RNI NO. KARKAN/2006/27779|Friday, November 22, 2024
You are here: Home » breaking news » ಗೋಕಾಕ:ಶಿಕ್ಷಣಕ್ಕೆ ನೀಡಿರುವಷ್ಟು ಪ್ರಾಶಸ್ತ್ಯ ಯಾವ ಕ್ಷೇತ್ರಕ್ಕೂ ನೀಡಿಲ್ಲ : ಮಾಜಿ ಸಚಿವ ಬಾಲಚಂದ್ರ

ಗೋಕಾಕ:ಶಿಕ್ಷಣಕ್ಕೆ ನೀಡಿರುವಷ್ಟು ಪ್ರಾಶಸ್ತ್ಯ ಯಾವ ಕ್ಷೇತ್ರಕ್ಕೂ ನೀಡಿಲ್ಲ : ಮಾಜಿ ಸಚಿವ ಬಾಲಚಂದ್ರ 

ಶಿಕ್ಷಣಕ್ಕೆ ನೀಡಿರುವಷ್ಟು ಪ್ರಾಶಸ್ತ್ಯ ಯಾವ ಕ್ಷೇತ್ರಕ್ಕೂ ನೀಡಿಲ್ಲ : ಮಾಜಿ ಸಚಿವ ಬಾಲಚಂದ್ರ

ಗೋಕಾಕ ಜು 14: ನನ್ನ ಅಧಿಕಾರವಧಿಯಲ್ಲಿ ಶಿಕ್ಷಣಕ್ಕೆ ನೀಡಿರುವಷ್ಟು ಪ್ರಾಶಸ್ತ್ಯ ಯಾವ ಕ್ಷೇತ್ರಕ್ಕೂ ನೀಡಿಲ್ಲ. ಸಮಾಜದ ಬದಲಾವಣೆಯಲ್ಲಿ ಶಿಕ್ಷಣ ಪ್ರಮುಖ ಪಾತ್ರ ವಹಿಸುತ್ತದೆ. ಶಿಕ್ಷಣದ ಅಮೂಲಾಗ್ರ ಬದಲಾವಣೆಯಲ್ಲಿ ಶಿಕ್ಷಕರ ಜೊತೆಗೆ ಪಾಲಕರ ಪಾತ್ರ ಮಹತ್ವದ್ದಾಗಿದೆ ಎಂದು ಅರಭಾವಿ ಶಾಸಕ ಬಾಲಚಂದ್ರ ಜಾರಕಿಹೊಳಿ ತಿಳಿಸಿದರು.

ಇಲ್ಲಿಗೆ ಸಮೀಪದ ಅರಭಾವಿ ಗ್ರಾಮದಲ್ಲಿ ಗುರುವಾರದಂದು ಸಮಾಜ ಕಲ್ಯಾಣ ಇಲಾಖೆಯ ಡಾ.ಬಿ.ಆರ್. ಅಂಬೇಡ್ಕರ ಬಾಲಕಿಯರ ವಸತಿ ಶಾಲೆಯ ಪ್ರಾರಂಭೋತ್ಸವ ಕಾರ್ಯಕ್ರಮವನ್ನು ಉದ್ಘಾಟಿಸಿ ಅವರು ಮಾತನಾಡಿದರು.

ಗೋಕಾಕ ತಾಲೂಕಿನಲ್ಲಿ ಈಗಾಗಲೇ ಒಟ್ಟು 13 ವಸತಿ ಶಾಲೆಗಳು ಪ್ರಾರಂಭಗೊಂಡಿವೆ. ಇದರಲ್ಲಿ ಅರಭಾವಿ ಕ್ಷೇತ್ರದಲ್ಲಿ ಯಾದವಾಡ, ಕೌಜಲಗಿ, ಕಲ್ಲೋಳಿ, ನಾಗನೂರ ಗ್ರಾಮಗಳಲ್ಲಿ ಮೊರಾರ್ಜಿ ದೇಸಾಯಿ ವಸತಿ ಶಾಲೆಗಳು ಕಾರ್ಯನಿರ್ವಹಿಸುತ್ತಿವೆ. ತಪಸಿ ಗ್ರಾಮದಲ್ಲಿ ಅಟಲ್ ಬಿಹಾರಿ ವಾಜಪೇಯಿ ಮಾದರಿ ವಸತಿ ಶಾಲೆ ಆರಂಭಗೊಂಡಿದೆ. ಲಕ್ಷ್ಮೇಶ್ವರ ಗ್ರಾಮಕ್ಕೆ ಅಲ್ಪಸಂಖ್ಯಾತರ ವಸತಿ ಶಾಲೆಯು ಮಂಜೂರಾಗಿದ್ದು, ಶಾಲೆಯ ಕಟ್ಟಡದ ತೊಂದರೆಯಿರುವುದರಿಂದ ಮೂಡಲಗಿಯಲ್ಲಿ ತಾತ್ಕಾಲಿಕವಾಗಿ ವಸತಿ ಶಾಲೆ ಆರಂಭವಾಗಲಿದೆ. ಈಗ ಅರಭಾವಿಯಲ್ಲಿ ಡಾ.ಬಿ.ಆರ್.ಅಂಬೇಡ್ಕರ ಬಾಲಕಿಯರ ವಸತಿ ಶಾಲೆಯನ್ನು ಆರಂಭಿಸಲಾಗಿದೆ ಎಂದು ಹೇಳಿದರು.
ಗ್ರಾಮೀಣ ಪ್ರದೇಶದಲ್ಲಿ ಉತ್ತಮ ಗುಣಮಟ್ಟದ ಶಿಕ್ಷಣ ನೀಡುತ್ತಿರುವುದರಿಂದ ಮಕ್ಕಳು ಸರ್ಕಾರಿ ಶಾಲೆಗಳಿಗೆ ಹೆಚ್ಚಿನ ಆಧ್ಯತೆ ನೀಡುತ್ತಿದ್ದಾರೆ. ಸರ್ಕಾರಿ ಶಾಲೆಗಳಲ್ಲಿ ಓದುತ್ತಿರುವ ಮಕ್ಕಳಿಗೆ ಉಜ್ವಲ ಭವಿಷ್ಯ ನೀಡುವ ಸಂಬಂಧ ಶಿಕ್ಷಕ ವೃಂದವು ಮಕ್ಕಳ ವೈಯಕ್ತಿಕ ಕಾಳಜಿವಹಿಸಿ ಸಹಕರಿಸುತ್ತಿರುವುದು ಪ್ರಶಂಸನೀಯ. ಅದರಲ್ಲೂ ಮೂಡಲಗಿ ವಲಯವೊಂದರಲ್ಲಿಯೇ 37 ಸಾವಿರ ವಿದ್ಯಾರ್ಥಿಗಳು ಅಧ್ಯಯನ ಮಾಡುತ್ತಿರುವುದು ರಾಜ್ಯದಲ್ಲಿಯೇ ಮೈಲುಗಲ್ಲಾಗಿದೆ. ಮುಂದಿನ ದಿನಗಳಲ್ಲಿ ವಿದ್ಯಾರ್ಥಿಗಳ ಅನುಕೂಲಕ್ಕಾಗಿ ವಸತಿ ನಿಲಯಗಳನ್ನು ಸರ್ಕಾರದಿಂದ ಮಂಜೂರು ಮಾಡಿಸುವ ಭರವಸೆಯನ್ನು ಶಾಸಕ ಬಾಲಚಂದ್ರ ಜಾರಕಿಹೊಳಿ ಅವರು ನೀಡಿದರು.

ಅರಭಾವಿ ಪಟ್ಟಣ ಪಂಚಾಯತಿಗೆ ವಸತಿ ಯೋಜನೆಗೆ ಅರ್ಹ ಫಲಾನುಭವಿಗಳನ್ನು ಆಯ್ಕೆ ಮಾಡಲಾಗುವುದು. ಅರ್ಹ ಕುಟುಂಬಗಳಿಗೆ ಮನೆಗಳನ್ನು ನಿರ್ಮಿಸಿಕೊಡುವುದಾಗಿ ತಿಳಿಸಿದರು.

ಅರಭಾವಿ ಪಟ್ಟಣ ಪಂಚಾಯತಿ ಅಧ್ಯಕ್ಷೆ ಪದ್ಮಾವತಿ ದೇವುಗೋಳ, ಉಪಾಧ್ಯಕ್ಷ ರಮೇಶ ಮಾದರ, ತಹಶೀಲ್ದಾರ ಜಿ.ಎಸ್. ಮಳಗಿ, ಘಟಪ್ರಭಾ ಉಪ ಅರಣ್ಯ ಸಂರಕ್ಷಣಾಧಿಕಾರಿ ಡಿ. ದೇವರಾಜ, ಉಪತಶೀಲ್ದಾರ ಲಕ್ಷ್ಮಣ ಭೋವಿ, ಜಿಪಂ ಸದಸ್ಯ ಗೋವಿಂದ ಕೊಪ್ಪದ, ಜಿಪಂ ಮಾಜಿ ಸದಸ್ಯರಾದ ಶಂಕರ ಬಿಲಕುಂದಿ, ವಿಠ್ಠಲ ಸವದತ್ತಿ, ಪರಮೇಶ್ವರ ಹೊಸಮನಿ, ಮುಖಂಡರಾದ ಬಸವಂತ ಕಮತಿ, ಮುತ್ತೆಪ್ಪ ಕುಳ್ಳೂರ, ನಿಂಗಪ್ಪ ಈಳಿಗೇರ, ಮುತ್ತೆಪ್ಪ ಜಲ್ಲಿ, ಭೀಮಶಿ ಹಳ್ಳೂರ, ರಾಯಪ್ಪ ಬಂಡಿವಡ್ಡರ, ಸುನೀಲ ಜಮಖಂಡಿ, ಸಮಾಜ ಕಲ್ಯಾಣ ಇಲಾಖೆಯ ಎಡಿ ಶ್ರೀಶೈಲ ಕಲ್ಲಪ್ಪನವರ, ಮುಖ್ಯಾಧಿಕಾರಿ ಕೆ.ಬಿ. ಬೆಣ್ಣಿ, ವಸತಿ ಶಾಲೆಗಳ ಪ್ರಾಂಶುಪಾಲರಾದ ಆರ್.ವೈ. ಗಂಗರಡ್ಡಿ, ಜಿ.ಎಂ. ಸಕ್ರಿ, ಪರಪ್ಪ ಲಕ್ಕನಗೌಡರ, ಪಪಂ ಸದಸ್ಯರು ಉಪಸ್ಥಿತರಿದ್ದರು.ಕ್ಷೇತ್ರ ಶಿಕ್ಷಣಾಧಿಕಾರಿ ಅಜೀತ ಮನ್ನಿಕೇರಿ ಪ್ರಾಸ್ತಾವಿಕವಾಗಿ ಮಾತನಾಡಿದರು.

Related posts: