ಗೋಕಾಕ:ಸಮ್ಮೇಳನಕ್ಕೆ ಮಳೆರಾಯನ ಅಡ್ಡಿ : ಒಳಾಂಗದಲ್ಲಿ ಸ್ಥಳಾಂತರಗೊಂಡ ಗೋಷ್ಠಿಗಳು
ಸಮ್ಮೇಳನಕ್ಕೆ ಮಳೆರಾಯನ ಅಡ್ಡಿ : ಒಳಾಂಗದಲ್ಲಿ ಸ್ಥಳಾಂತರಗೊಂಡ ಗೋಷ್ಠಿಗಳು
ನಮ್ಮ ಬೆಳಗಾವಿ ಸುದ್ದಿ , ಗೋಕಾಕ ಜೂ 28 :
ಇಲ್ಲಿಯ ಕೆಎಲ್ಇ ಆಂಗ್ಲ ಮಾಧ್ಯಮ ಶಾಲಾ ಆವರಣದಲ್ಲಿ ಜರುಗುತ್ತಿರುವ 13ನೇ ಜಿಲ್ಲಾ ಕನ್ನಡ ಸಾಹಿತ್ಯ ಸಮ್ಮೇಳನಕ್ಕೆ ಮಳೆರಾಯ ಅಡ್ಡಿ ಪಡೆಸಿದ ಘಟನೆ ಜರುಗಿದೆ
ಮುಂಜಾನೆ ವೈಭವಯೂತವಾಗಿ ಚಾಲನೆ ದೊರೆತ ನಂತರ ಸರಾಗವಾಗಿ ಜರುಗುತ್ತಿರುವ ಸಮ್ಮೇಳನದಲ್ಲಿ ಸಾರ್ವಾಧ್ಯಕ್ಷೆ ಡಾ.ಗುರುದೇವಿ ಹುಲೆಪ್ಪನವರಮಠ ಭಾಷಣ ಮಾಡುವ ಸಂದರ್ಭದಲ್ಲಿ ಭಾರಿ ಪ್ರಮಾಣದಲ್ಲಿ ಸುರಿಯಲಾರಂಭಿಸಿದ್ದ ಮಳೆಯ ಪರಿಣಾಮ ಸಮ್ಮೇಳನದ ಸಂಘಟಕರು ಮೊದಲದಿನದ ಗೋಷ್ಠಿಗಳನ್ನು ತಾತ್ಕಾಲಿಕವಾಗಿ ಕೆಎಲ್ಇ ಶಾಲೆಯ ಆವರಣದ ಒಳಾಂಗದಲ್ಲಿ ಸ್ಥಳಾಂತರಿಸಿದರು.
ಸಮ್ಮೇಳನದಲ್ಲಿ ನಿರ್ಮಿಸಲಾದ ಮಳಿಗೆಗಳಲ್ಲಿ ಪುಸ್ತಕ , ಬಟ್ಟೆಗಳ ಮಾರಾಟಗಾರರು , ವ್ಯಾಪಾರಸ್ಥರು ಎರೆಡು ಘಂಟೆಗೂ ಹೆಚ್ಚುಕಾದ ಸುರಿದ ಮಳೆಯ ಪರಿಣಾಮ ಪರಿದಾಡುವ ಪರಿಸ್ಥಿತಿ ನಿರ್ಮಾಣವಾಯಿತು