RNI NO. KARKAN/2006/27779|Friday, November 22, 2024
You are here: Home » breaking news » ಗೋಕಾಕ:ಅಳಿಯ ಅಂಬಿರಾವ ಪಾಟೀಲ ನೇತೃತ್ವದಲ್ಲಿ ಸಭೆ : ರೆಬಲ್ ಶಾಸಕ ರಮೇಶ ನಿರ್ಧಾರಕ್ಕೆ ಜೈ ಎಂದ ಕಾರ್ಯಕರ್ತರು

ಗೋಕಾಕ:ಅಳಿಯ ಅಂಬಿರಾವ ಪಾಟೀಲ ನೇತೃತ್ವದಲ್ಲಿ ಸಭೆ : ರೆಬಲ್ ಶಾಸಕ ರಮೇಶ ನಿರ್ಧಾರಕ್ಕೆ ಜೈ ಎಂದ ಕಾರ್ಯಕರ್ತರು 

 ಅಳಿಯ ಅಂಬಿರಾವ ಪಾಟೀಲ ನೇತೃತ್ವದಲ್ಲಿ ಸಭೆ : ರೆಬಲ್ ಶಾಸಕ ರಮೇಶ ನಿರ್ಧಾರಕ್ಕೆ ಜೈ ಎಂದ ಕಾರ್ಯಕರ್ತರು
ನಮ್ಮ ಬೆಳಗಾವಿ ಸುದ್ದಿ , ಗೋಕಾಕ ಜು 8 :

 

 

ಗೋಕಾಕ ಮತಕ್ಷೇತ್ರದ ರೆಬಲ್ ಶಾಸಕ ರಮೇಶ್ ಜೊತೆ ಎಲ್ಲ ಅತೃಪ್ತರು ಶಾಸಕರು ರಾಜೀನಾಮೆಯನ್ನು ನೀಡಿ ಸಮ್ಮಿಶ್ರ ಸರಕಾರವನ್ನು ಉರಿಳಿಸಲು ಕಸರತ್ತು ನಡೆಸುತ್ತಿದ್ದರೆ . ಇತ್ತ ರಮೇಶ್ ಜಾರಕಿಹೊಳಿ ಅವರ ಅಳಿಯ ಅಂಬಿರಾಯ ಪಾಟೀಲ ಗೋಕಾಕಿನ ರಮೇಶ ಜಾರಕಿಹೊಳಿ ಅವರ ಕಛೇರಿಯಲ್ಲಿ ಕಾಂಗ್ರೆಸ್ ಕಾರ್ಯಕರ್ತರ ಜೊತೆ  ಐದು ಹಂತದ ಸಭೆ ನಡೆಸಿದ್ದಾರೆ . ಈ ಸಭೆಯಲ್ಲಿ ಸೇರಿದ ತಾಲೂಕಿನ ಎಲ್ಲ ಜಿ.ಪಂ , ತಾ.ಪಂ , ಗ್ರಾ.ಪಂ , ಪ.ಪಂ , ನಗರಸಭೆ ಸೇರಿದಂತೆ ಎಲ್ಲ ಹಂತದ ಕಾರ್ಯಕರ್ತರು ಒಕ್ಕೊರಲಿನಿಂದ ಶಾಸಕ ರಮೇಶ ಜಾರಕಿಹೊಳಿ ಅವರ ನಿರ್ಧಾರವನ್ನು ಬೆಂಬಲಿಸಿದ ಪ್ರಸಹನ ನಡೆದಿದೆ.

ಸಭೆಯಲ್ಲಿ ಭಾಗವಹಿಸಿ ಮಾತನಾಡಿದ ಜಿ.ಪಂ ಸದಸ್ಯ ಟಿ.ಆರ್.ಕಾಗಲ ಕಳೆದ 30 ವರ್ಷಗಳಿಂದ ಕಾಂಗ್ರೆಸ್ ಪಕ್ಷದ ನಿಷ್ಠಾವಂತ ಕಾರ್ಯಕರ್ತರಾಗಿ ಪಕ್ಷವನ್ನು ಕಟ್ಟಿ ಬೆಳೆಸಿದ ರಮೇಶ ಜಾರಕಿಹೊಳಿ ಅವರಿಗೆ ಕಳೆದ ಒಂದು ವರ್ಷದಿಂದ ಕಾಂಗ್ರೆಸ್ ಪಕ್ಷ ಕಡೆಗಣಿಸಿದ ಪರಿಣಾಮ ರಮೇಶ ಜಾರಕಿಹೊಳಿ ಅವರು ಶಾಸಕ ಸ್ಥಾನಕ್ಕೆ ರಾಜೀನಾಮೆ ನೀಡಿದ್ದಾರೆ. ಬದಲಾವಣೆಗೆ ಹೊಂದಿಕೊಂಡು ರಮೇಶ ಜಾರಕಿಹೊಳಿ ಅವರಿಗೆ ಬೆಂಬಲ ನೀಡಿ ಅವರ ಕೈ ಬಲಪಡಿಸಬೇಕಾಗಿದೆ . ಕಾರ್ಯಕರ್ತರು ತಮ್ಮ ಭಿನ್ನಾಭಿಪ್ರಾಯಗಳನ್ನು ಬದಿಗೋತ್ತಿ ರಮೇಶ ಜಾರಕಿಹೊಳಿ ರಾಜಕೀಯವಾಗಿ ಶಕ್ತಿ ನೀಡಿಬೇಕೆಂದು ಹೇಳಿದರು .

ಮಾಜಿ ನಗರಾಧ್ಯಕ್ಷ ಸಿದ್ದಲಿಂಗಯ್ಯ ದಳವಾಯಿ ಮಾತನಾಡಿ ರಾಜಕೀಯದಲ್ಲಿ ಏನು ಹೇಳಲಾಗುತೆ ಅದೆ ಮಾಡಬೇಕು ಆದರೆ ಇಂದು ಹೇಳುವುದೊಂದು ಮಾಡುವದು ಇನ್ನೊಂದು ಆಗುತ್ತಿದೆ ಇದರಿಂದ ನಾಯಕರಿಗೆ ತೊಂದರೆ ಯಾಗುತ್ತದೆ . ಜಾರಕಿಹೊಳಿ ಸಹೋದರರು ಎಲ್ಲರೂ ಕೂಡಿ ಒಂದೇ ನಿರ್ಣಯ ಕೈಗೊಂಡರೆ ಕಾರ್ಯಕರ್ತರಿಗೆ ಇನ್ನಷ್ಟು ಶಕ್ತಿ ಬರುತ್ತದೆ . ಆ ನಿಟ್ಟಿನಲ್ಲಿ ಸಹೋದರರು ಯಾರ ಮಾತುಗಳನ್ನು ಕೇಳದೆ ನಿರ್ಧಾರ ಕೈಗೊಳ್ಳಬೇಕು ಎಂದು ದಳವಾಯಿ ಸಲಹೆ ನೀಡಿದರು.

ಎಸ್.ಎ. ಕೋತವಾಲ , ವಿನೋದ ಕರನಿಂಗ , ಅಶೋಕ ಪಾಟೀಲ , ಶಿವಾನಂದ ಡೋಣಿ , ರಾಜು ತಳವಾರ , ಈಶ್ವರ ಭಾಗೋಜಿ , ಕಿರಣ ಢಮಾಮಗರ , ಮಾರುತಿ ಪೂಜಾರಿ , ಜ್ಯೋತಿಬಾ ಸುಭಂಜಿ ,ಡಿ.ಎಂ ದಳವಾಯಿ ಸೇರಿದಂತೆ ಅನೇಕ ಮುಖಂಡರು ಮಾತನಾಡಿ ರಮೇಶ ಜಾರಕಿಹೊಳಿ ಅವರ ನಿರ್ಧಾರವನ್ನು ಬೆಂಬಲಿಸಿದರು

ಕಾರ್ಮಿಕ ಮುಖಂಡ ರಮೇಶ ಜಾರಕಿಹೊಳಿ ಅವರ ಅಳಿಯ ಅಂಬಿರಾವ ಪಾಟೀಲ ನೇತೃತ್ವದಲ್ಲಿ ನಡೆದ ಸಭೆಯು ಎರೆಡು ಘಂಟೆಗಳಿಗೂ ಹೆಚ್ಚು ಕಾಲ ನಡೆಯಿತು ಮತಕ್ಷೇತ್ರಾದ್ಯಂತ ಸುಮಾರು 3 ಸಾವಿರಕ್ಕೂ ಹೆಚ್ಚು ಕಾರ್ಯಕರ್ತರು ಭಾಗವಹಿಸಿದ್ದರು . ಹಂತ ಹಂತವಾಗಿ ನಡೆದ ಸಭೆಯಲ್ಲಿ ಭಾಗವಹಿಸಿ ಮರಳಿದ ಕಾರ್ಯಕರ್ತರು ಶಾಸಕ ರಮೇಶ್ ಜಾರಕಿಹೊಳಿ ಪರ ಘೋಷಣೆಗಳನ್ನು ಕೂಗಿ ತಮ್ಮ ಬೆಂಬಲ ವ್ಯಕ್ತಪಡಿಸುತ್ತಿದ್ದು ವಿಶೇಷವಾಗಿತ್ತು .

ಸಭೆಯಲ್ಲಿ ಮತಕ್ಷೇತ್ರದ ಎಲ್ಲ ಹಂತದ ಕಾರ್ಯಕರ್ತರು ಮುಖಂಡರು ಭಾಗವಹಿಸಿದ್ದರು

Related posts: