ಗೋಕಾಕ:ಸಂತ ಶಿರೋಮಣಿ ಶ್ರೀ ಶಿವರಾಮದಾದಾ ಗೋಕಾಕಕರ 162ನೇ ವರ್ಷದ ಆಷಾಢ ದಿಂಡಿ ಪಾದಯಾತ್ರೆಗೆ ಚಾಲನೆ
ಸಂತ ಶಿರೋಮಣಿ ಶ್ರೀ ಶಿವರಾಮದಾದಾ ಗೋಕಾಕಕರ 162ನೇ ವರ್ಷದ ಆಷಾಢ ದಿಂಡಿ ಪಾದಯಾತ್ರೆಗೆ ಚಾಲನೆ
ನಮ್ಮ ಬೆಳಗಾವಿ ಸುದ್ದಿ , ಗೋಕಾಕ ಜೂ 30 :
ಸುಕ್ಷೇತ್ರ ಪಂಡರಪೂರದಲ್ಲಿ ಜರುಗುವ ಆಷಾಢವಾರಿ ನಿಮಿತ್ಯವಾಗಿ ಇಲ್ಲಿಯ ಶ್ರೀ ಹ.ಭ.ಪ. ಸಂತ ಶಿರೋಮಣಿ ಶ್ರೀ ಶಿವರಾಮದಾದಾ ಗೋಕಾಕಕರ 162ನೇ ವರ್ಷದ ಆಷಾಢ ದಿಂಡಿ ಪಾದಯಾತ್ರೆಯು ರವಿವಾರದಂದು ನಗರದ ಹೊಸಪೇಟ(ಗೌಳಿ) ಗಲ್ಲಿಯಲ್ಲಿರುವ ಶ್ರೀ ವಿಠ್ಠಲ ರುಕ್ಮಿಣಿ ಮಂದಿರದಿಂದ ಚಾಲನೆ ನೀಡಲಾಯಿತು.
162 ವರ್ಷಗಳು ಇತಿಹಾಸವನ್ನು ಹೊಂದಿರುವ ಆಷಾಢ ದಿಂಡಿ ಪಾದಯಾತ್ರೆಯು ಶ್ರೀ ಕ್ಷೇತ್ರ ಪಂಡರಪೂರಕ್ಕೆ ಹೋಗುವ ಕರ್ನಾಟಕದ ಅತಿ ದೊಡ್ಡ ದಿಂಡಿಯಾತ್ರೆ ಅಂತಾ ಹೆಗ್ಗಳಿಕೆಯನ್ನು ಪಡೆದಿದೆ. ಈ ಪಾದಯಾತ್ರೆಯಲ್ಲಿ ಬೆಳಗಾವಿ, ಖಾನಾಪೂರ, ಸವದತ್ತಿ, ಬೈಲಹೊಂಗಲ, ಹುಕ್ಕೇರಿ, ರಾಯಬಾಗ ತಾಲೂಕಿನಿಂದ ವಿವಿಧ ಗ್ರಾಮಗಳ ಹರಿ ಭಕ್ತರನ್ನು ಭವ್ಯವಾಗಿ ಸ್ವಾಗತಿಸಿ, ನಗರದ ಹೊಸಪೇಟ(ಗೌಳಿ) ಗಲ್ಲಿಯಲ್ಲಿರುವ ಶ್ರೀ ವಿಠ್ಠಲ ರುಕ್ಮಿಣಿ ಮಂದಿರÀದಲ್ಲಿ ಆರತಿ ಪೂಜೆಯೊಂದಿಗೆ ದಿಂಡಿಯಾತ್ರೆಗೆ ಚಾಲನೆ ನೀಡಿ ನಗರ ಪ್ರಮುಖ ಬೀದಿಗಳಲ್ಲಿ ಸಂಚರಿಸಿ ಸಾವಿರಾರು ಭಕ್ತಾಧಿಗಳು ಸಂಗನಕೇರಿ ಗ್ರಾಮದ ಮುಖಾಂತರ ಕಲ್ಲೋಳಿ ಪಟ್ಟಣ ತಲುಪಿ ಅಲ್ಲಿಯೇ ವಾಸ್ತವ್ಯವನ್ನು ಮಾಡಿ, ಜುಲೈ 1ರಂದು ಕಲ್ಲೋಳಿಯಿಂದ ನಾಗನೂರ ಮಾರ್ಗವಾಗಿ ಮುಗಳಖೋಡದಲ್ಲಿ ವಾಸ್ತವ್ಯ, ಜುಲೈ 2ರಂದು ಮುಗಳಖೋಡದಿಂದ ದರೂರದಲ್ಲಿ ವಾಸ್ತವ್ಯ, ಜುಲೈ 3ರಂದು ದರೂರದಿಂದ ಹಲ್ಯಾಳ ಮಾರ್ಗವಾಗಿ ಅಥಣಿಯಲ್ಲಿ ವಾಸ್ತವ್ಯ, ಜುಲೈ 4ರಂದು ಅಥಣಿಯಿಂದ ಹೊರಟು ಬಾಳಿಗೇರಿಯಲ್ಲಿ ವಾಸ್ತವ್ಯ, ಜುಲೈ 5ರಂದು ಬಾಳಿಗೇರಿಯಿಂದ ಗುಗವಾಡ, ಮಲಾಬಾದ(ಫರಾಳ) ಮಾರ್ಗವಾಗಿ ವಜ್ರವಾಡದಲ್ಲಿ ವಾಸ್ತವ್ಯ, ಜುಲೈ 6ರಂದು ವಜ್ರವಾಡದಿಂದ ಹೊರಟು ದೇವನಾಳದಲ್ಲಿ ವಾಸ್ತವ್ಯ, ಜುಲೈ 7ರಂದು ದೇವನಾಳದಿಂದ ಪಟ್ಟಣಶೆಟ್ಟಿ ಪರಾಳ ತಾಟಸರಮಾಳಾ, ಜತ್ತ ಮಾರ್ಗವಾಗಿ ವಾಯಫಳದಲ್ಲಿ ವಾಸ್ತವ್ಯ, ಜುಲೈ 8ರಂದು ವಾಯಫಳದಿಂದ ಪಾರೇ ಮಾರ್ಗವಾಗಿ ಘೇರಡಿಯಲ್ಲಿ ವಾಸ್ತವ್ಯ, ಜುಲೈ 9ರಂದು ಘೇರಡಿಯಿಂದ ಶಿರಸಿ ಮಾರ್ಗವಾಗಿ ಲಕ್ಷ್ಮೀ ದಹಿವಾಡಿಯಲ್ಲಿ ವಾಸ್ತವ್ಯ, ಜುಲೈ 10ರಂದು ಲಕ್ಷೀ ದಹಿವಾಡಿಯಿಂದ ಕಾಶಿಗಾಂವದಲ್ಲಿ ಮಹಾನದಿ ಸ್ನಾನ ನಂತರ ಶ್ರೀ ಕ್ಷೇತ್ರ ಪಂಢರಪೂರ ತಲುಪುವುದು.
ಆಷಾಢ ದಿಂಡಿ ಪಾದಯಾತ್ರೆಯಲ್ಲಿ ಟ್ರಸ್ಟ್ ಕಮೀಟಿ ಅಧ್ಯಕ್ಷ ಮಾರುತಿ ಜಡಿನ್ನವರ, ಉಪಾಧ್ಯಕ್ಷ ರಾಮಚಂದ್ರ ಭಗತ, ಕಾರ್ಯದರ್ಶಿ ಮಹೇಶ ಕಠಾರೆ, ರಾಮು ಪಾಟೀಲ, ನಾಮದೇವ ರೇಣುಕೆ, ರವಿ ಗುಡ್ಡದಮನಿ, ಸಂಜೀವ ಜಾಧವ, ಮಾರುತಿ ಚವ್ಹಾಣ, ಬಾಳಪ್ಪ ಗುಗ್ಗಳಿ, ಲಕ್ಷ್ಮಣ ಯಮಕನಮರಡಿ, ಪರಶುರಾಮ ಗೌಳಿ, ಅಶೋಕ ಹೊಸಮನಿ, ಯಮನಪ್ಪ ಬಿಳಿಕುರಿ, ಮುತ್ತೇಪ್ಪ ಬಿಪಾಟೀಲ, ಚಂದ್ರಪ್ಪ ಪಡತಾರಿ, ವಿಠ್ಠಲ ಬಾಗಲೆ, ಯಮನಪ್ಪ ದೇಸಾಯಿ, ಭೀಮಪ್ಪ ಕಿತ್ತೂರ, ಸಾವಕ್ಕ ಮತವಾಡ ಸೇರಿದಂತೆ ಸಾವಿರಾರು ಹರಿಭಕ್ತರು(ಸಂತರು) ಮಹಿಳೆಯರು ಪಾಲ್ಗೊಂಡಿದ್ದರು.