ಗೋಕಾಕ:ಕನ್ನಡಾಭಿಮಾನಿಗಳಲ್ಲಿ ಬೇಸರ : ಸರ್ವಾಧ್ಯಕ್ಷರ ಅನುಪಸ್ಥಿತಿಯಲ್ಲಿ ನಡೆದ ಗೋಷ್ಠಿಗಳು
ಕನ್ನಡಾಭಿಮಾನಿಗಳಲ್ಲಿ ಬೇಸರ : ಸರ್ವಾಧ್ಯಕ್ಷರ ಅನುಪಸ್ಥಿತಿಯಲ್ಲಿ ನಡೆದ ಗೋಷ್ಠಿಗಳು
ನಮ್ಮ ಬೆಳಗಾವಿ ಸುದ್ದಿ , ಗೋಕಾಕ ಜೂ 29 :
ಇಲ್ಲಿಯ ಕೆಎಲ್ಇ ಆಂಗ್ಲ ಮಾಧ್ಯಮ ಶಾಲೆಯಲ್ಲಿ ಜರುಗುತ್ತಿರು 13ನೇ ಜಿಲ್ಲಾ ಕನ್ನಡ ಸಾಹಿತ್ಯ ಸಮ್ಮೇಳನದ ಎರಡನೆಯ ಹಾಗೂ ಕೊನೆಯ ದಿನವಾದ ಇಂದು ಸಮ್ಮೇಳನದ ಸರ್ವಾಧ್ಯಕ್ಷರಿಲ್ಲದೆ ಎಲ್ಲ ಗೋಷ್ಠಿಗಳು ನಡೆದಿದ್ದು , ಕನ್ನಢಾಭಿಮಾನಿಗಲ್ಲಿ ನಿರಾಸೆ ಮೂಡಿಸಿತು .
ಸಮ್ಮೇಳನದಲ್ಲಿ ಜರಗುವ ಸಕಲ ಗೋಷ್ಠಿಯಲ್ಲಿಗಳಲ್ಲಿ ಸರ್ವಾಧ್ಯಕ್ಷರು ಉಪಸ್ಥಿತರಿರುವದು ವಾಡಿಕೆ ಮತ್ತು ಪರಿಷತ್ ಈ ಕಾರ್ಯವನ್ನು ಕಳೆದ ಹಲವಾರು ವರ್ಷಗಳಿಂದ ಮಾಡಿಕೊಂಡು ಬಂದಿದೆ ಆದರೆ ನಗರದಲ್ಲಿ ನಡೆಯುತ್ತಿರು ಸಮ್ಮೇಳನದಲ್ಲಿ ಸಂಘಟಕರ ಸರ್ವಾಧಿಕಾರಿ ತನದಿಂದ ಇಂದು ನಡೆದ ಕವಿಗೋಷ್ಠಿ ,ವೈಚಾರಿಕ ಗೋಷ್ಠಿ , ಸಾಹಿತ್ಯ ಕುರಿತ ಗೋಷ್ಠಿ , ಸಾಧಕರ ಸನ್ಮಾನ ಕಾರ್ಯಕ್ರಮ ಸರ್ವಾಧ್ಯಕ್ಷೆ ಡಾ.ಗುರುದೇವಿ ಹುಲೆಪ್ಪನವರಮಠ ಇಲ್ಲದೆ ನಡೆದಿದ್ದು ಪರಿಷತ್ತಿನ ವಾಡಿಕೆಯನ್ನು ಮುರಿದಿದ್ದು ಕನ್ನಢಾಭಿಮಾನಿಗಳಲ್ಲಿ ನಿರಾಶಯನ್ನು ಮೂಡಿಸಿತು
ಒಟ್ಟರೆಯಾಗಿ ಸಮ್ಮೇಳನದ ಸಂಘಟಕರು ಸಮ್ಮೇಳದ ಪೂರ್ವ ತಯಾರಿ ಯಿಂದ ಇಲ್ಲಿಯ ವರೆಗೆ ಒಂದಿಲೊಂದು ಎಡವಟ್ಟುಗಳನ್ನು ವೆಸಗಿ ಸಮ್ಮೇಳನದ ದ್ಯೇಯಗಳನ್ನು ಗಾಳಿಗೆ ತೂರಿದ್ದಾರೆ