RNI NO. KARKAN/2006/27779|Friday, November 22, 2024
You are here: Home » breaking news » ಗೋಕಾಕ:ಸಮ್ಮೇಳನದ ನಿರ್ಣಯಗಳನ್ನು ಸರಕಾರ ಅನುಷ್ಠಾನಗೊಳಿಸಬೇಕು : ವಿಧಾನ ಪರಿಷತ್ ಸದಸ್ಯೆ ತಾರಾ ಅಭಿಮತ

ಗೋಕಾಕ:ಸಮ್ಮೇಳನದ ನಿರ್ಣಯಗಳನ್ನು ಸರಕಾರ ಅನುಷ್ಠಾನಗೊಳಿಸಬೇಕು : ವಿಧಾನ ಪರಿಷತ್ ಸದಸ್ಯೆ ತಾರಾ ಅಭಿಮತ 

ಸಮ್ಮೇಳನದ ನಿರ್ಣಯಗಳನ್ನು ಸರಕಾರ ಅನುಷ್ಠಾನಗೊಳಿಸಬೇಕು : ವಿಧಾನ ಪರಿಷತ್ ಸದಸ್ಯೆ ತಾರಾ ಅಭಿಮತ

 
ನಮ್ಮ ಬೆಳಗಾವಿ ಸುದ್ದಿ , ಗೋಕಾಕ ಜೂ 29 :

 

ಸಾಹಿತ್ಯ ಸಮ್ಮೇಳನಗಳಲ್ಲಿ ತಗೆದುಕೊಂಡು ನಿರ್ಣಯಗಳನ್ನು ಸರಕಾರ ಅನುಷ್ಠಾನಗೊಳಿಸುವ ಕಾರ್ಯವಾಗಬೇಕು ಆ ದಿಸೆಯಲ್ಲಿ ಕನ್ನಡ ಸಾಹಿತ್ಯ ಪರಿಷತ್ತಿನ ಘಟಕಗಳು ಕಾರ್ಯ ಪ್ರವೃತ ಆಗಬೇಕೆಂದು ಎಂದು ನಟಿ, ವಿಧಾನ ಪರಿಷತ್ ಸದಸ್ಯೆ ತಾರಾ ಹೇಳಿದರು.

ನಗರದ ಕೆಎಲ್‍ಇ ಆಂಗ್ಲ ಮಾಧ್ಯಮ ಶಾಲೆಯ ಆವರಣದ ಒಳಾಂಗದಲ್ಲಿ ಜರುಗಿದ ಬೆಳಗಾವಿ ಜಿಲ್ಲಾ 13ನೆಯ ಕನ್ನಡ ಸಾಹಿತ್ಯ ಸಮ್ಮೇಳನದ ಸಮಾರೋಪ ಸಮಾರಂಭದಲ್ಲಿ ಭಾಗವಹಿಸಿ ಅವರು ಮಾತನಾಡಿದರು.

ನಡೆದು ಹೋದ ಸಾಹಿತ್ಯ ಸಮ್ಮೇಳನದಲ್ಲಿ ತೆಗೆದುಕೊಂಡ ನಿರ್ಣಯಗಳು ಬರುವ ಸಾಹಿತ್ಯ ಸಮ್ಮೇಳನದ ಒಳಗೆ ಅನುಷ್ಠಾನಗೋಳುವಂತೆ ಸರಕಾರದ ಮೇಲೆ ಒತ್ತಡ ತರಬೇಕು ಆಗ ಮಾತ್ರ ಸಮ್ಮೇಳನಗಳಲ್ಲಿ ತೆಗೆದುಕೊಂಡ ನಿರ್ಣಯಗಳಿಗೆ ಮಹತ್ವ ಬರಲು ಸಾಧ್ಯ .

ಚಂದ್ರಶೇಖರ ಕಂಬಾರಂತಹ ಮಹಾನ ಸಾಹಿತಿಗಳು ಹುಟ್ಟಿ ಬೆಳೆದ ನಾಡು ಗೋಕಾವಿ ಸಾಮರಸ್ಯವನ್ನು ಎತ್ತಿಹಿಡಿಯುತ್ತಿದೆ ಇದನ್ನು ಮುಂದುವರೆಸಿಕೊಂಡು ಹೋಗಲು ಕನ್ನಡ ಸಾಹಿತ್ಯ ಸಮ್ಮೇಳನದಂತಹ ಕಾರ್ಯಕ್ರಮಗಳು ನಿರಂತರವಾಗಿ ಜರುಗಬೇಕಾಗಿದೆ ಎಂದು ವಿ.ಪ ಸದಸ್ಯೆ ತಾರಾ ಹೇಳಿದರು .

ಸಮಾರೋಪ ಸಮಾರಂಭದ ಸಾನಿಧ್ಯ ವಹಿಸಿದ ಅಭಿನವ ಶಿವಾನಂದ ಸ್ವಾಮಿಗಳು ಆರ್ಶಿವಚನ ನೀಡಿದರು.
ವೇದಿಕೆಯಲ್ಲಿ ಸಮ್ಮೇಳನಾಧ್ಯಕ್ಷರಾದ ಡಾ.ಗುರುದೇವಿ ಹುಲೆಪ್ಪನವರಮಠ , ದೂರದರ್ಶನ ಕೇಂದ್ರದ ಸಹನಿರ್ದೇಶಕರಾದ ಡಾ. ನಿರ್ಮಲಾ ಎಲಿಗಾರ , ಡಾ.ರಾಜೇಂದ್ರ ಸಣ್ಣಕ್ಕಿ , ಬಸಗೌಡಾ ಪಾಟೀಲ , ರಾಮಣ್ಣ ಹುಕ್ಕೇರಿ , ಸಿದ್ದಲಿಂಗ ದಳವಾಯಿ , ಉಪಸ್ಥಿತರಿದ್ದರು

ಕಾರ್ಯಕ್ರಮವನ್ನು ಆರ್.ಎಲ್.ಮಿರ್ಜಿ , ಪ್ರೊ.ಮಹಾನಂದಾ ಪಾಟೀಲ ಜಂಟಿಯಾಗಿ ನಿರೂಪಿಸಿದರು

ಸಮ್ಮೇಳದಲ್ಲಿ ತೆಗೆದುಕೊಂಡು ನಿರ್ಣಯಗಳು :

ಎರೆಡು ದಿನಗಳ ಕಾಲ ಜರುಗಿದ ಬೆಳಗಾವಿ ಜಿಲ್ಲಾ 13 ನೇ ಸಾಹಿತ್ಯ ಸಮ್ಮೇಳನದಲ್ಲಿ ಸಮಾರೋಪ ಸಮಾರಂಭದಲ್ಲಿ 7 ಪ್ರಮುಖ ನಿರ್ಣಯಗಳನ್ನು ತೆಗೆದುಕೊಳ್ಳಲಾಯಿತು .
ನಿರ್ಣಯ 1 : ರಾಜ್ಯ ಸರಕಾರದ ಎಲ್ಲ ಮಹತ್ವದ ಇಲಾಖೆ , ಕಛೇರಿ ಮತ್ತು ಸಿಬ್ಬದಿಯನ್ನು ಸುವರ್ಣಸೌಧಕ್ಕೆ ವರ್ಗಾಯಿಸುವ ಮೂಲಕ ಶಕ್ತಿಕೇಂದ್ರವಾಗಿ ರೂಪಿಸುವ ಮುಖ್ಯ ಕೆಲಸ ಆಗಬೇಕು.
2) ಉತ್ತರ ಕರ್ನಾಟಕ ಮತ್ತು ದಕ್ಷಣ ಕರ್ನಾಟಕ ಅಭಿವೃದ್ಧಿ ವಿಚಾರದಲ್ಲಿ ಮಲತಾಯಿಧೋರಣೆ , ತಾರತಮ್ಯ ಸರಿಪಡಿಸಿ ರಾಜ್ಯ ವಿಭಜನೆಯಾಗದಂತೆ ನೋಡಿಕೊಳ್ಳಲು ಆಗ್ರಹ
3) ಮಾತೃಭಾಷೆ ಕನ್ನಡ ಶಿಕ್ಷಣ ಮಾಧ್ಯಮ ಕುರಿತು ಪ್ರಸ್ತುತ ರಾಜ್ಯ ಸರಕಾರ ಸರಕಾರಿ ಶಾಲೆಗಳಲ್ಲಿ ಇಂಗ್ಲಿಷ್ ಮಾಧ್ಯಮ ತಂದು ಕನ್ನಡದ ಕತ್ತು ಹಿಸುಕುವ ಕಾರ್ಯಕ್ಕೆ ಮುಂದಾಗಿದೆ . ಕನ್ನಡ ಭಾಷೆಯನ್ನು ಅನ್ನದ ಭಾಷೆಯಾಗಿ ಉಳಿಸಿ ಬೆಳೆಸಬೇಕು
4) ಜಲಸಂರಕ್ಷಣೆ , ಪೋಷಣೆಯಾಗಬೇಕು ಗಿಡಮರ ಕಾಡುನೋಶ ಪರಿಸರ ವಿನಾಶ ತಡೆಯಬೇಕು
5) ಬೆಳಗಾವಿ ಜಿಲ್ಲೆ , ತಾಲೂಕುಗಳಲ್ಲಿ ಸರಕಾರಾ ಶಾಲೆಗಳ ಶಾಥಿಲ ಸೂರು ಕಟ್ಟಡಗಳಿವೆ ಸರಕಾರ ಎಚ್ಚೆತ್ತು ಸೂಕ್ತ ಅನುದಾನ ಮಾರ್ಗೋಪಾಯ ಕೈಕೊಳ್ಳುವ ಕಾರ್ಯ ತುರ್ತ ಆಗಬೇಕು
6) ಗೋಕಾವಿ ಬೆಳಗಾವಿ ಪರಿಸರ ಪ್ರಾಕೃತಿಕವಾಗಿ ಐತಿಹಾಸಿಕವಾಗಿ ಬಹಳಷ್ಟು ಸ್ಥಾನ ಹೊಂದಿದೆ ಈ ಎಲಿ ಸ್ಥಾನಗಳು ಪ್ರವಾಸಿತಾಣವಾಗಿ ಅಭಿವೃದ್ಧಿ ಹೊಂದಬೇಕು ಮುಖ್ಯವಾಗಿ ರಸ್ತೆಸಾರಿಗೆ ಹಾಗೂ ರೈಲುಮಾರ್ಗದ ಹೊಸ ರೈಲು ಯೋಜನೆ ಬೇಡಿಕೆ ಈಡೇರಬೇಕು
7) ವಿಜ್ಞಾನ ,ತಂತ್ರಜ್ಞಾನ ,ವೈದ್ಯಕೀಯ ಉನ್ನತ ಶಿಕ್ಷಣಕ್ಕೆ ಸಂಬಂಧಿಸಿದಂತೆ ಪಾಠ – ಪಠ್ಯಗಳು ಕನ್ನಡದಲ್ಲೇ ಭಾಷಾಂತರಗೊಂಡು ಸಿಗುವಂತಾಗಬೇಕು , ಸರಕಾರ ಆಡಳಿತ ಮಟ್ಟದಲ್ಲೂ ಕನ್ನಡ ಅನುಷ್ಠಾನ ಪೂರ್ಣಗೊಳ್ಳುವದು ಅನಿವಾರ್ಯವಾಗಿದೆ. ಅನ್ನದಾತರ ಶ್ರೇಯೋಭಿವೃದ್ಧಿಗೆ ಸರಕಾರ ಕಟ್ಟಿಬದ್ಧವಾಗಿ ತನ್ನ ಇಚ್ಚಾಶಕ್ತಿ ಪ್ರದರ್ಶಿಸಬೇಕಾಗಿದೆ ಎಂಬ ನಿರ್ಣಯಗಳನ್ನು ಸಮ್ಮೇಳನದ ಸಮಾರೋಪ ಸಮಾರಂಭದಲ್ಲಿ ತಗೆದುಕೊಳ್ಳಲಾಯಿತು

