತಾಲೂಕು ಘಟಕದ ರಾಜ್ಯ ಸರ್ಕಾರಿ ನೌಕರರ ಸಂಘಕ್ಕೆ ಹೊಸದಾಗಿ ಆಯ್ಕೆಯಾದ ಪದಾಧಿಕಾರಿಗಳನ್ನು ಅಭಿನಂದಿಸಿರುವ ಮೂಡಲಗಿ ಬಿಇಓ ಅಜೀತ ಮನ್ನಿಕೇರಿ ಅವರು, ನೌಕರರ ಒಳತಿಗಾಗಿ ಎಲ್ಲ ರೀತಿಯ ಸಹಕಾರ ನೀಡಲಾಗುವುದು. ಸರ್ಕಾರಿ ನೌಕರರ ಒಳತಿಗಾಗಿ ಸಂಘವು ಕ್ರಿಯಾತ್ಮಕ ಚಟುವಟಿಕೆಗಳಲ್ಲಿ ತೊಡಗುವಂತೆ ಸಂಘದ ನೂತನ ಅಧ್ಯಕ್ಷರಿಗೆ ಸಲಹೆ ಮಾಡಿದರು.

Related posts: