ಗೋಕಾಕ:ಕವಿಯಾಗಲು ಸತತ ಅಧ್ಯನ ಮಾಡವುದು ಅವಶ್ಯವಾಗಿದೆ : ಸಾಹಿತಿ ಮಹಾಲಿಂಗ ಮಂಗಿ ಸಲಹೆ
ಕವಿಯಾಗಲು ಸತತ ಅಧ್ಯನ ಮಾಡವುದು ಅವಶ್ಯವಾಗಿದೆ : ಸಾಹಿತಿ ಮಹಾಲಿಂಗ ಮಂಗಿ ಸಲಹೆ
ನಮ್ಮ ಬೆಳಗಾವಿ ಸುದ್ದಿ , ಗೋಕಾಕ ಜೂ 29 :
ಬಸವರಾಜ ಕಟ್ಟೀಮನಿ ವೇದಿಕೆ : ಇಲ್ಲಿಯ ಕೆಎಲ್ಇ ಆಂಗ್ಲ ಮಾಧ್ಯಮ ಶಾಲೆಯ ಒಳಾಂಗದಲ್ಲಿ ಜರುಗಿತ್ತಿರುವ ಬೆಳಗಾವಿ ಜಿಲ್ಲಾ ಕನ್ನಡ ಸಾಹಿತ್ಯ ಸಮ್ಮೇಳನದ ಎರಡನೆಯ ದಿನವಾದ ಶನಿವಾರದಂದು ಮೊದಲನೆಯ ಗೋಷ್ಠಿಯಲ್ಲಿ ಜಿಲ್ಲೆಯ 40 ಕ್ಕೂ ಹೆಚ್ಚು ಕವಿಗಳು ಭಾಗವಹಿಸಿ ತಾವು ರಚಿಸದ ಕವನಗಳನ್ನು ವಾಚಿಸಿ ಸಾಹಿತ್ಯಾಸಕ್ತರ ಮೆಚ್ಚುಗೆಗೆ ಪಾತ್ರರಾದರು.
ಸಮ್ಮೇಳನದ ಅಧ್ಯಕ್ಷತೆಯನ್ನು ವಹಿಸಿ ಮಾತನಾಡಿದ ಸ್ಥಳೀಯ ಸಾಹಿತಿ ಮಹಾಲಿಂಗ ಮಂಗಿ ಲೇಖಕರಾಗೋದು ಸುಲಭ. ಆದರೆ ಕವಿಯಾಗಲು ಸತತ ಅಧ್ಯನ ಮಾಡವುದು ಅವಶ್ಯವಾಗಿದೆ.ಮಾತು ಮಂತ್ರವಾದಾಗ ಮಾತ್ರ ಕಾವ್ಯವಾಗುತ್ತದೆ. ಗೋಕಾಕ ಸಾಂಸ್ಕೃತಿಕ ಕೇಂದ್ರವಾಗಿದ್ದು ಕನ್ನಡಕ್ಕೆ ಇಲ್ಲಿಯ ಸಾಹಿತಿಗಳ ಕೊಡುಗೆ ಅಪಾರವಾಗಿದೆ. . ಕವಿತೆ ಜಟಿಲವಾಗಿದ್ದು, ಭಿನ್ನ ವಿಭಿನ್ನವಾಗಿ ಆಲೋಚಿಸಿ ಕವನ ರಚಿಸಬೇಕು ಎಂದು ಮಹಾಲಿಂಗ ಮಂಗಿ ಸಲಹೆ ನೀಡಿದರು.
ಈಶ್ವರ ಮಮದಾಪುರ , ರಾಯಪ್ಪ ಗುದಗನವರ , ಶ್ರೀಮತಿ ರಾಜೇಶ್ವರಿ ಒಡೆಯರ , ರವಿ ಉಳ್ಳಾಗಡ್ಡಿ, ವಿಶ್ಯಾಲಕ್ಷಿ ತೀರ್ಥ, ವಿಜಯಲಕ್ಷ್ಮಿ ಮಿರ್ಜಿ, ಶ್ರೀಕಾಂತ ರಾಯಮನೆ ಸೇರಿದಂತೆ ಅನೇಕರು ಕವಿತೆ ವಾಚಿಸಿದರು.
ಬೈಲಹೊಂಗಲಕಸಾಪ ಅಧ್ಯಕ್ಷೆ ಗೌರಾದೇವಿ ತಾಳಿಕೋಟಿಮಠ ಸ್ವಾಗತಿಸಿದರು, ವಿದ್ಯಾವತಿಜನವಾಡ ನಿರೂಪಿಸಿದರು.