ಸ್ಥಳೀಯ ಬೇಡಿಕೆಗಳ ಕಡೆಗಣನೆ :
ಗೋಕಾಕ ನೂತನ ಜಿಲ್ಲೆ ಆಗಬೇಕೆಂದು ಬಹುದಿನಗಳ ಬೇಡಿಕೆಯಾಗಿದ್ದರು ಸಹ ಈ ಬೇಡಿಯನ್ನು ಜಿಲ್ಲಾ ಸಮ್ಮೇಳನದಲ್ಲಿ ಕೈಗೊಂಡ ನಿರ್ಣಯಗಳಲ್ಲಿ ಸೇರಿಸದೆ ಸಂಘಟಕರನ್ನು ಗೋಕಾಕ ನಾಡಿನ ಜನತೆಯ ಮತ್ತು ಹೋರಾಟಗಾರರ ಕೆಂಗಣ್ಣಿಗೆ ಗುರಿಯಾಗಿದ್ದಾರೆ . ಗೋಕಾಕ ನೆಲದಲ್ಲಿ ಜಿಲ್ಲಾ ಸಮ್ಮೇಳನ ಜರುಗಿದರೂ ಸಹ ಸಮ್ಮೇಳನದ ನಿರ್ಣಯಗಳಲ್ಲಿ ಗೋಕಾಕಿಗೆ ಬೇಕಾಗುವ ಪೂರಕ ವಿಷಯಗಳನ್ನು ನಿರ್ಣಯಗಳಲ್ಲಿ ಸೇರಿಸಕೊಳ್ಳದಕ್ಕೆ ಹಲವರು ಬೇಸರಗೊಂಡು ಸಮ್ಮೇಳನದ ಸಂಘಟಕರ ನಿಲುವನ್ನು ಖಂಡಿಸಿದರು

Related posts: