RNI NO. KARKAN/2006/27779|Thursday, December 12, 2024
You are here: Home » breaking news » ಪಣಜಿ:ಸಾಧಕರ ಸಾಧನೆಗಳು ವಿದ್ಯಾರ್ಥಿಗಳಿಗೆ ಪ್ರೆರಣೆಯಾಗಬೇಕು : ಬಸವರಾಜ ಖಾನಪ್ಪನವರ

ಪಣಜಿ:ಸಾಧಕರ ಸಾಧನೆಗಳು ವಿದ್ಯಾರ್ಥಿಗಳಿಗೆ ಪ್ರೆರಣೆಯಾಗಬೇಕು : ಬಸವರಾಜ ಖಾನಪ್ಪನವರ 

ಸಾಧಕರ ಸಾಧನೆಗಳು ವಿದ್ಯಾರ್ಥಿಗಳಿಗೆ ಪ್ರೆರಣೆಯಾಗಬೇಕು : ಬಸವರಾಜ ಖಾನಪ್ಪನವರ
ನಮ್ಮ ಬೆಳಗಾವಿ ಸುದ್ದಿ , ಪಣಜಿ ಜು 11 :

 
ಸಾಧಕರ ಸಾಧನೆಗಳು ವಿದ್ಯಾರ್ಥಿಗಳಿಗೆ ಪ್ರೆರಣೆಯಾಗಬೇಕು ಎಂದು ಕರ್ನಾಟಕ ರಕ್ಷಣಾ ವೇದಿಕೆ ಗೋಕಾಕ ತಾಲೂಕಾಧ್ಯಕ್ಷ ಬಸವರಾಜ ಖಾನಪ್ಪನವರ ಹೇಳಿದರು

ಗುರವಾರದಂದು ಮುಂಜಾನೆ ಸಾಸಮೊಲೆಮ್ ವಾಸ್ಕೋದ ಕನ್ನಡ ಮಾಧ್ಯಮ ಪ್ರೌಢಶಾಲೆಯ ವಿದ್ಯಾರ್ಥಿಗಳ ಜೊತೆ ಹಮ್ಮಿಕೊಂಡಿದ್ದ ವಿದ್ಯಾರ್ಥಿಗಳೊಂದಿಗೆ ಸಂವಾದ ಕಾರ್ಯಕ್ರಮದಲ್ಲಿ ಭಾಗವಹಿಸಿ ಮಾತನಾಡಿದರು

ವಿದ್ಯಾರ್ಥಿ ಜೀವನ ಅತ್ಯಂತ ಪವಿತ್ರವಾದ್ದದು ಸ್ವಾಮಿ ವಿವೇಕಾನಂದ , ಸರ್ ಎಂ ವಿಶವೇಶ್ವರಯ್ಯ , ಭಗತಸಿಂಗ್ ಸೇರಿದಂತೆ ದೇಶದ ಇತಿಹಾಸದಲ್ಲಿ ಅಚ್ಚಳಿಯದೆ ಉಳಿದ ಇವರ ಸಾಧನಗಳು ಮತ್ತು ಅವರ ತತ್ವ ಸಿದ್ದಾಂತಗಳನ್ನು ವಿದ್ಯಾರ್ಥಿಗಳು ತಮ್ಮ ಜೀವನದಲ್ಲಿ ಅಳವಡಿಸಿಕೊಂಡು ಸಾಧಕರಾಗಬೇಕು ಆ ದಿಸೆಯಲ್ಲಿ ಎಲ್ಲರೂ ಪರಿಶ್ರಮ ಪಡೆಬೇಕು . ಮುಂದಿನ ದಿನಗಳಲ್ಲಿ ಕರವೇಯಿಂದ ಗೋವಾ ರಾಜ್ಯದ ಕನ್ನಡ ಮಾಧ್ಯಮ ವಿದ್ಯಾರ್ಥಿಗಳಿಗಾಗಿ ರಚನಾತ್ಮಕ ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳಲಾಗುವದಲ್ಲದೆ ಕನ್ನಡ ಶಾಲೆಗೆಗಳನ್ನು ಉಳಿಸಿ ಬೆಳೆಸಲು ಕನ್ನಡಿಗರು ಹೆಚ್ಚಿರುವ ಪ್ರದೇಶಗಳಲ್ಲಿ ಅಭಿಯಾನಗಳನ್ನು ನಡೆಸಲು ಉದ್ದೇಶಿಸಲಾಗಿದೆ ಇದಕ್ಕೆ ಗೋವಾ ಕನ್ನಡಿಗರು ಕೈ ಜೋಡಿಸಬೇಕೆಂದು ಖಾನಪ್ಪನವರ ಮನವಿ ಮಾಡಿದರು

ಈ ಸಂದರ್ಭದಲ್ಲಿ ಶಾಲೆಯ ಮಖ್ಯೋಪಾದಯ ಪಿ.ವಿ ಪಾಟೀಲ , ಸಹ ಶಿಕ್ಪಕರಾದ ಎಸ್.ಎಸ್.ಬೆಂಡೆ , ಶ್ರೀಮತಿ ವನಿಜಾ ರೋಜಲಿನ , ಸಾರಿಕಾ ಕುಡತಾಲಕರ ಕರವೇ ಪದಾಧಿಕಾರಿಗಳಾದ ಸಾದಿಕ ಹಲ್ಯಾಳ, ಭರಮಣ್ಣಾ ಕಟ್ಟಿಮನಿ , ಸುರೇಶ ಪತ್ತಾರ , ಅಶೋಕ ಬಂಡಿವಡ್ಡರ , ಲಕ್ಷ್ಮಣ ಗೋರಗುದ್ದಿ , ಅಜರ ಸನದಿ , ಹಣಮಂತ ಅಮ್ಮಣಗಿ, ಗುಡುರಾವ ಗುಜನಟ್ಟಿ , ಶಿಕ್ಷಕಿಯರಾದ ಶ್ರೀಮತಿ ಸ್ವಾತಿ ಲೋನಕಡಿ , ವಿಜಯಲಕ್ಮೀ ಗೌಡರ ಉಪಸ್ಥಿತರಿದ್ದರು .
ಸಂವಾದ ಕಾರ್ಯಕ್ರಮದಲ್ಲಿ ಶಾಲೆಯ ಎಸ್.ಎಲ್.ಸಿ ವಿದ್ಯಾರ್ಥಿಗಳಾದ ಆಕಾಶ , ಸವಿತಾ , ಸ್ವೇತಾ ಸೇರಿದಂತೆ ಹಲವಾರು ವಿದ್ಯಾರ್ಥಿಗಳು ಭಾವಹಿಸಿದರು

Related posts: