RNI NO. KARKAN/2006/27779|Monday, December 23, 2024
You are here: Home » breaking news » ಖಾನಾಪುರ:ಹಳ್ಳಿಗಾಡಿನ ಪೋಸ್ಟ ಆಫೀಸ್‍ಗಳಿಗೆ ತುಂಬಬೇಕಿದೆ ಮರುಜೀವ

ಖಾನಾಪುರ:ಹಳ್ಳಿಗಾಡಿನ ಪೋಸ್ಟ ಆಫೀಸ್‍ಗಳಿಗೆ ತುಂಬಬೇಕಿದೆ ಮರುಜೀವ 

ಹಳ್ಳಿಗಾಡಿನ ಪೋಸ್ಟ ಆಫೀಸ್‍ಗಳಿಗೆ ತುಂಬಬೇಕಿದೆ ಮರುಜೀವ

ವಿಶೇಷ ವರದಿ: ಕಾಶೀಮ ಹಟ್ಟಿಹೊಳಿ, ಖಾನಾಪುರ 

ಸ್ವಾತಂತ್ರ್ಯಾನಂತರ ಪ್ರಾರಂಭವಾದ ಪೋಷ್ಟ ಆಫೀಸ್‍ಗಳು ಹಳ್ಳಿಹಳ್ಳಿಗರಿಗೆ ಸುದ್ದಿ ಮುಟ್ಟಿಸುವ ಮಹತ್ತರ ಕಾರ್ಯವನ್ನು ಮಾಡುತ್ತ ಬಂದಿರುವುದು ಶ್ಲಾಘನೀಯ. ಆದರೆ ಓಬಿರಾಯನ ಕಾಲದ ದಯನೀಯ ಪದ್ಧತಿಯಲ್ಲಿಯೇ ಕುಂಟುತ್ತ ತೆವಳುತ್ತ ಕಾರ್ಯ ನಿರ್ವಹಿಸುತ್ತಿರುವ ಅಂಚೆ ಕಛೇರಿಗಳ ಸ್ಥಿತಿ ಚಿಂತಾಜನಕವಾಗಿದೆ.

ಗುತ್ತಿಗೆ ಆಧಾರದ ಮೇಲೆ ಬ್ರಾಂಚ್ ಪೋಷ್ಟ ಮಾಸ್ಟರ್ ಮತ್ತು ಗ್ರಾಮೀಣ ಡಾಕ್ ಸೇವಕರನ್ನಾಗಿ ನಿಯಮಿಸಿ ಅವರಿಗೆ ಕನಿಷ್ಠ ವೇತನ ನೀಡಿ,ನೊಗಭಾರ ಕೆಲಸ ಕೊಡುತ್ತಿರುವುದು ನೌಕರರ ಏಳಿಗೆಯಂತೂ ಮರೀಚಿಕೆ ಆಗಿದೆ. ಇಲ್ಲಿ 30-40 ವರ್ಷ ಸೇವೆ ಸಲ್ಲಿಸಿದವರ ಆಥಿಕ ಪರಿಸ್ಥಿತಿ ಮತ್ತಷ್ಟು ಹದಗೆಟ್ಟಿದೆಯೇ ಹೊರತು ಸುಧಾರಿಸಿಲ್ಲ.

1966 ದಶಕದಲ್ಲಿ ಲಿಂಗನಮಠ ಗ್ರಾಮದಲ್ಲಿ ಪ್ರಾರಂಭವಾದ ಪೋಷ್ಟ ಆಫೀಸ್ ಶಾಖೆ ಲಿಂಗನಮಠ, ಹೊಸಲಿಂಗನಮಠ, ವಾಲ್ಮೀಕಿನಗರ, ಗುಂಡೊಳ್ಳಿ ಮತ್ತು ಪೂರ ಗ್ರಾಮಗಳ ವ್ಯಾಪ್ತಿ ಹೊಂದಿದ್ದು ಈ ಶಾಖೆ ಇದೂ ವರೆಗೆ ಸಣ್ಣ ಬಾಡಿಗೆ ಕೊಠಡಿಯಲ್ಲಿಯೇ ದಿನ ನೂಕುತ್ತಿದ್ದು ಗ್ರಾಮದ ಸಂಪರ್ಕವಿರುವ ಮೂಲೆಯಲ್ಲಿ ಕಾರ್ಯ ನಿರ್ವಹಿಸುತ್ತಲಿದೆ.

ಇಂದಿನ ರಮೇಶ ಬಾಗೇವಾಡಿ ಎಂಬ ಪೋಷ್ಟ ಮಾಸ್ಟರರು ಸುಮಾರು 23 ವರ್ಷ ತಮ್ಮ ಸ್ವಂತ ಮನೆಯಲ್ಲಿಯೇ ಅನೇಕ ದಶಕಗಳ ವರೆಗೆ ಶಾಖೆಯನ್ನು ನಡೆಸಿಕೊಂಡು ಬಂದಿದ್ದಾರೆ. ಈಗ ಕಳೆದ ವರ್ಷದಿಂದ ಬಾಡಿಗೆ ಮನೆ ಪಡೆದು, ಅವು ಮಳೆಗಾಲದಲ್ಲಿ ಕೆಸರು ಗದ್ದೆಯಾದರೂ ಅಲ್ಲಿಯೇ ನಡೆಸಿಕೊಂಡು ಬರುತ್ತಿದ್ದಾರೆ. ಆಫೀಸ್‍ಗೆ ಸುರಕ್ಷತೆಯ ಕೊರತೆ ಕಾಡುತ್ತಿದೆ.

ಗಾಳಿ-ಬೆಳಕು ಇಲ್ಲದ,ಸಾರ್ವಜನಿಕರಿಗೆ ತುಂಬಾ ಅನಾನುಕೂಲವಾಗುವ ಸ್ಥಳದಲ್ಲಿ ಕೆಲಸ ಮಾಡುತ್ತಿರುವ ಪೋಷ್ಟ್ ಆಫೀಸಿನತ್ತ ತಿರುಗಿ ನೋಡುವ ನಾಗರಿಕರಿಲ್ಲದಾಗಿದೆ. ಕಳೆದ 31 ವರ್ಷ ಪೋಷ್ಟಮನ್ ಆಗಿ ಸೇವೆ ಸಲ್ಲಿಸಿದ ಮೋಹನ ಮಾವಳಿ ಬೆಳಗಾಂವಿ ಸೈಕಲ್ ವಗೈರೆ ಯಾವುದೇ ಸವಲತ್ತುಗಳಿಲ್ಲದೆ ನಾಲ್ಕು ಗ್ರಾಮಗಳ ಸುಮಾರು 36-40 ಕಿ.ಮೀ. ರಸ್ತೆಯನ್ನು ಕಾಲ್ನಡಿಗೆಯಿಂದ ಕ್ರಮಿಸಿ ಪತ್ರ ಹಂಚುವ , ಮನಿ ಓರ್ಡರ್‍ಗಳನ್ನು ವಿತರಿಸುವ ಕೆಲಸದಲ್ಲಿ ತಮ್ಮನ್ನು ತೊಡಗಿಸಿಕೊಂಡು “ಪೆÇೀಸ್ಟಮ್ಯಾನ್” ಎಂಬ ಹೆಸರಿನಿಂದ ಹೆಸರುವಾಸಿಯಾಗಿದ್ದಾನೆ. ಅವರ ಮರಣದ ನಂತರ ಕಳೆದ 4-5 ವರ್ಷಗಳಿಂದ ಅವರ ಮಗ ಮಹಾಂತೇಶ ಬೆಳಗಾಂವಿ “ಪೆÇೀಸ್ಟಮ್ಯಾನ” ಆಗಿ ಕಾರ್ಯನಿರ್ವಹಿಸುತ್ತಿದ್ದಾರೆ. .ಇವರಿಗೆ 5 ತಾಸು ಕೆಲಸ ಎಂದು ನಿಗದಿಯಾಗಿದ್ದರೂ ಗುತ್ತಿಗೆ ಆಧಾರದ ಮೇಲಿನ ಅತೀ ಕಡಿಮೆ ಹಣದಲ್ಲಿ 10 ತಾಸು ಸುತ್ತಲಿನ ಗ್ರಾಮಗಳಲ್ಲಿ ಸುತ್ತಿ ಕೆಲಸ ಮಾಡುವ ಅನಿವಾರ್ಯತೆ ಇದೆ. ಕೇವಲ 3 ತಾಸು ಕೆಲಸ ಎಂದು ಇದ್ದರೂ ನಿಗದಿತ ವೇತನವಿಲ್ಲದೆ ಗುತ್ತಿಗೆ ಆಧಾರದ ಹಣದಲ್ಲಿ ತಮ್ಮ ಪ್ರಯಾಣ ಇತರೆ ಖರ್ಚನ್ನು ನಿಭಾಯಿಸಿಕೊಂಡು ಬ್ರ್ಯಾಂಚ್ ಪೋಷ್ಟಮಾಸ್ಟರ್ ಪರವೂರಿನಿಂದ ಆಗಮಿಸಿ ಅರ್ಧದಿನ ಪೂರ್ತಿ ಕೆಲಸ ಮಾಡಬೇಕಾಗುತ್ತಿದೆ.

ಈ ಶಾಖೆಯಿಂದ ನಿತ್ಯವೂ 4 ಗ್ರಾಮಗಳ ಜನರಿಗೆ ಮನಿ-ಆರ್ಢರ್ ಹಣ,ರಜಿಸ್ಟರ್ ಪಾರ್ಸಲ್‍ಗಳು,ಆರ್.ಡಿ.ಹಣ ಭರಣಾ,ಎಸ್.ಬಿ.ಖಾತೆಯಲ್ಲಿ ಹಣ ಸಂದಾಯ-ವಿತರಣೆ,ಸ್ಪೀಡ್-ಪೋಷ್ಟ ಮುಂತಾದ ಸೇವೆಗಳು ಕುಂಟುತ್ತ ನಡೆಯುತ್ತಿವೆ.

ಈ ಶಾಖೆಗೆ ಯಾವುದೆ ಆಧುನಿಕ ಸೌಲಭ್ಯಗಳಾದ ಕಂಪ್ಯೂಟರ್,ಇಂಟರನೆಟ್ ಮುಂತಾದ ಸೇವೆಗಳಿಲ್ಲದೆ ಜನರು ಪೋಷ್ಟ ಸೇವೆಗಳಿಂದ ವಂಚಿತರಾಗಿದ್ದಾರೆ. ದೂರದ ಅಳ್ನಾವರ,ಬೀಡಿ,ಧಾರವಾಡ ಅಥವಾ ಬೆಳಗಾವಿ ಅಂಚೆ ಕಛೇರಿಗಳನ್ನು ಹುಡುಕುತ್ತ ಅಲೆಯುವ ಪರಿಸ್ಥಿತಿ ಜನರದ್ದಾಗಿದೆ. ಅಂಚೆ ಇಲಾಖೆಯಿಂದ ಅನೇಕ ಸಲ ಕಟ್ಟಡ ಒದಗಿಸುವಂತೆ ಗ್ರಾ.ಪಂ. ಆಫೀಸ್ ಗೆ ಬೇಡಿಕೆಗಳು ಬಂದಿದ್ದರೂ ಸಂಬಂಧಿಸಿದ ಜನಪ್ರತಿನಿಧಿಗಳು ಅಂಚೆ ಕಛೇರಿ ಸ್ವಂತ ಕಟ್ಟಡ,ರಕ್ಷಣೆ ನೀಡುವಲ್ಲಿ ವಿಳಂಬ ಧೋರಣೆ ಅನುಸರಿಸುತ್ತಿರುವುದು ಕೇಳಿಬಂದಿದೆ.

ಈಗಲಾದರೂ ಸಂಬಂಧಿಸಿದ ಅಂಚೆ ಇಲಾಖೆಯವರು, ಗ್ರಾಮದ ಜನಪ್ರತಿನಿಧಿಗಳು ಇತ್ತ ಗಮನಹರಿಸಿ,ಅಂಚೆ ಶಾಖೆಗೆ ಸ್ವಂತ ಕಟ್ಟಡ,ಸುರಕ್ಷತೆ,ಆಧುನಿಕ ವಿದ್ಯುನ್ಮಾನ ಸವಲತ್ತುಗಳನ್ನು ಒದಗಿಸುವ ಪ್ರಯತ್ನ ಮಾಡಬೇಕು ಮತ್ತು ಘನ ಸರಕಾರಗಳು ಅಂಚೆ ಇಲಾಖೆಯ ಗ್ರಾಮೀಣ ಶಾಖೆಗಳಿಗೆ ಆದಷ್ಟು ಬೇಗನೆ ಕಾಯಕಲ್ಪ ನೀಡಿ ಜನರಿಗೆ ಅವಶ್ಯ ಇರುವ ಉತ್ತಮ ಸೇವೆಯನ್ನು ಒದಗಿಸಲು ಅವುಗಳನ್ನು ಸಮರ್ಥಗೊಳಿಸಬೇಕು,ಸಿಬ್ಬಂದಿಗೆ ಉತ್ತಮ ವೇತನ,ವಸತಿ ಸೌಕರ್ಯಗಳನ್ನು ಒದಗಿಸಬೇಕು ಎಂದು ಗ್ರಾಮಸ್ಥರು ಆಗ್ರಹಿಸುತ್ತಿದ್ದಾರೆ.

ರಮೇಶ ಬಾಗೇವಾಡಿ, ಶಾಖಾ ಪೋಷ್ಟ ಮಾಸ್ಟರ್,ಲಿಂಗನಮಠ :

“ಗುತ್ತಿಗೆ ಆಧಾರದ ನೇಮಕಾತಿಯನ್ನು ರದ್ದುಗೊಳಿಸಿ, ಎಂಟು ತಾಸು ಸೇವೆಯನ್ನು ನಿಗದಿ ಮಾಡಿ,ಉಳಿದ ನೌಕರರಂತೆ ಸೇವೆಯನ್ನು ಖಾಯಂಗೊಳಿಸಬೇಕು,ನೌಕರರಿಗೆ ನೀಡುವ ನಿಗದಿತ ವೇತನ ನೀಡಬೇಕು,ವಸತಿ ವ್ಯವಸ್ಥೆ ಕಲ್ಪಿಸಬೇಕು.”

ಶಿವಮೂರ್ತಿ ಬೆಳಗಾಂವಿ, ಗ್ರಾಮೀಣ ಡಾಕ ಸೇವಕ,ಲಿಂಗನಮಠ :

ನಮ್ಮ ಸೇವೆಯನ್ನು ಖಾಯಂಗೊಳಿಸಿ ನಿಗದಿತ ಸೇವಾ ಅವಧಿ ಮತ್ತು ನಿಗದಿತ ವೇತನ,ಕಾಲಕಾಲಕ್ಕೆ ಪರಿಷ್ಕರಣೆ,ನಿವೃತಿ ವೇತನ ನಿಗದಿ ಮತ್ತು ಅಂಚೆ ಸೇವೆ ಪರಿಣಾಮಕಾರಿ ಆಗಲು ಸೈಕಲ್ ಒದಗಿಸಿ ಸೇವೆಯನ್ನು ಚುರುಕುಗೊಳಿಸಬೇಕು.”

ಆರ್.ಜಿ.ಮೊರಬದ,(ಎಂ.ಓ)ಸೌತ್,ಬೈಲಹೋಗಲ :

” 9 ವರ್ಷ ಒಳಗಿನ ಹೆಣ್ಣು ಮಕ್ಕಳಿಗೆ ಸುಕನ್ಯಾ ಸಮೃದ್ಧಿ ಯೋಜನೆ,ಅಟಲ್ ಪೆನ್ಶನ್ ಯೋಜನೆ ಮುಂತಾದ ಸರಕಾರಿ ಯೋಜನೆಗಳ ಕುರಿತು ಜನರಲ್ಲಿ ಜಾಗೃತಿ ಮೂಡಿಸುವ ಕಾರ್ಯಕ್ರಮಗಳನ್ನು ಗ್ರಾಮೀಣ ಪ್ರದೇಶಗಳಲ್ಲಿ ತ್ವರಿತ ಗತಿಯಲ್ಲಿ ಸರಕಾರದ ಖರ್ಚಿನಲ್ಲಿ ಹಮ್ಮಿಕೊಂಡು ಯೋಜನೆಗಳು ಯಶಸ್ವಿಯಾಗುವಂತೆ ನೋಡಿಕೊಳ್ಳಬೇಕು

Related posts: